More

    ಜನಜಾಗೃತಿ ಮೂಡಿಸಿದ ಎನ್‌ಎಸ್‌ಎಸ್ ಶಿಬಿರ

    ಹಾವೇರಿ: ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡುವ ಮೂಲಕ ಜನರಿಗೆ ಸ್ವಚ್ಛತೆ, ಧೂಮಪಾನ ನಿಷೇಧ, ಶಿಕ್ಷಣದ ಅರಿವು, ಶೌಚಗೃಹದ ಬಳಕೆಯ ಮಹತ್ವದ ಕುರಿತು ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಅರಿವು ಮೂಡಿಸಿದ್ದಾರೆ ಎಂದು ಯಲಗಚ್ಚ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ಕುಂಬಾರಿ ಹೇಳಿದರು.
    ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಜನಜೀವನ ಹಾಗೂ ಕಷ್ಟ-ಸುಖಗಳನ್ನು ತಿಳಿಯಬೇಕಾದರೆ ಇಂತಹ ಕಾರ್ಯಕ್ರಮದಲ್ಲಿ ಪಾಲಗೊಳ್ಳುವುದು ಅಗತ್ಯ. ಇದರಿಂದ ಗ್ರಾಮೀಣ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ಅವರು ಅರಿತುಕೊಳ್ಳಲು ಅನುಕೂಲವಾಗುವುದು ಎಂದು ಹೇಳಿದರು.
    ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀನಿಧಿ ದೇಶಪಾಂಡೆ ಮಾತನಾಡಿದರು. ಪ್ರಾಚಾರ್ಯ ಡಾ.ಅರುಣಕುಮಾರ ಪಿ.ಜೆ. ಅಧ್ಯಕ್ಷತೆ ವಹಿಸಿದ್ದರು.
    ಶಿಬಿರಾಧಿಕಾರಿ ಪ್ರಕಾಶ ಬಾರಕೇರ, ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಚನ್ನಬಸನಗೌಡ ವಗ್ಗಣ್ಣನವರ, ಗಜಾನನ ಯುವಕ ಸಂಘದ ಅಧ್ಯಕ್ಷ ಬ್ರಹ್ಮಾನಂದ ಹಳೇರಿತ್ತಿ, ನೃತ್ಯ ಕಲಾವಿದ ಫಕ್ಕೀರೇಶ, ಗ್ರಾ.ಪಂ. ಸದಸ್ಯರಾದ ಗುಡ್ಡಪ್ಪ ನಿಂಗಣ್ಣನವರ, ನೀಲಪ್ಪ ಕುರಿಯವರ, ರವಿ ಮೆಣಸಿನಕಾಯಿ, ಬಸವರಾಜ ಹೊಸಮನಿ, ಲೋಹಿತ ಹಳೇರಿತ್ತಿ, ಜಾನಪದ ಕಲಾವಿದ ನಿಂಗಪ್ಪ ಗೌರಾಪುರ, ಉಮೇಶ ದಶಮನಿ, ಸತೀಶ ಸಾಕಾರೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಆಸಿಫ್ ಮುಲ್ಲಾ, ಮಲ್ಲೇಶಪ್ಪ ಉಡಚಮ್ಮನವರ, ರುದ್ರಪ್ಪ ಮೆಣಸಿನಕಾಯಿ, ಮೂಕಪ್ಪ ದೇಸಾಹಳ್ಳಿ, ವೀರಣ್ಣ ಮೆಣಸಿನಕಾಯಿ, ನಾಗೇಂದ್ರ ಭಜಂತ್ರಿ, ಉಪನ್ಯಾಸಕರಾದ ರುದ್ರಯ್ಯ ಹಿರೇಮಠ, ಲಲಿತಾ ನರಗುಂದ, ಬಸವರಾಜ ಕರಿಸಣ್ಣವರ, ಸ್ವರಸ್ವತಿ ತಗಡಿನಮನಿ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts