More

    ಬಾಲಕಿ ಅತ್ಯಾಚಾರ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ

    ಹಾವೇರಿ: ಫೋನ್ ಕರೆಯ ಮೂಲಕ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪರಿಚಯಿಸಿಕೊಂಡು, ಪುಸಲಾಯಿಸಿ ಪ್ರೀತಿಯ ನಾಟಕವಾಡಿ ಮದುವೆ ಆಗುವುದಾಗಿ ನಂಬಿಸಿ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್‌ವೊಂದರಲ್ಲಿ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1.60 ಲಕ್ಷ ರೂ. ದಂಡ ವಿಧಿಸಿ ಇಲ್ಲಿನ ವಿಶೇಷ ಸತ್ರ ನ್ಯಾಯಾಲಯ (ಶೀಘ್ರಗತಿ ನ್ಯಾಯಾಲಯ- 1) ಶುಕ್ರವಾರ ತೀರ್ಪು ನೀಡಿದೆ.
    ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಉದ್ರಿ ವಡ್ಡಿಗೇರಿ ಗ್ರಾಮದ ಚಂದ್ರಪ್ಪ ಈರಪ್ಪ ಗಂಗಳ್ಳೇರ (42) ಶಿಕ್ಷೆಗೀಡಾದ ಅಪರಾಧಿ.
    ಬಾಲಕಿ ಅಪ್ರಾಪ್ತೆ ಎಂಬ ವಿಷಯ ಗೊತ್ತಿದ್ದರೂ ಚಂದ್ರಪ್ಪ ಆಕೆಯನ್ನು ಹೇಗೋ ಫೋನ್ ಮೂಲಕ ಪರಿಚಯ ಮಾಡಿಕೊಂಡಿದ್ದ. ಪ್ರೀತಿಸುವ ನಾಟಕವಾಡಿ, ಪುಸಲಾಯಿಸಿ ಮದುವೆ ಆಗುವುದಾಗಿ ನಂಬಿಸಿದ್ದ. ಜುಲೈ 18, 2020ರಂದು ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಚಿಕ್ಕಮಂಗಳೂರು ಹಾಗೂ ಸಕಲೇಶಪುರದ ಬಳಿ ಕಾಫಿ ಎಸ್ಟೇಟ್‌ನ ಮನೆಯಲ್ಲಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ನಿರಂತರವಾಗಿ ಲೈಂಗಿಕ ಅತ್ಯಾಚಾರ ಮಾಡಿದ್ದ ಎಂದು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಬ್ಯಾಡಗಿ ವೃತ್ತದ ಅಂದಿನ ಸಿಪಿಐ ಬಸವರಾಜ ಪಿ.ಎಸ್. ತನಿಖೆ ಮಾಡಿ, ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
    ವಿಚಾರಣೆ ನಡೆಸಿದ ಹಾವೇರಿ ವಿಶೇಷ ಸತ್ರ ನ್ಯಾಯಾಲಯ (ಶೀಘ್ರಗತಿ ನ್ಯಾಯಾಲಯ- 1)ದ ನ್ಯಾಯಾಧೀಶರಾದ ನಿಂಗೌಡ ಪಾಟೀಲ ಅವರು, ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ 1.60 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ದಂಡದ ಮೊತ್ತದಲ್ಲಿ ನೊಂದ ಬಾಲಕಿಗೆ 1.50 ಲಕ್ಷ ರೂ. ಪರಿಹಾರವನ್ನು ಹಾಗೂ ರಾಜ್ಯ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಪರಿಹಾರ ನಿಧಿಯಿಂದ ಬಾಲಕಿಗೆ 4 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
    ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿಜಯಕುಮಾರ ಪಾಟೀಲ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts