More

    ಬೈ-ಪಾಸ್ ರಸ್ತೆಯಿಲ್ಲದೆ ಸವಾರರಿಗೆ ತೊಂದರೆ

    ಹಟ್ಟಿಚಿನ್ನದಗಣಿ: ಹಟ್ಟಿ-ರಾಯಚೂರು ಮುಖ್ಯ ರಸ್ತೆಯಲ್ಲಿರುವ ಕಾಕಾನಗರ ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಬೈ-ಪಾಸ್ ರಸ್ತೆಯಿಲ್ಲದೆ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ.

    4.30 ಕೋಟಿ ರೂ.ವೆಚ್ಚದಲ್ಲಿ ಹಟ್ಟಿಚಿನ್ನದಗಣಿ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ಮುಖಾಂತರ ಬೃಹತ್ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಹಟ್ಟಿಕ್ಯಾಂಪಿನಿಂದ ಹಟ್ಟಿ ಪಟ್ಟಣವನ್ನು ಸಂಪರ್ಕಿಸುವ ಜನನಿ ಬೀಡ ಪ್ರದೇಶದಲ್ಲಿರುವ ಸೇತುವೆ ಮಾರ್ಗ ಬಂದ್ ಆಗಿರುವುದರಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ. ಈಗಾಗಲೆ ಕಿರಿದಾಗಿರುವ ಬೈ-ಪಾಸ್ ರಸ್ತೆಯಲ್ಲಿಯೇ ವಾಹನ ಓಡಾಟದಿಂದ ಸಂಚಾರ ದಟ್ಟಣೆ ನಿಯಂತ್ರಣವಾಗುತ್ತಿಲ್ಲ. ಯೋಜನಾ ವರದಿ ಪ್ರಕಾರ 25 ಲಕ್ಷ ರೂ. ವೆಚ್ಚದಲ್ಲಿ ಪ್ರತ್ಯೇಕ ಬೈ-ಪಾಸ್ ರಸ್ತೆಯನ್ನು ಸೇತುವೆ ಕಾಮಗಾರಿ ನಡೆಯುವ ಪಕ್ಕದಲ್ಲಿ ನಿಯಮಾವಳಿ ಪ್ರಕಾರ ರಸ್ತೆ ನಿರ್ಮಿಸಿ ಕೊಡಬೇಕಿತ್ತು. ಆದರೆ ಲೋಕೋಪಯೋಗಿ ಇಲಾಖೆ ಬ್ರಿಜ್‌ನ್ನು ನೆಲಸಮಗೊಳಿಸಿದ್ದರಿಂದ ಉಳಿದ ತ್ಯಾಜ್ಯವನ್ನೇ ಸೇತುವೆ ಪಕ್ಕ ಸುರಿದು ಕೈತೊಳೆದುಕೊಂಡಿದೆ. ಹಳ್ಳದ ಆಳದಲ್ಲಿರುವ ನೀರನ್ನು ಸಹಿತ ಬೇರೆಡೆ ಹರಿಸದೆ ಇರುವುದರಿಂದ ತ್ಯಾಜ್ಯದ ರಸ್ತೆ ಹಸಿಯಾಗಿ ಕುಸಿಯುತ್ತಿದೆ. ಅಲ್ಲದೆ ಬೈಕ್ ಹೋಗಲು ಮಾತ್ರ ಅವಕಾಶ ಕಲ್ಪಿಸಿದ್ದರಿಂದ ಆಟೋಗಳು, ಪಾದಚಾರಿಗಳು ಇದೆ ಮಾರ್ಗದಲ್ಲಿ ಸಂಚರಿಸುವುದರಿಂದ ಶುಕ್ರವಾರ ಕುಸಿದ ಪರಿಣಾಮ 2-3 ಬೈಕ್‌ಗಳು ಹಳ್ಳಕ್ಕುರುಳಿ ಸವಾರರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts