More

    ಕಾಂಗ್ರೆಸ್ ವಿರುದ್ಧ 22ರಂದು ಚಲೋ ಹೈದರಾಬಾದ್; ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ

    ಹಾವೇರಿ: ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಗಳನ್ನು ಖಂಡಿಸಿದ್ದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಾಯ್ದೆಗಳನ್ನು ರದ್ದು ಮಾಡುವುದಾಗಿ ಹೇಳಿ ಮರೆತಿರುವುದನ್ನು ಖಂಡಿಸಿ ನ.22ರಂದು ಚಲೋ ಹೈದರಾಬಾದ್ ಕರೆ ನೀಡಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣವರ ಹೇಳಿದರು.
    ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್‌ನವರು ಎಲ್ಲ ಮರೆತುಬಿಟ್ಟಿದ್ದಾರೆ. ಇದರಿಂದ ರೈತರಲ್ಲದವರು ಕೃಷಿ ಭೂಮಿ ಖರೀದಿಸುತ್ತಿದ್ದು, ರೈತರು ಬದುಕು ಕಳೆದುಕೊಳ್ಳುತ್ತಿದ್ದಾರೆ. ಹಣವಂತರು ತೆರಿಗೆ ಉಳಿಸಲು ಭೂಮಿ ಖರೀದಿಸುತ್ತಿದ್ದಾರೆ. ರೈತರ ಪಂಪಸೆಟ್ ನೀಡುವ ಯೋಜನೆ ಕೈಬಿಟ್ಟಿದ್ದಾರೆ ಎಂದರು.
    ತೆಂಗಿನ ಧಾರಣೆ 18,00ರಿಂದ 8,000 ರೂ.ಗೆ ಏರಿದೆ. ಬೆಂಗಳೂರು ಡೈರಿ ಹಾಲಿನ ದರದಲ್ಲಿ 2 ರೂ. ಕಡಿತಗೊಳಿಸಿದೆ. ಪಶು ಆಹಾರದ 2 ರೂ. ಹೆಚ್ಚಳ ಮಾಡಿದೆ. ಕಬ್ಬು ಬೆಳೆಗಾರರಿಗೆ ಎಫ್‌ಆರ್‌ಎಸ್ ಜತೆಗೆ ಎಸ್‌ಎಪಿ ನೀಡಿಲ್ಲ. ಹೀಗೆ ಅನೇಕ ವಿಷಯಗಳಲ್ಲಿ ಹೇಳಿದ್ದೊಂದು ಮಾಡಿದ್ದೊಂದು. ಕಾಂಗ್ರೆಸ್‌ನವರ ಸುಳ್ಳುಗಳನ್ನು ನಂಬಬೇಡಿ ಎಂದು ತೆಲಂಗಾಣದ ರೈತರಿಗೆ ಮನವರಿಕೆ ಮಾಡಲೆಂದು ನ.22ರಂದು ಹೈದರಾಬಾದ್‌ನ ಇಂದಿರಾ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದಲೂ ನೂರಾರು ರೈತರು ಪಾಲ್ಗೊಳ್ಳಲಿದ್ದಾರೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡೂರ, ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ.ಡಿ.ಬಸವರಾಜ, ಜಿಲ್ಲಾ ಉಪಾಧ್ಯಕ್ಷ ಹನುಮಂತಪ್ಪ ದೊಡ್ಡಮನಿ, ನಾಗರಾಜ ಬಳ್ಳಾರಿ, ನಾಗರಾಜ ರಿತ್ತಿಕುರುಬರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts