More

    ಫಲ-ಪುಷ್ಪ ಪ್ರದರ್ಶನಕ್ಕೆ ಹುಕ್ಕೇರಿ ಮಠದ ಶ್ರೀ ಚಾಲನೆ; ಕಣ್ಮನ ಸೆಳೆಯುತ್ತಿದೆ ಚಂದ್ರಯಾನ- 3 ಕಲಾಕೃತಿ

    ಹಾವೇರಿ: ಹುಕ್ಕೇರಿಮಠದ ಲಿಂ.ಶಿವಬಸವ ಸ್ವಾಮೀಜಿಯವರ 78ನೇ ಮತ್ತು ಲಿಂ.ಶಿವಲಿಂಗ ಸ್ವಾಮೀಜಿಯವರ 15ನೇ ಪುಣ್ಯ ಸ್ಮರಣೋತ್ಸವದ ನಮ್ಮೂರ ಜಾತ್ರೆಯ ಅಂಗವಾಗಿ ಹುಕ್ಕೇರಿಮಠದ ದಾಸೋಹ ಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು.
    ಸಾವಿರಾರು ಬಗೆಯ ಫಲ-ಪುಷ್ಪಗಳಿಂದ ವಿವಿಧ ಕಲಾಕೃತಿಗಳನ್ನು ತಯಾರಿಸಿ ಪ್ರದರ್ಶನದಲ್ಲಿ ಇಡಲಾಗಿದೆ. ಹೂವಿನ ಆನೆ, ಗೋಡಂಬಿ ಮಾದರಿ ಪೋಟೋ ಪ್ರೇಮ್, ಪತಂಗ, ಗಡಿಯಾರ ಹಾಗೂ ವಿಶೇಷವಾಗಿ ತಯಾರಿಸಿದ ಚಂದ್ರಯಾನ -3 ಪ್ರತಿಕೃತಿ, ಮುಂತಾದ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಇಂದಿನಿಂದ ಜ.20ರ ವರೆಗೆ ಮೂರು ದಿನಗಳ ಕಾಲ ಫಲ-ಪುಷ್ಪ ಪ್ರದರ್ಶನ ಜರುಗಲಿದ್ದು, ಉಚಿತ ಪ್ರವೇಶವಿದೆ ಎಂದು ಆಯೋಜಕರು ತಿಳಿಸಿದರು.
    ಸಮಾರಂಭದಲ್ಲಿ ಅಕ್ಕಿಆಲೂರಿನ ಶ್ರೀ ಶಿವಬಸವ ಸ್ವಾಮೀಜಿ, ಶಾಸಕ ಶ್ರೀನಿವಾಸ ಮಾನೆ, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ ಎಲ್., ಸಹಾಯಕ ನಿರ್ದೇಶಕ ರಂಗಪ್ಪ ಸಿ.ಎನ್., ಬಸವರಾಜ ಬರೆಗಾರ, ಉತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ಕೂಡ್ಲಪ್ಪನವರ, ಆನಂದ ಅಟವಾಳಗಿ, ಕರಬಸಪ್ಪ ಹಲಗಣ್ಣನವರ, ಶಿವಯೋಗಿ ವಾಲಿಶೆಟ್ಟರ, ರಾಚಪ್ಪ ಲಂಬಿ, ಬಿ.ಬಸವರಾಜ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts