More

    ರಕ್ತದಾನದ ಮೂಲಕ ಜೀವದಾನ ಮಾಡಿದ ಶ್ವಾನ !; ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾದ ಅಕ್ಕಿಆಲೂರ

    ಅಕ್ಕಿಆಲೂರ: ರಕ್ತಸೈನಿಕರ ತವರೂರು ಎಂದೇ ಖ್ಯಾತಿ ಪಡೆದಿರುವ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಪಶು ಆಸ್ಪತ್ರೆ ಶನಿವಾರ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಗಿದೆ. ಕಾಯಿಲೆಯಿಂದ ಬಳಲುತ್ತಿದ್ದ ಶ್ವಾನವೊಂದಕ್ಕೆ ಮತ್ತೊಂದು ಶ್ವಾನ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದೆ.
    ಬಮ್ಮನಹಳ್ಳಿ ಗ್ರಾಮದ ಶ್ವಾನ ತರಬೇತುದಾರ ರಂಜಿತ ಅವರ ‘ಸಿರಿ’ ಎಂಬ ಶ್ವಾನ ರಕ್ತದಾನ ಮಾಡಿದೆ.
    ಹಾನಗಲ್ಲ ತಾಲೂಕು ಹುಲ್ಲತ್ತಿ ಗ್ರಾಮದ ನಾಗರಾಜ ಗೊಲ್ಲರ ಎಂಬುವರ ರಾಕಿ ಎಂಬ ಶ್ವಾನ ಅಕ್ಯೂಟ್ ಲೆಪ್ಟೋಸ್ಪೇರೊಸಿಸ್ ಎಂಬ ರೋಗದಿಂದ ಬಳಲುತ್ತಿತ್ತು. ಇದರ ಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇತ್ತು. ಇದಕ್ಕೆ ಅಗತ್ಯವಾದ ರಕ್ತವನ್ನು ಬಮ್ಮನಹಳ್ಳಿ ಗ್ರಾಮದ ಶ್ವಾನ ತರಬೇತುದಾರ ರಂಜಿತ ಅವರ ‘ಸಿರಿ’ ಎಂಬ ಶ್ವಾನ ರಕ್ತದಾನ ಮಾಡುವ ಮೂಲಕ ರಕ್ತಸೈನಿಕ ಎನಿಸಿಕೊಂಡಿದೆ.
    ಅಕ್ಕಿಆಲೂರಿನ ಸ್ನೇಹಮೈತ್ರಿ ಬ್ಲಡ್ ಆರ್ಮಿ ಸಹಕಾರದೊಂದಿಗೆ ಹಿರಿಯ ಪಶುವೈದ್ಯಾಧಿಕಾರಿ, ರಕ್ತಸೈನಿಕರಾದ ಡಾ.ಅಮಿತ ಪುಠಾಣಿಕರ ಮತ್ತು ಡಾ.ಸಂತೋಷ ಮಲಗುಂದ ಮತ್ತು ತಂಡದವರು ‘ಸಿರಿ’ ರಕ್ತ ಪಡೆದು ‘ರಾಕಿ’ಗೆ ಯಶಸ್ವಿಯಾಗಿ ಚಿಕಿತ್ಸೆ ನಡೆಸಿದರು. ಇದು ಅಕ್ಕಿಆಲೂರಿನ ಪಶುಆಸ್ಪತ್ರೆಯಲ್ಲಿ ನಡೆದ ಎರಡನೇ ಶ್ವಾನ ರಕ್ತದಾನ ಎಂದು ಸ್ನೇಹಮೈತ್ರಿ ಬ್ಲಡ್ ಆರ್ಮಿ ಸಂಸ್ಥಾಪಕ, ಪೊಲೀಸ್ ಕಾನ್‌ಸ್ಟೆಬಲ್ ಕರಬಸಪ್ಪ ಗೊಂದಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts