More

    ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ; ಚುರುಕುಗೊಂಡ ಕೃಷಿ ಚಟುವಟಿಕೆ

    ಹಾವೇರಿ: ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಲ್ಲಿ ಮಂಗಳವಾರ ಹಾಗೂ ಬುಧವಾರ ಜಿಟಿ ಜಿಟಿ ಮಳೆ ಜತೆಗೆ ಅಲ್ಲಲ್ಲಿ ಬಿರುಸಾದ ಮಳೆ ಸುರಿದಿದೆ. ಇದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ರೈತರು ಹೊಲದತ್ತ ಮುಖ ಮಾಡಿದ್ದಾರೆ.
    ಕಳೆದು ಮೂರು ದಿನಗಳಿಂದ ಬಹುತೇಕ ಸೂರ್ಯ ಮರೆಯಾಗಿದ್ದು, ತಂಪಾದ ವಾತಾವರಣ ಸೃಷ್ಟಿಯಾಗಿದೆ. ಜಿಟಿ ಜಿಟಿ ಮಳೆ ಬಿಟ್ಟು ಬಿಡದೇ ಸುರಿಯುತ್ತಿರುವ ಕಾರಣ ಜನ ಮನೆ ಬಿಟ್ಟು ಹೊರ ಬರಲು ಮನಸು ಮಾಡುತ್ತಿಲ್ಲ. ರಸ್ತೆಯಲ್ಲಿ ಜನ, ವಾಹನ ಸಂಚಾರ ಕಡಿಮೆಯಾಗಿದೆ. ಜನ ಛತ್ರಿ, ಸ್ವೆಟರ್, ರೇನ್ ಕೋಟ್ ಧರಿಸಿ ಓಡಾಡುತ್ತಿದ್ದಾರೆ. ರೈತರು ಹೊಲದಲ್ಲಿ ಮಳೆ ನಡುವೆಯೇ ಕೆಲಸದಲ್ಲಿ ನಿರತರಾಗಿದ್ದಾರೆ. ಬೆಳೆಗಳಿಗೆ ಗೊಬ್ಬರ ಸಿಂಪಡಣೆ, ಕಳೆ ಕೀಳುವಲ್ಲಿ ಗಮನ ಹರಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಯಾವುದೇ ಹಾನಿಯಾದ ಕುರಿತು ವರದಿಯಾಗಿಲ್ಲ.
    5.1 ಮಿ.ಮೀ. ಮಳೆ : ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ 5.1 ಮಿ.ಮೀ. ಮಳೆ ಸುರಿದಿದೆ. ಈ ಪೈಕಿ ಹಾನಗಲ್ಲ ತಾಲೂಕಿನಲ್ಲಿ ಅತಿ ಹೆಚ್ಚು 9.7 ಮಿ.ಮೀ. ಮಳೆಯಾಗಿದೆ. ಹಾವೇರಿಯಲ್ಲಿ 5.6 ಮಿ.ಮೀ., ಹಿರೇಕೆರೂರಲ್ಲಿ 5.5 ಮಿ.ಮೀ., ಬ್ಯಾಡಗಿಯಲ್ಲಿ 4.1 ಮಿ.ಮೀ., ಶಿಗ್ಗಾಂವಿಯಲ್ಲಿ 4.0 ಮಿ.ಮೀ., ಸವಣೂರ ಹಾಗೂ ರಟ್ಟಿಯಲ್ಲಿ ತಲಾ 3.2 ಮಿ.ಮೀ., ರಾಣೆಬೆನ್ನೂರಲ್ಲಿ 2.9 ಮಿ.ಮೀ. ಮಳೆಯಾದ ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts