More

    ಪೊಲೀಸರೆದುರೇ ಕುಸಿದು ಬಿದ್ದರು ಹಾಥರಸ್​ ಸಂತ್ರಸ್ತೆಯ ತಂದೆ; ವೈದ್ಯಕೀಯ ನೆರವಿಗೆ ಕೋರಿಕೆ..

    ಹಾಥರಸ್​: ಅತ್ಯಾಚಾರ ಪ್ರಕರಣದ ಸಂಬಂಧ ತೀವ್ರ ಬೆಳವಣಿಗೆ ನಡೆಯುತ್ತಿರುವ ನಡುವೆ ಭಾನುವಾರ ಮತ್ತಷ್ಟು ಆತಂಕ ಉಂಟಾಯಿತು. ಕಾರಣ, ವಿಶೇಷ ತನಿಖಾ ತಂಡ (ಎಸ್​ಐಟಿ) ಆಗಮಿಸಿದ್ದ ವೇಳೆಯೇ ಸಂತ್ರಸ್ತೆಯ ತಂದೆ ಕುಸಿದು ಬಿದ್ದಿದ್ದಾರೆ.

    ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಗಾಗಿ ಸಂತ್ರಸ್ತೆಯ ಮನೆಗೆ ಆಗಮಿಸಿದ್ದ ಎಸ್​ಐಟಿ, ಆಕೆಯ ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿತ್ತು. ಆದರೆ ಆ ಸಂದರ್ಭದಲ್ಲಿ ಸಂತ್ರಸ್ತೆಯ ತಂದೆ ಕುಸಿದು ಬಿದ್ದ ಕಾರಣ, ಎಸ್​ಐಟಿ ವೈದ್ಯಕೀಯ ತಂಡದ ಮೊರೆ ಹೋಯಿತು.

    ಸದ್ಯ ಅವರ ರಕ್ತದೊತ್ತಡ ಮತ್ತಿತರ ಪ್ರಾಥಮಿಕ ತಪಾಸಣೆಗಳನ್ನು ಮಾಡಿದ್ದು, ಕೋವಿಡ್​ ಟೆಸ್ಟ್ ಇನ್ನೂ ಮಾಡಿಲ್ಲ ಎಂಬುದಾಗಿ ವೈದ್ಯಕೀಯ ತಂಡ ಹೇಳಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗ ಆಗಬೇಕಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts