More

    ಹಾಥರಸ್​ ಪ್ರಕರಣ ರೇಪ್​ ಅಲ್ಲವೇ ಅಲ್ಲ: ಕೆಲ ದಾಖಲೆ ಮುಂದಿಟ್ಟು ಬಿಜೆಪಿ ಮುಖಂಡನ ವಾದ..!

    ಲಖನೌ: ದೇಶಾದ್ಯಂತ ಆಕ್ರೋಶದ ಕಿಚ್ಚು ಹಚ್ಚಿರುವ ಹಾಥರಸ್​ ಗ್ಯಾಂಗ್​ರೇಪ್​ ಪ್ರಕರಣವನ್ನು ಕಾಂಗ್ರೆಸ್​ ಮತ್ತು ಮಾಧ್ಯಮಗಳು ವ್ಯವಸ್ಥಿತವಾಗಿ ತಿರುಚಿವೆ ಎಂದು ಕಾಶಿ ಕ್ಷೇತ್ರದ ಬಿಜೆಪಿ ಜಾಲತಾಣ ಮುಖ್ಯಸ್ಥ ಶಶಿಕುಮಾರ್​ ಎಂಬುವರು ಗಂಭೀರ ಆರೋಪ ಮಾಡಿದ್ದಾರೆ.

    ಹಾಥರಸ್​ ಪ್ರಕರಣದಲ್ಲಿ ಇರುವ ಸತ್ಯ ಬೇರೆ ಇರುವಾಗ ಇಡೀ ಪ್ರಕರಣವನ್ನು ಗ್ಯಾಂಗ್​ರೇಪ್​ ಮತ್ತು ಕೊಲೆ ಎಂದು ತಿರುಚಿದ್ದಾರೆ. ಕಾಂಗ್ರೆಸ್​ ತನ್ನ ರಾಜಕೀಯ ಅಜೆಂಡಾವನ್ನಾಗಿ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿದ್ದು, ಕೆಲ ಕುತೂಹಲಕರ ಸಂಗತಿಯನ್ನು ಸರಣಿ ಟ್ವೀಟ್​ ಮೂಲಕ ಶಶಿಕುಮಾರ್​ ಬಿಚ್ಚಿಟ್ಟಿದ್ದಾರೆ.

    ಸಂತ್ರಸ್ತ ಯುವತಿಯ ಕುಟುಂಬ ಹಾಗೂ ಆರೋಪಿ ಸಂದೀಪ್​ ಕುಟುಂಬದ ನಡುವೆ 2001ರಿಂದ ಹಳೆಯ ದ್ವೇಷವಿತ್ತು. ಇಬ್ಬರು ಪರಸ್ಪರ ದೂರು ಸಹ ಸಲ್ಲಿಸಿದ್ದರು. ಸಂದೀಪ್​ ಕುಟುಂಬದಿಂದ 2 ಲಕ್ಷ ರೂ. ಹಣ ಪಡೆದುಕೊಂಡ ಬಳಿಕ ಸಂತ್ರಸ್ತೆಯ ಕುಟುಂಬ ಪ್ರಕರಣವನ್ನು ಹಿಂಪಡೆದುಕೊಂಡಿತ್ತು. ಆದರೆ, ಎರಡು ಕುಟುಂಬಗಳ ದ್ವೇಷದ ನಡುವೆಯೂ ಯುವತಿ ಮತ್ತು ಸಂದೀಪ್​ ಪರಸ್ಪರ ಪ್ರೀತಿಸುತ್ತಿದ್ದರು.

    ಹೀಗಿರುವಾಗ ಪ್ರಸ್ತುತ ನಡೆದಿದೆ ಎನ್ನಲಾದ ಗ್ಯಾಂಗ್​ರೇಪ್​ ಪ್ರಕರಣಕ್ಕೂ ಒಂದು ತಿಂಗಳ ಮುಂಚೆ ಸಂದೀಪ್​ ಮತ್ತು ಯುವತಿ ಸಂಧಾನ ಸ್ಥಿತಿಯಲ್ಲಿ ಕುಟುಂಬದ ಎದುರು ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು. ಈ ವೇಳೆ ಇಬ್ಬರಿಗೂ ಥಳಿಸಲಾಗಿತ್ತು. ಬಳಿಕ ಗ್ರಾಮದ ಮುಖ್ಯಸ್ಥ ಇಬ್ಬರ ನಡುವೆ ರಾಜಿ ಸಂಧಾನ ನಡೆಸಿ, ಮದುವೆಯ ಮಾತುಕತೆ ನಡೆಸಿದ್ದರು. ಆದರೆ, ಯುವತಿ ಕುಟುಂಬಸ್ಥರು ಅದರಲ್ಲೂ ಸಹೋದರನಿಗೆ ಇಷ್ಟವಿಲ್ಲದಿದ್ದರಿಂದ ಮದುವೆ ನಿರಾಕರಿಸಲಾಗಿತ್ತು.

    ಆದರೆ, ಯುವತಿ ಮತ್ತು ಸಂದೀಪ್​ ವಿರೋಧದ ನಡುವೆಯೂ ತಮ್ಮ ಸಂಬಂಧವನ್ನು ಹಾಗೇ ಮುಂದುವರಿಸಿದ್ದರು. ಇದರ ನಡುವೆ ಅನೇಕ ಬಾರಿ ಯುವತಿಯ ಸಹೋದರ ಇಬ್ಬರು ಒಟ್ಟಿಗೆ ಇರುವುದನ್ನು ಹಿಡಿದು ಸಂದೀಪನಿಗೆ ಥಳಿಸಿದ್ದ. ಇದೆಲ್ಲವನ್ನು ಗಮನಿಸಿದ್ದ ಸಂದೀಪ್​ ಕುಟುಂಬ ತಮ್ಮ ಮಗನಿಗೆ ಬೇರೆಡೆ ಕೆಲಸ ಹುಡುಕಿ ಗ್ರಾಮದಿಂದಲೇ ಹೊರ ಕಳುಹಿಸಿದ್ದರು. ಹೋಗುವ ಮುನ್ನ ಸಂದೀಪ್​, ಯುವತಿಗೆ ಮೊಬೈಲ್​ ಉಡುಗೊರೆ ನೀಡಿದ್ದ. ಇಬ್ಬರು ನಿರಂತರ ಸಂಪರ್ಕದಲ್ಲಿದ್ದರು.

    ಕೆಲವು ದಿನಗಳ ಬಳಿಕ ಸಂದೀಪ್​ ಆಕೆಗೆ ಕರೆ ಮಾಡಿದ್ದ. ಆದರೆ, ಆಕೆಯ ಅತ್ತಿಗೆ ಕರೆ ಸ್ವೀಕರಿಸಿದ್ದರು. ಬಳಿಕ ಆಕೆಗೆ ಚೆನ್ನಾಗಿ ಥಳಿಸಿ, ಗ್ರಾಮದ ಮುಖ್ಯಸ್ಥನಿಗೆ ದೂರು ನೀಡಿದ್ದರು. ಬಳಿಕ ಈ ವಿಚಾರ ಸಂದೀಪ್​ ತಂದೆಗೂ ತಿಳಿಸಲಾಯಿತು. ಮಗನನ್ನು ಊರಿಗೆ ಕರೆಯಿಸಿ ಆತನಿಗೂ ಚೆನ್ನಾಗಿ ಥಳಿಸಲಾಯಿತು. ಇನ್ನು ಗ್ಯಾಂಗ್​ ರೇಪ್​ ನಡೆಯಿತು ಎನ್ನಲಾದ ಸೆ. 14ರಂದು ಸಂದೀಪ್​ ಯುವತಿಯನ್ನು ಭೇಟಿ ಮಾಡಲು ತೆರಳಿದ್ದ. ಆವಾಗ ಆಕೆ ಹೊಲದಲ್ಲಿ ಇದ್ದಳು. ಇಬ್ಬರು ಮಾತನಾಡುವುದನ್ನು ಯುವತಿಯ ತಾಯಿ ನೋಡಿದರು. ಬಳಿಕ ತನ್ನ ಮಗನನ್ನು ಜೋರಾಗಿ ಕೂಗಿ ಕರೆದಳು. ಇದನ್ನು ನೋಡಿದ ಸಂದೀಪ್​ ಅಲ್ಲಿಂದ ಓಡಿದನು. ಇತ್ತ ಯುವತಿಯ ಸಹೋದರ ಬಹಳ ಸಿಟ್ಟಿನಲ್ಲಿದ್ದನು.

    ಅದೇ ಕೋಪದಲ್ಲಿ ಸಹೋದರ ಆಕೆಗೆ ನಿಷ್ಕರುಣೆಯಿಂದ ಥಳಿಸಿ, ದುಪ್ಪಟ್ಟದಿಂದ ಉಸಿರುಗಟ್ಟಿಸಿ ಸಾಯಿಸಲು ಯತ್ನಿಸಿದನು. ಅವಳು ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಬಿದ್ದಿದ್ದಳು. ಇದನ್ನು ನೋಡಿದ ತಾಯಿ ಜೋರಾಗಿ ಕೂಗಿಕೊಂಡಾಗ ಹತ್ತರಿದ ಜಮೀನಿನಲ್ಲಿದ್ದ ಲವಕುಶ್​ (ಪ್ರಕರಣದ ಮತ್ತೊಬ್ಬ ಆರೋಪಿ) ಓಡಿ ಬಂದನು. ಈ ವೇಳೆ ಯುವತಿಯ ತಾಯಿ ನೀರು ಕೇಳಿದರು. ಬಳಿಕ ಲವಕುಶ್​ ನೀರು ಹಿಡಿದುಕೊಂಡು ಓಡಿ ಬಂದನು. ಈ ವೇಳೆ ಆತನಿಗೆ ಸಂದೀಪ್​ ನನ್ನ ಮಗಳನ್ನು ಕೊಲ್ಲಲು ಯತ್ನಿಸಿದನು ಎಂದು ಹೇಳಿದರು. ಯುವತಿಗೆ ಪ್ರಜ್ಞೆ ಬಂದಾಗ ಆಕೆಯು ಸಹ ಸಂದೀಪ್​ ಕೊಲ್ಲಲು ಯತ್ನಿಸಿದ್ದಾಗಿ ಹೇಳಿದಳು. ಇದೇ ಹೇಳಿಕೆಯನ್ನೇ ಆಕೆ ಆಸ್ಪತ್ರೆಯಲ್ಲಿ ಪೊಲೀಸ್​ ಮತ್ತು ಮಾಧ್ಯಮಗಳ ಮುಂದೆ ಹೇಳಿರುವುದು.

    ಸಂತ್ರಸ್ತೆಯ ತಾಯಿ ಸಹ ಪೊಲೀಸ್​ ಮತ್ತು ಮಾಧ್ಯಮಗಳಿಗೆ ಸಂದೀಪ್​ ವಿರುದ್ಧವಾಗಿ ಹೇಳಿಕೆ ನೀಡಿದರು. ಹಳೆಯ ದ್ವೇಷದಿಂದಾಗಿ ನನ್ನ ಮಗಳನ್ನು ಕೊಲ್ಲಲು ಯತ್ನಿಸಿದ ಎಂದು ತಾಯಿ ಆರೋಪಿಸಿದಳು. ಆದರೆ, ಇಲ್ಲಿರುವ ವಿಡಿಯೋದಲ್ಲಿ ರೇಪ್​, ಗ್ಯಾಂಗ್​ರೇಪ್​ ಅಥವಾ ನಾಲಿಗೆ ಕತ್ತರಿಸಿರುವ ಯಾವುದೇ ಸುಳಿವು ಇಲ್ಲ ನೋಡಿ ಎಂದು ಶಶಿ ಕುಮಾರ್​ ಅವರು ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ.

