ಪರಿ ಡೆಂಟಲ್ ಕೇರ್ ವತಿಯಿಂದ ಉಚಿತ ದಂತ ತಪಾಸಣೆ

ಬಾಲಾಜಿ ಹೆಸರಿನವರ ಹೆಚ್ಚು ತಪಾಸಣೆಯ ದಾಖಲೆ
MLC T.A. Sharavana, S.E. Sudhindra, and Dr. Vaishnavi inaugurated a free dental check-up camp organized by Pari Dental Care. Dr. Anusha R. Gupta and others were present.
ಪರಿ ಡೆಂಟಲ್ ಕೇರ್ ವತಿಯಿಂದ ಆಯೋಜಿಸಿದ್ದ ಉಚಿತ ದಂತ ತಪಾಸಣೆ ಶಿಬಿರಕ್ಕೆ ಎಂಎಲ್‌ಸಿ ಟಿ.ಎ.ಶರವಣ, ಎಸ್.ಇ.ಸುಧೀಂದ್ರ , ಡಾ.ವೈಷ್ಣವಿ ಚಾಲನೆ ನೀಡಿದರು. ಡಾ. ಅನುಷಾ ಆರ್.ಗುಪ್ತ ಮತ್ತಿತರರು ಉಪಸ್ಥಿತರಿದ್ದರು.
Published on: 

ಬೆಂಗಳೂರು : ನಗರದ ಎಚ್‌ಎಸ್‌ಆರ್ ಲೇಔಟ್‌ನ ಪರಿ ಡೆಂಟಲ್ ಕೇರ್ ಹಾಗೂ ಬಾಲಾಜಿ ವೆಲ್ಕಮ್ ಇಂಟರ್‌ನ್ಯಾಷನಲ್ (ಬಿಡಬ್ಲ್ಯೂಐ) ಸಹಯೋಗದಲ್ಲಿ ಭಾನುವಾರ ಉಚಿತ ದಂತ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಒಂದೇ ಸ್ಥಳದಲ್ಲಿ ಅತಿ ಹೆಚ್ಚು ‘ಬಾಲಾಜಿ’ ಹೆಸರಿನ ವ್ಯಕ್ತಿಗಳಿಗೆ ದಂತ ತಪಾಸಣೆ ನಡೆಸುವ ಮೂಲಕ ಕಾರ್ಯಕ್ರಮವು ಅಂತರರಾಷ್ಟ್ರೀಯ ದಾಖಲೆಗೂ ಪಾತ್ರವಾಯಿತು.

ಪರಿ ಡೆಂಟಲ್ ಕೇರ್ ಮುಖ್ಯಸ್ಥೆ ಡಾ. ಅನುಷಾ ಆರ್.ಗುಪ್ತ ಅವರ ನೇತೃತ್ವದಲ್ಲಿ ನಡೆದ ಶಿಬಿರದ ವಿಶೇಷ ಸಾಧನೆಯು ಸೂಪರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇಂಟರ್‌ನ್ಯಾಷನಲ್ ದಾಖಲೆಯಲ್ಲಿ ಸ್ಥಾನ ಪಡೆಯಿತು. ಈ ಮೂಲಕ ಸಾಮಾಜಿಕ ಸೇವೆಯ ಜತೆಗೆ ವಿಶಿಷ್ಟ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ಕಾರ್ಯಕ್ರಮದ್ದಾಗಿದೆ.

ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ದಂತ ತಪಾಸಣೆ ನಡೆಸಿ, ಬಾಯಿಯ ಆರೋಗ್ಯದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು. ರಕ್ತದಾನದ ಮೂಲಕ ಮಾನವೀಯತೆ ಮತ್ತು ಸಮಾಜಸೇವೆಯ ಸಂದೇಶ ಸಾರಲಾಯಿತು. ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದು, ವೈದ್ಯರು, ಆರೋಗ್ಯ ಸಿಬ್ಬಂದಿ, ಸ್ವಯಂಸೇವಕರು, ರಕ್ತದಾನಿಗಳು ಹಾಗೂ ಸಂಘಟಕರ ಸಹಕಾರದಿಂದ ಶಿಬಿರ ಯಶಸ್ವಿಯಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಇ. ಸುಧೀಂದ್ರ ಹಾಗೂ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ. ವೈಷ್ಣವಿ ಮತ್ತಿತರರು ಪಾಲ್ಗೊಂಡಿದ್ದರು.