More

    ಬ್ಯಾಗವಾದಿ ಎಡೆಯೂರ ಸಿದ್ದಲಿಂಗಶ್ವರ ರಥೋತ್ಸವ ಮಾ.19ರಂದು

    ಹಾನಗಲ್ಲ: ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಮಾ.19ರಂದು ಶ್ರೀ ಎಡೆಯೂರ ಸಿದ್ದಲಿಂಗಶ್ವರ ಸ್ವಾಮಿಯವರ ವಾರ್ಷಿಕ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
    ಡಂಬಳದ ಡಾ.ತೊಂಟಾದರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಉಪ್ಪಣಸಿಯ ಶ್ರೀ ಜಯಬಸವ ಸ್ವಾಮೀಜಿ, ಶ್ರೀ ನಂಜುಂಡ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಯವರ ಸಮ್ಮುಖದಲ್ಲಿ ಉತ್ಸವ ನಡೆಯಲಿದೆ. ವಿವಿಧ ವಾದ್ಯಗಳೊಂದಿಗೆ ರಥೋತ್ಸವ ನಡೆಯಲಿದೆ.
    ಬಳಿಕ ಬ್ಯಾಗವಾದಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ, ದೇವೇಂದ್ರಪ್ಪ ತಿಮ್ಮಾಪುರ ತಬಲಾದೊಂದಿಗೆ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯ ಸಿದ್ದಯ್ಯಸ್ವಾಮಿ ಅವರಿಂದ ವ ಕೀರ್ತನೆ ಹಾಗೂ ಸಿದ್ದಲಿಂಗೇಶ್ವರ ಮಠಕ್ಕೆ ದೇಣಿಗೆ ಕೊಟ್ಟ ಭಕ್ತರಿಗೆ ಸನ್ಮಾನ ಮಾಡಲಾಗುವುದು. ಬುಧವಾರ ಶ್ರೀ ಬಸವಣ್ಣ ದೇವರ ಓಕುಳಿ ಬಂಡಿಯ ಮೆರವಣಿಗೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts