More

    ಕೇಂದ್ರ ಬಜೆಟ್ 2020; ವೈದ್ಯಕೀಯ ಆಮದು ಉಪಕರಣಗಳ ಮೇಲೆ ಸೆಸ್​, ಮೇಕ್​ ಇನ್​ ಇಂಡಿಯಾಗೆ ಒತ್ತು ನೀಡಲು ಕ್ರಮ ಎಂದ ಸಚಿವೆ

    ನವದೆಹಲಿ: ಸ್ಥಳೀಯವಾಗಿ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಒತ್ತು ಕೊಟ್ಟಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಹೊರ ದೇಶಗಳಿಂದ ಬರುವ ಉಪಕರಣಗಳಿಗೆ ಅಲ್ಪ ಮೊತ್ತದ ಸೆಸ್​ ವಿಧಿಸಿದ್ದಾರೆ.

    ಕೆಲ ವರ್ಷಗಳ ಹಿಂದೆ ಭಾರತವು ಕೇವಲ ಹೊರ ದೇಶದ ವೈದ್ಯಕೀಯ ಉಪಕರಣಗಳ ಮೇಲೆ ಅವಲಂಬಿತವಾಗಿತ್ತು. ಆದರೆ ಈಗ ಸ್ಥಳಿಯವಾಗಿ ಉತ್ಪಾದಿಸುವುದು ಅಲ್ಲದೆ, ಇಲ್ಲಿಂದ ನಾವು ಹೊರ ದೇಶಗಳಿಗೆ ಹೆಚ್ಚು ಪ್ರಮಾಣದಲ್ಲಿ ರವಾನಿಸುತ್ತಿದ್ದೇವೆ ಎಂದು ತಿಳಿಸಿದರು.

    ವೈದ್ಯಕೀಯ ಉಪಕರಣಗಳ ಉತ್ಪಾದನೆ ಮಾಡುತ್ತಿರುವ ಉದ್ಯಮಗಳಿಗೆ ಹೆಚ್ಚು ಒತ್ತು ಕೊಡುವ ಅವಶ್ಯವಿದೆ ಎಂದು ಅಭಿಪ್ರಾಯ ಪಟ್ಟ ಅವರು, ಆಯುಷ್ಮಾನ್​ ಭಾರತ ಯೋಜನೆಯಿಂದ ಉಪಕರಣಗಳ ಉತ್ಪಾದನೆ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದರು.

    ವೈದ್ಯಕೀಯ ಉಪಕರಣಗಳ ಮೇಲಿನ ಸೆಸ್​ ಹೆಚ್ಚಳದಿಂದ ಎರಡು ಉಪಯೋಗಗಳಿವೆ. ಮೊದಲನೇಯದು ಸೆಸ್​ ಹೆಚ್ಚಳದಿಂದ ಅಮದು ಪ್ರಮಾಣ ಕುಗ್ಗಲಿದೆ. ಎರಡನೆಯದು ಸ್ಥಳೀಯವಾಗಿ ಉಪಕರಣಗಳ ಉತ್ಪಾದನೆಗೆ ಅವಕಾಶ ಹೆಚ್ಚಲಿದೆ. ಅಲ್ಲದೆ ಈ ನಡೆ ದೇಶದಲ್ಲಿ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಳವಾಗಬೇಕು ಎಂಬ ಆಶಯ ಎಂದರು.

    ಈ ಸೆಸ್‌ನಿಂದ ಬರುವ ಆದಾಯವನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ನೀಡಲು ಮೂಲಸೌಕರ್ಯಗಳನ್ನು ಒದಗಿಸಲು ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ನಮ್ಮ ಯೋಜನೆ “ಮೇಕಿಂಗ್​ ಇಂಡಿಯಾ” ಈಗ ಫಲ ನೀಡಲಾರಂಭಿಸಿದೆ. ಈ ಯೋಜನೆಯಿಂದಾಗಿ ಗುಣಮಟ್ಟದ ವಸ್ತುಗಳ ಉತ್ಪಾದನೆಯಾಗುತ್ತಿರುವುದು ಅಲ್ಲದೆ ಅವುಗಳನ್ನು ರಪ್ತು ಕೂಡ ಮಾಡಲಾಗುತ್ತಿದೆ ಎಂದು ಸೀತಾರಾಮನ್​ ತಿಳಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts