ಖ್ಯಾತ ಪೌಷ್ಟಿಕಾಂಶ ತಜ್ಞರಾದ ರೂಪಾಲಿ ದತ್ತಾ ಅವರ ಪ್ರಕಾರ, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಈರುಳ್ಳಿಗೆ ದೇಹವನ್ನು ತಂಪಾಗಿಸುವ ಗುಣವಿದೆ ಎಂದು ಹೇಳಲಾಗುತ್ತದೆ. ಹಸಿ ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶ (Water Content) ಇರುವುದರಿಂದ, ಬೇಸಿಗೆಯಲ್ಲಿ ಅತಿಯಾದ ಬೆವರಿನಿಂದ ದೇಹದ ನೀರಂಶ ಕಡಿಮೆಯಾಗದಂತೆ ತಡೆಯಲು ಇದು ಸಹಕಾರಿಯಾಗಿದೆ. ಇದಲ್ಲದೆ, ಈರುಳ್ಳಿಯಲ್ಲಿ 'ಕ್ವೆರ್ಸೆಟಿನ್' (Quercetin) ಎಂಬ ಶಕ್ತಿಶಾಲಿ ಆ್ಯಂಟಿ-ಆಕ್ಸಿಡೆಂಟ್ ಹಾಗೂ ಪ್ರೀಬಯಾಟಿಕ್‌ಗಳು ಸಮೃದ್ಧವಾಗಿವೆ. ಆದರೆ, ನೆನಪಿರಲಿ, ಹಸಿ ಈರುಳ್ಳಿ ಕೇವಲ ದೇಹದ ಪೋಷಕಾಂಶಗಳನ್ನು ಹೆಚ್ಚಿಸಬಲ್ಲದೇ ಹೊರತು, ಇದು ಹೀಟ್‌ಸ್ಟ್ರೋಕ್‌ಗೆ ಯಾವುದೇ ಮ್ಯಾಜಿಕಲ್ ಔಷಧಿಯಲ್ಲ. ಧಾರಾಳವಾಗಿ ನೀರು ಕುಡಿಯುವುದಕ್ಕೆ ಇದು ಪರ್ಯಾಯವಲ್ಲ.