More

    ವಚನ ಸಾಹಿತ್ಯದ ಯುಗ ಪ್ರವರ್ತಕರು ಡಾ.ಫ.ಗು.ಹಳಕಟ್ಟಿ; ಸಾವಿರ ವಚನ ಸಾಹಿತ್ಯ ಹೆಕ್ಕಿ ತೆಗೆದರು; ಡಾ.ಕೆ.ರವೀಂದ್ರನಾಥ

    ಹಾವೇರಿ: ವಚನ ಸಾಹಿತ್ಯದ ಹುಟ್ಟಿಗೆ ಬಸವಣ್ಣನವರು ಕಾರಣರಾದರೆ, ಡಾ.ಫ.ಗು.ಹಳಕಟ್ಟಿಯವರು ಫಕೀರನಂತೆ ತಿರುಗಾಡಿ ಒಂದು ಸಾವಿರ ವಚನಗಳ ಹಸ್ತಪ್ರತಿಗಳನ್ನು ಹೆಕ್ಕಿ ತೆಗೆದು ಸಂರಕ್ಷಿಸಿದರು. 300ಕ್ಕೂ ಅಧಿಕ ಶಿವಶರಣರನ್ನು ಬೆಳಕಿಗೆ ತಂದರು. ಅವರು ವಚನ ಸಾಹಿತ್ಯದ ಯುಗ ಪ್ರವರ್ತಕರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ರವೀಂದ್ರನಾಥ ಹೇಳಿದರು.
    ನಗರದ ಹೊಸಮಠದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೊಸಮಠದ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನ-ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಳಕಟ್ಟಿಯವರು ಆಧುನಿಕ ಕರ್ನಾಟಕದ ಶರಣರು. ಹಿತಚಿಂತಕ ಹೆಸರಿನ ಮುದ್ರಣಾಲಯ ಸ್ಥಾಪಿಸಿ 68 ವಚನ ಕೃತಿಗಳನ್ನು ನಾಡಿಗೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
    ಸಂವಿಧಾನ ಆಶಯಗಳನ್ನು ವಚನಗಳಲ್ಲಿ ನೋಡುತ್ತಿದ್ದ ಅವರು, ತಮ್ಮ ವಕೀಲ ವೃತ್ತಿ ಬಿಟ್ಟು ವಚನಗಳನ್ನು ಸಂಗ್ರಹಿಸುವ ಕಾಯಕದಲ್ಲಿ ತೊಡಗಿಸಿಕೊಂಡರು. ಕನ್ನಡ ಸಾಹಿತ್ಯ ಉಳಿಯಬೇಕಾದರೆ ವಚನ ಸಾಹಿತ್ಯ ಉಳಿಸಬೇಕು ಎಂಬ ನಿಲುವು ಅವರದಾಗಿತ್ತು. ಹಳಕಟ್ಟಿಯವರು ವಚನ ಸಾಹಿತ್ಯ ಯುಗ ಪ್ರವರ್ತಕರು. ಇಂದಿನ ಯುವ ಸಮೂಹ ಇಂತಹ ಮಹಾನ್ ವ್ಯಕ್ತಿಗಳ ಸಾಧನೆಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
    ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ಡಾ.ಫ.ಗು.ಹಳಕಟ್ಟಿಯವರು ವಚನ ಸಾಹಿತ್ಯ ಸಂರಕ್ಷಣೆಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ರಾಜಕೀಯ, ಸಹಕಾರಿ ಕ್ಷೇತ್ರ, ಸಾಮಾಜಿಕ ಹಾಗೂ ಶೈಕ್ಷಣಿಕ ಕೇತ್ರದಲ್ಲಿಯೂ ದುಡಿದಿದ್ದಾರೆ. ವಚನಗಳಿಂದ ಜೀವನ ಮೌಲ್ಯಗಳು ಯಾವ ರೀತಿ ಬದಲಾವಣೆಯಾಗುತ್ತವೆ ಎಂಬುದನ್ನು ಅರಿತ ಅವರು ವಚನ ಸಾಹಿತ್ಯ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡರು. ಇಂದಿನ ಯುವ ಜನಾಂಗ ಹಳಕಟ್ಟಿಯವರ ಸಾಧನೆ ಬಗ್ಗೆ ಅರಿವು ಹೊಂದಬೇಕು ಎಂದು ಹೇಳಿದರು.
    ಸಾನಿಧ್ಯ ವಹಿಸಿದ್ದ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ಭಾಗ್ಯವತಿ ಕೋಡವಾಳ ಹಾಗೂ ಸಂಗಡಿಗರು ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
    ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶಿದ್ಲಲಿಂಗೇಶ ರಂಗಣ್ಣನವರ, ವಚನ ಸಾಹಿತ್ಯ ಪರಿಷತ್‌ನ ಪ್ರೊ.ಮಾರುತಿ ಶಿಡ್ಲಾಪುರ, ಎಂ.ಎಸ್.ಕೋರಿಶೆಟ್ಟರ, ರಾಜೇಶ್ವರಿ, ಇತರರು ಉಪರಿಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts