ಮಳೆಗಾಲದಲ್ಲಿ ಜೀರ್ಣಕ್ರಿಯೆ ಸಮಸ್ಯೆಯಿಂದ ಕಿರಿಕಿರಯಾಗ್ತಿದ್ಯಾ?; ಈ ನೈಸರ್ಗಿಕ ಚಹಾಗಳು..ಹೊಟ್ಟೆಗೆ ಮದ್ದು ನೋಡಿ..​Herbal teas for digestion

Herbal teas for digestion
Herbal teas for digestion
Published on

ಪ್ರಮುಖ ಮುಖ್ಯಾಂಶಗಳು

  • ​ಮಳೆಗಾಲದಲ್ಲಿ ತೇವಾಂಶ ಮತ್ತು ಬ್ಯಾಕ್ಟೀರಿಯಾದಿಂದ ಜೀರ್ಣಕ್ರಿಯೆ ಸಮಸ್ಯೆಗಳು ಕಾಡೋದು ಸಹಜ
  • ​ಹೊಟ್ಟೆಯ ಅಸ್ವಸ್ಥತೆ ಮತ್ತು ಗ್ಯಾಸ್ ಸಮಸ್ಯೆಗೆ ಹರ್ಬಲ್ ಚಹಾ ರಾಮಬಾಣ
  • ​ಶುಂಠಿ, ಪುದೀನಾ, ಸೋಂಪು, ದಾಲ್ಚಿನ್ನಿ ಮತ್ತು ತುಳಸಿ ಚಹಾದ ಅದ್ಭುತ ಪ್ರಯೋಜನಗಳು.

​Herbal Teas For Digestion:

ಮುಂಗಾರು ಬೇಸಿಗೆಯಿಂದ ಮುಕ್ತಿ ಕೊಡಿಸಿದರೂ ಸಹ ಆನೇಕ ಆರೋಗ್ಯ ಸಮಸ್ಯೆಗಳನ್ನು ದೇಹಕ್ಕೆ ತಂದೊಡ್ಡುತ್ತದೆ. ಗಾಳಿಯಲ್ಲಿ ಕಣ್ಣಿಗೆ ಕಾಣದಂತೆ ಇರುವ ಸೂಕ್ಷ್ಮ ಜೀವಿಗಳು ಒಂದೆಡೆ ಕೆಮ್ಮು, ನೆಗಡಿ, ಜ್ವರದಂರತಹ ಸಮಸ್ಯೆಗೆ ಒಡ್ಡಿಕೊಳ್ಳುವಂತೆ ಮಾಡಿದರೆ, ಮತ್ತೊಂದು ಕಡೆ ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಯನ್ನು ಮಾಡುತ್ತದೆ. ಇನ್ನೂ ಎಣ್ಣೆಯುಕ್ತ ಆಹಾರ ಸೇವನೆ ಮಾಡಿದರೆ ಮುಗಿತು ಜೀರ್ಣಿಸಿಕೊಳ್ಳಲು ಹೆಣಗಾಡಬೇಕು.

ಹೀಗಾಗಿ ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡಿದಾಗ, ಇದರಿಂದ ಮುಕ್ತಿ ಪಡೆದುಕೊಳ್ಳಲು ಹೊಟ್ಟೆಗೆ ಹಾಯೆನಿಸುವಂತಹ ಬಿಸಿ ಬಿಸಿ ಸಸ್ಯಜನ್ಯ ಚಹಾಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸಲು ನೆರವಾಗುವ ಆರು ಅತ್ಯುತ್ತಮ ಚಹಾಗಳು ಇಲ್ಲಿವೆ.
​ಈ ಎಲ್ಲಾ ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಮತ್ತು ಹೊಟ್ಟೆಗೆ ಹಾಯೆನಿಸುವಂತೆ ಮಾಡಲು ಕೆಲವು ಬಿಸಿ ಬಿಸಿ ಸಸ್ಯಜನ್ಯ ಚಹಾಗಳು ಅತ್ಯಂತ ಪರಿಣಾಮಕಾರಿ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಮಳೆಗಾಲದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸಲು ನೆರವಾಗುವ ಆರು ಅತ್ಯುತ್ತಮ ಚಹಾಗಳು ಇಲ್ಲಿವೆ.

​ಪುದೀನಾ ಚಹಾ

ಪುದೀನಾದಲ್ಲಿರುವ ಮೆಂಥಾಲ್ ಜೀರ್ಣಾಂಗ ವ್ಯವಸ್ಥೆಯ ಸ್ನಾಯುಗಳನ್ನು ಸಡಿಲಗೊಳಿಸಲು ಉತ್ತೇಜಿಸುತ್ತದೆ. ಅಜೀರ್ಣ ಅಥವಾ ಗ್ಯಾಸ್ಟ್ರಿಕ್​ ಸಮಸ್ಯೆ ಕಾಣಿಡಿಸಕೊಂಡರೆ ಈ ಪುದೀನ ಚಹ ಒಂದು ಮದ್ದಿನಂತೆ ಕೆಲಸ ಮಾಡುತ್ತದೆ. ಊಟದ ನಂತರ ಒಂದು ಕಪ್ ಪುದೀನಾ ಚಹಾ ಕುಡಿಯುವುದರಿಂದ ಹೊಟ್ಟೆಗೆ ರಿಲ್ಯಾಕ್ಸ್ ಸಿಗುತ್ತದೆ.

​ಶುಂಠಿ ಚಹಾ

ಶುಂಠಿಯು ಜೀರ್ಣಾಂಗಕ್ಕೆ ಕಾಡುವ ಅನೇಕ ಸಮಸ್ಯೆಗಳಿಗೆ ನೈಸರ್ಗಿಕ ಮದ್ದು. ಇದರ ಉಷ್ಣ ಗುಣವು ಜೀರ್ಣಕ್ರಿಯೆಯನ್ನು ಉತ್ತೇಜಿಸುವುದಲ್ಲದೆ, ಅನಿಲ ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಿಸಿನೀರಿನಲ್ಲಿ ತಾಜಾ ಶುಂಠಿ ಹೋಳುಗಳನ್ನು ಕುದಿಸಿ, ರುಚಿಗೆ ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಕುಡಿಯುವುದರಿಂದ ಹೊಟ್ಟೆ ಹಾಯೆನಿಸುವ ಸಾಧ್ಯತೆ ಇರುತ್ತದೆ.

​ಸೋಂಪು ಕಾಳಿನ ಚಹಾ

ಜಜ್ಜಿದ ಸೋಂಪು ಕಾಳುಗಳನ್ನು ನೀರಿನಲ್ಲಿ ಕುದಿಸಿ ತಯಾರಿಸುವ ಈ ಚಹಾವು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಿ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೆ, ಬಾಯಿಯ ದುರ್ವಾಸನೆಯನ್ನು ತಡೆಯಲು ಇದು ಸಹಕಾರಿ.

​ದಾಲ್ಚಿನ್ನಿ ಚಹಾ

ದಾಲ್ಚಿನ್ನಿಯು ಉರಿಯೂತ ನಿವಾರಕ ಮತ್ತು ಸೂಕ್ಷ್ಮಾಣು ಜೀವಿ ವಿರೋಧಿ ಗುಣಗಳನ್ನು ಹೊಂದಿದ್ದು, ಹೊಟ್ಟೆಯನ್ನು ಹಿತವಾಗಿರಿಸುತ್ತದೆ. ನೀರಿನಲ್ಲಿ ದಾಲ್ಚಿನ್ನಿ ಚಕ್ರವನ್ನು ಕುದಿಸಿ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ಮಳೆಗಾಲದ ಚಳಿಗೆ ಮೈಗೆ ಬೆಚ್ಚಗಿನ ಅನುಭವ ನೀಡುತ್ತದೆ.

​ತುಳಸಿ ಚಹಾ

ಭಾರತದಲ್ಲಿ ತುಳಸಿಗೆ ಹೆಚ್ಚಿನ ಧಾರ್ಮಿಕ ಹಾಗೂ ಔಷಧೀಯ ಮಹತ್ವವಿದೆ. ಇದು ಜೀರ್ಣಕಾರಿ, ಬ್ಯಾಕ್ಟೀರಿಯಾ ವಿರೋಧಿ ಹಾಗೂ ರೋಗನಿರೋಧಕ ಗುಣಗಳನ್ನು ಹೊಂದಿದೆ. ತಾಜಾ ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೋಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಜೀರ್ಣಾಂಗದ ಸಮಸ್ಯೆಗಳು ದೂರವಾಗುತ್ತವೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net