More

    VIDEO: ಕಳೆದ ಬಾರಿ ‘ಸರ್ಜಿಕಲ್​ ಸ್ಟ್ರೈಕ್’ ಮಾಡಿದ್ದ ನಟ ವಿಕ್ಕಿ ಕೌಶಾಲ್ ಈ ಬಾರಿ ತೆರೆಗೆ ಬರುವುದು ‘ಭೂತ’ದೊಟ್ಟಿಗೆ…

    ಮುಂಬೈ: ಕಳೆದ ವರ್ಷ ಉರಿ-ದಿ ಸರ್ಜಿಕಲ್​ ಸ್ಟ್ರೈಕ್​ ಮೂಲಕ ವೀಕ್ಷಕರಲ್ಲಿ ವಿಸ್ಮಯ ಮೂಡಿಸಿ, ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದ ನಟ ವಿಕ್ಕಿ ಕೌಶಾಲ್​ ಈಗ ಮತ್ತೊಮ್ಮೆ ತೆರೆಯ ಮೇಲೆ ಬರಲು ಸಿದ್ಧರಾಗಿದ್ದಾರೆ. ಆದರೆ ಈ ಬಾರಿ ಅವರು ಸಿನಿ ಪ್ರಿಯರಲ್ಲಿ ಭಯ ಹುಟ್ಟಿಸಲಿದ್ದಾರೆ ಎಂಬುದು ಗೊತ್ತಾಗುತ್ತಿದೆ.

    ವಿಕ್ಕಿ ಕೌಶಾಲ್ ಅವರ ಮುಂದಿನ ಸಿನಿಮಾ ಭೂತ್​ ಪಾರ್ಟ್​-1: ದಿ ಹಂಟೆಡ್​ ಶಿಪ್​ ನ ಅಧಿಕೃತ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಇದೊಂದು ದೆವ್ವದ ಸಿನಿಮಾ ಎಂಬುದು ಇತ್ತೀಚೆಗೆ ಬಿಡುಗಡೆಯಾಗಿದ್ದ ಟೀಸರ್​ ನಿಂದಲೇ ಗೊತ್ತಾಗಿತ್ತು.

    ಇದೀಗ ಬಿಡುಗಡೆಯಾದ 2 ನಿಮಿಷ 52 ಸೆಕೆಂಡ್​ಗಳ ಟ್ರೇಲರ್​ನಲ್ಲಿ ವಿಕ್ಕಿ ಕೌಶಾಲ್​ ಅವರು ಕತ್ತಲಲ್ಲಿ, ಮುಂಬೈನ ಜುಹು ಬೀಚ್​ನಲ್ಲಿ ನಿಂತಿರುವ ಸೀ ಬರ್ಡ್​ ಎಂಬ ಹೆಸರಿನ ಪಾಳು ಬಿದ್ದ ಹಡಗನ್ನು ಪ್ರವೇಶಿಸುವುದನ್ನು ನೋಡಬಹುದು. ಜ.30ರಂದು ಬಿಡುಗಡೆಯಾಗಿದ್ದ 58 ಸೆಕೆಂಡ್​ಗಳ ಟೀಸರ್​ನಲ್ಲೂ ಕೂಡ ವಿಕ್ಕಿ ಕೌಶಾಲ್​ ಕತ್ತಲಲ್ಲಿ ಟಾರ್ಚ್​ ಹಿಡಿದು ಓಡಾಡುತ್ತಿರುವ ದೃಶ್ಯವನ್ನು ನೋಡಬಹುದು.

    ಭೂತ್​ ಸಿನಿಮಾದಲ್ಲಿ ವಿಕ್ಕಿ ಅವರು ಸೀ ಬರ್ಡ್​ನ ಸರ್ವೇ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಅವರ ಹೆಸರು ಪೃಥ್ವಿ ಎಂದು.

    ವಿಕ್ಕಿ ಕೌಶಾಲ್​ ಟ್ರೇಲರ್​ನ್ನು ತಮ್ಮ ಇನ್ಸ್ಟಾಗ್ರಾಂನಲ್ಲೂ ಶೇರ್​ ಮಾಡಿಕೊಂಡಿದ್ದಾರೆ. ಈ ಸಿನಿಮಾವನ್ನು ಭಾನು ಪ್ರತಾಪ್ ಸಿಂಗ್ ನಿರ್ದೇಶಿಸಿದ್ದು ಕರಣ್ ಜೋಹರ್​, ಹೀರೂ ಜೋಹರ್​, ಅಪೂರ್ವಾ ಮೆಹ್ತಾ ಹಾಗೂ ಶಶಾಂಕ್ ಖೈತಾನ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

    ನಾಯಕಿಯಾಗಿ ಭೂಮಿ ಫೆಡ್ನೆಕರ್​ ಅಭಿನಯಿಸಿದ್ದು ಫೆ.21ರಂದು ಸಿನಿಮಾ ಬಿಡುಗಡೆಯಾಗಲಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts