More

    ಏ.21ರಿಂದ ಮನೆ ಮನೆಗೆ ಮತದಾರರ ಚೀಟಿ; ವಿತರಣೆಗೆ ನೋಡಲ್ ಅಧಿಕಾರಿಗಳ ನೇಮಕ; ಡಿಸಿ ರಘುನಂದನ ಮೂರ್ತಿ ಹೇಳಿಕೆ

    ಹಾವೇರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಏಪ್ರಿಲ್ 21ರಿಂದ ಮೇ 2ರವರೆಗೆ ಜಿಲ್ಲೆಯಾದ್ಯಂತ ಬಿಎಲ್‌ಓಗಳ ಮೂಲಕ ಮತದಾರರಿಗೆ ವೋಟರ್ ಸ್ಲೀಪ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಏ.12ರಿಂದ ಹಾವೇರಿ ಲೋಕಸಭಾ ಕ್ಷೇತ್ರದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮೇ 7ರಂದು ಮತದಾನ ನಡೆಯಲಿದೆ. ಸುಗಮವಾಗಿ ಮತದಾನ ಮಾಡಲು ಅನುಕೂಲವಾಗುವಂತೆ ಕ್ಯೂಆರ್ ಕೋಡ್ ಒಳಗೊಂಡ ವೋಟರ್ ಸ್ಲೀಪ್‌ಗಳ ವಿತರಣೆಗಾಗಿ ವಿಧಾನಸಭಾ ಕ್ಷೇತ್ರವಾರು ಉಸ್ತುವಾರಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಲಾಗಿದೆ.
    ವೋಟರ್ ಸ್ಲೀಪ್‌ನೊಂದಿಗೆ ಚುನಾವಣಾ ಆಯೋಗದ ಗುರುತಿನ ಪತ್ರ ಅಥವಾ ಆಯೋಗ ನಿಗಧಿಪಡಿಸಿದ ಭಾವಚಿತ್ರವಿರುವ ಗುರುತಿನ ಪತ್ರಗಳೊಂದಿಗೆ ಮತದಾನ ಮಾಡಬಹುದಾಗಿದೆ. ವೋಟರ್ ಸ್ಲಿಪ್ ವಿತರಿಸುವ ಸಂದರ್ಭದಲ್ಲಿ ಮನೆಯಲ್ಲಿ ಮತದಾರರು ಯಾರೂ ಇಲ್ಲದಿದ್ದರೆ ಅಥವಾ ಮನೆ ಬೇರೆಡೆ ಸ್ಥಳಾಂತರಿಸಿದ್ದರೆ ಅಥವಾ ಮತದಾರ ಮರಣ ಹೊಂದಿದ್ದರೆ ವೋಟರ್ ಸ್ಲೀಪ್‌ಗಳ ಮೇಲೆ ವಿವರವನ್ನು ಕಡ್ಡಾಯವಾಗಿ ನಮೂದಿಸಬೇಕು. ವೋಟರ್ ಸ್ಲಿಪ್‌ಗಳು ಮತದಾನ ಮಾಡಲು ಅಧಿಕೃತ ಗುರುತಿನ ಚೀಟಿ ಎಂದು ಭಾವಿಸತಕ್ಕದ್ದಲ್ಲ ಎಂದು ಮತದಾರರಿಗೆ ಸ್ಪಷ್ಟ ಅರಿವು ಮೂಡಿಸಲು ಡಿಸಿ ನಿರ್ದೇಶಿಸಿದ್ದಾರೆ.
    ನೋಡಲ್ ಅಧಿಕಾರಿಗಳ ವಿವರ:
    ಜಿಲ್ಲಾ ನೋಡಲ್ ಅಧಿಕಾರಿಯಾಗಿ ಡಿಡಿಎಲ್‌ಆರ್ ರೂಪಕುಮಾರ ಅವರನ್ನು ನೇಮಿಸಲಾಗಿದೆ. ಹಾನಗಲ್ಲ ಕ್ಷೇತ್ರದ ನಗರ ಪ್ರದೇಶಕ್ಕೆ ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ಹಾಗೂ ಗ್ರಾಮೀಣ ಪ್ರದೇಶಕ್ಕೆ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹದೇವ ಮಳಲಿ ಅವರನ್ನು ನೇಮಕ ಮಾಡಲಾಗಿದೆ.
    ಶಿಗ್ಗಾಂವಿ ಕ್ಷೇತ್ರದ ನಗರ ಪ್ರದೇಶಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರ ಉಪನಿರ್ದೇಶಕ ತಾರಕೇಶ್ವರ ಎಚ್.ಬಿ. ಹಾಗೂ ಗ್ರಾಮೀಣ ಪ್ರದೇಶಕ್ಕೆ ಜಿಲ್ಲಾ ಸಾಂಖಿಕ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ ಪಾಟೀಲ ಅವರನ್ನು ನೇಮಿಸಲಾಗಿದೆ. ಹಾವೇರಿ ಕ್ಷೇತ್ರದ ನಗರ ಪ್ರದೇಶಕ್ಕೆ ಗೀತಾ ಕುಂದಾಪುರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಶೈಲಾ ಕುರಹಟ್ಟಿ, ಬ್ಯಾಡಗಿ ನಗರ ಪ್ರದೇಶಕ್ಕೆ ಅನ್ನಪೂರ್ಣ ಸಂಗಳದ ಹಾಗೂ ಗ್ರಾಮೀಣ ಪ್ರದೇಶಕ್ಕೆ ಲತಾ ಬಿ.ಎಚ್ ಅವರನ್ನು ನೇಮಿಸಲಾಗಿದೆ.
    ಹಿರೆಕೆರೂರ ಕ್ಷೇತ್ರದ ನಗರ ಪ್ರದೇಶಕ್ಕೆ ಜಿ.ಪಂ.ಮುಖ್ಯ ಯೋಜನಾಧಿಕಾರಿ ಎಚ್.ವೈ.ಮೀಶಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೆಹಬೂಬ ನದಾಫ್, ರಾಣೆಬೆನ್ನೂರ ಕ್ಷೇತ್ರದ ನಗರ ಪ್ರದೇಶಕ್ಕೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ತುಕಾರಾಮ ಪವಾರ ಹಾಗೂ ಕೃಷಿ ಇಲಾಖೆ ಉಪನಿರ್ದೇಶಕ ರೇವಣಸಿದ್ದನಗೌಡ ಎಚ್.ಕೆ. ಅವರನ್ನು ನೇಮಕ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts