More

    ಈ ಮಹಿಳಾ ಪೊಲೀಸ್​​ಗೆ ಹ್ಯಾಟ್ಸಾಫ್ ಅಂದದ್ದು ಯಾಕೆ ?

    ರಾಂಚಿ: ಮಹಿಳಾ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಜಾರ್ಖಂಡ್‌ನ ಹತಿಯಾ ನಿಲ್ದಾಣದಲ್ಲಿ ಮಗುವಿಗೆ ಹಾಲು ತಂದುಕೊಡುವ ಮೂಲಕ ಔದಾರ್ಯ ಮೆರೆದಿದ್ದಾರೆ. ರಾಂಚಿ ಡಿಆರ್​ಎಂ ಟ್ವಿಟರ್​​​ನಲ್ಲಿ ಈ ದೃಶ್ಯಾವಳಿ ಹಂಚಿಕೊಂಡಿದ್ದು, ಈ ಮಹಿಳಾ ಪೊಲೀಸ್​ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಇದನ್ನೂ ಓದಿ: ನನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಬೀಗಿದ ಈ ಪೊಲೀಸ್ ಗತಿ ಏನಾಯ್ತು ನೋಡಿ…!

    ತಮ್ಮ ನಾಲ್ಕು ತಿಂಗಳ ಗಂಡು ಮಗುವಿನೊಂದಿಗೆ ಮೆಹ್ರುನ್ನಿಸಾ ಎಂಬಾಕೆ ಬೆಂಗಳೂರಿನಿಂದ ಗೋರಖ್‌ಪುರಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಹತಿಯಾ ನಿಲ್ದಾಣಕ್ಕೆ ಬರುತ್ತಿದ್ದಂತೆ, ಮೆಹ್ರುನ್ನಿಸಾ ತನ್ನ ಮಗುವಿಗೆ ಸ್ವಲ್ಪ ಹಾಲು ವ್ಯವಸ್ಥೆ ಮಾಡುವಂತೆ ಅಲ್ಲಿದ್ದ ಅಧಿಕಾರಿಗಳನ್ನು ಕೋರಿದರು. ಈ ಸಂದರ್ಭದಲ್ಲಿ ಎಎಸ್ಐ ಸುಶೀಲಾ ಬಾರೈಕ್ ಕೂಡ ನಿಲ್ದಾಣದಲ್ಲಿದ್ದರು.

    ಇದನ್ನೂ ಓದಿ: ಕ್ವಾರಂಟೈನ್​​ಗಾಗಿ ಮನೆಯಲ್ಲಿ ಜಾಗವಿಲ್ಲವೆಂದು ಆತ ಕಾಡಿಗೇನೂ ಹೋಗಲಿಲ್ಲ, ಆದರೆ…..

    ಸುಶೀಲಾ ಬಾರೈಕ್ ಅವರ ಮನೆ ರೈಲ್ವೆ ನಿಲ್ದಾಣದ ಸಮೀಪದಲ್ಲಿದ್ದು, ಮೆಹ್ರುನ್ನಿಸಾ ಮನವಿ ಕೇಳುತ್ತಿದ್ದಂತೆ ಅವರು ಮನೆಗೆ ಹೋಗಿ ಮಗುವಿಗೆ ಹಾಲು ತಂದುಕೊಟ್ಟರು. ರೈಲ್ವೆ ನಿಲ್ದಾಣದಲ್ಲಿ ಈ ಪೊಲೀಸ್ ಅಧಿಕಾರಿ ಹಾಲಿನ ಬಾಟಲಿಯನ್ನು ಮೆಹರುನ್ನಿಸಾಗೆ ನೀಡುವ ಚಿತ್ರವನ್ನೂ ರಾಂಚಿ ಡಿಆರ್​ಎಂ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು. ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

    ಸಂಗಾತಿ ಮುಟ್ಟಾದರೆ ಪುರುಷರಿಗೆ ವೇತನಸಹಿತ ರಜೆ ನೀಡುತ್ತಂತೆ ಈ ಕಂಪನಿ…!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts