ಊಟದ ನಂತರ ಸೋಂಪು ಏಕೆ ತಿನ್ನುತ್ತಾರೆ ಗೊತ್ತೇ? ಇದರ ಹಿಂದಿರುವ ಆರೋಗ್ಯ ರಹಸ್ಯ ತಿಳಿಯಿರಿ..fennel seeds

fennel seeds
fennel seeds
Published on
ಬೆಂಗಳೂರು : ( fennel seeds) ಊಟವಾದ ತಕ್ಷಣ ಸೋಂಪು ತಿನ್ನುವುದು ನಮ್ಮ ಭಾರತೀಯ ಸಂಪ್ರದಾಯದ ಒಂದು ಭಾಗವಾಗಿ ಮುಂದುವರೆದಿದೆ. ಇದು ಬಾಯಿಯನ್ನು ತಾಜಾವಾಗಿರಿಸುವುದು ಮಾತ್ರವಲ್ಲದೆ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಊಟದ ನಂತರ ಸೋಂಪು (Fennel Seeds) ಸೇವಿಸುವುದು ಕೇವಲ ಒಂದು ಸಂಪ್ರದಾಯವಲ್ಲ, ಇದರ ಹಿಂದೆ ಬಲವಾದ ವೈಜ್ಞಾನಿಕ ಮತ್ತು ಆರೋಗ್ಯದ ಕಾರಣಗಳಿವೆ. ಈ ಕುರಿತಾಗಿ ನಾವು ಇಂದು ತಿಳಿದುಕೊಳ್ಳೋಣ..
ಜೀರ್ಣಕ್ರಿಯೆಗೆ ಸಹಕಾರಿ: ಸೋಂಪಿನಲ್ಲಿ ಕೆಲವು ಅವಶ್ಯಕ ಎಣ್ಣೆ ಅಂಶಗಳು (Essential oils) ಇರುತ್ತವೆ. ಇವು ಹೊಟ್ಟೆಯಲ್ಲಿ ಜೀರ್ಣಕಾರಿ ರಸಗಳನ್ನು ಪ್ರಚೋದಿಸುತ್ತವೆ. ಇದರಿಂದ ನಾವು ತಿಂದ ಆಹಾರ ಸುಲಭವಾಗಿ ಮತ್ತು ವೇಗವಾಗಿ ಜೀರ್ಣವಾಗುತ್ತದೆ.
ಗ್ಯಾಸ್ ಮತ್ತು ಅಸಿಡಿಟಿ ನಿಯಂತ್ರಣ : ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಸಮಸ್ಯೆಯನ್ನು ತಡೆಯುವ ಶಕ್ತಿ ಸೋಂಪಿಗಿದೆ. ಇದರಲ್ಲಿರುವ ಆಂಟಿ-ಇನ್ಫ್ಲಮೇಟರಿ ಗುಣಗಳು ಜೀರ್ಣಾಂಗವ್ಯೂಹದ ಸ್ನಾಯುಗಳನ್ನು ಸಡಿಲಗೊಳಿಸಿ ಆರಾಮ ನೀಡುತ್ತವೆ.
ಬಾಯಿಯ ದುರ್ವಾಸನೆ : ಸೋಂಪು ಅತ್ಯುತ್ತಮ 'ಮೌತ್ ಫ್ರೆಶ್ನರ್' ಆಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ ಮತ್ತು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಿ ತಾಜಾತನ ನೀಡುತ್ತವೆ.
ರಕ್ತದೊತ್ತಡ ನಿಯಂತ್ರಣ: ಸೋಂಪಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
ಕಣ್ಣಿನ ಆರೋಗ್ಯಕ್ಕೆ ಉತ್ತಮ : ಸೋಂಪಿನಲ್ಲಿ ವಿಟಮಿನ್ 'A' ಅಂಶವಿರುವುದರಿಂದ ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಕೂಡ ಸಹಕಾರಿ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net