    ಪ್ರಕರಣದಲ್ಲಿ ಮುಖ್ಯ ತಿರುವು ಇದೀಗ ಪಡೆದುಕೊಳ್ಳುತ್ತದೆ ಎಂದಿರುವ ಶಶಿಕುಮಾರ್​, ಸ್ಥಳೀಯ ಕಾಂಗ್ರೆಸ್​ ಮುಖಂಡ ಆಲಿಘಡದಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿ, ನಿಮ್ಮ ಮಗಳಿಗೆ ರೇಪ್​ ಆಗಿದೆ ಎಂದು ಹೇಳಿಕೆ ನೀಡಿ, ನಿಮಗೆ ಸರ್ಕಾರದಿಂದ ಹಣ ದೊರೆಯುತ್ತದೆ ಎಂದು ಆಮಿಷವೊಡ್ಡಿದ್ದಾನೆ. ಇತ್ತ ಆಮಿಷಕ್ಕೆ ಒಳಗಾದ ಯುವತಿಯ ತಾಯಿ ಸೆ. 22ರಂದು ಪೊಲೀಸ್​ ಠಾಣೆಗೆ ತೆರಳಿ ಗ್ಯಾಂಗ್​ ರೇಪ್​ ಪ್ರಕರಣವನ್ನು ದಾಖಲಿಸುತ್ತಾರೆ.

    ಇನ್ನು ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಲು ಕೇಳಿದಾಗ, ಆಕೆ ಸಾಮೂಹಿಕ ಅತ್ಯಾಚಾರವೆಂದು ಏಕೆ ಉಲ್ಲೇಖಿಸಿದ್ದಾಳೆ ಎಂದು ನಿಮಗೆ ಆಶ್ಚರ್ಯವಾಗಬಹುದು? ಘಟನಾ ಸ್ಥಳದಲ್ಲಿ ಲವಕುಶ್​ ಇದ್ದುದ್ದರಿಂದ ಹಾಗೂ ಸಂದೀಪ್​ಗೆ ಸ್ನೇಹಿತನಾಗಿರುವುದರಿಂದ ಆತನಿಗೆ ಸಹಾಯ ಮಾಡಬಹುದು ಎಂದು ಆಲೋಚಿಸಿ ಇಬ್ಬರ ಹೆಸರಿನ ಜನತೆಗೆ ಹಳೆಯ ದ್ವೇಷದಿಂದ ಸಂದೀಪ್​ ಅಂಕಲ್​ ರಾಮು ಹೆಸರನ್ನು ಹೇಳಿದ್ದಾರೆ. ​

    ಇನ್ನು ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ರಾಮು ಘಟನೆ ನಡೆದ ದಿನದಂದು ಸ್ಥಳದಲ್ಲೇ ಇರಲಿಲ್ಲ. ಆತ ಸುಮಾರು 10 ಕಿ.ಮೀ ದೂರದಲ್ಲಿರುವ ಐಸ್​ ಕ್ರೀಮ್​ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಇದನ್ನು ಖಚಿತಪಡಿಸಿ ಆಜ್​ತಕ್​ ಮಾಧ್ಯಮ ಸಹ ವರದಿ ಮಾಡಿದೆ. ಅಲ್ಲದೆ, ಈ ಗ್ಯಾಂಗ್​ರೇಪ್​ ಸಿದ್ದಾಂತಕ್ಕೆ ದಲಿತ ಸಂಸದ ರಾಜವೀರ್​ ದಿಲೇರ್​ ಅವರ ಪತ್ನಿ ಮತ್ತು ಮಗಳು ಸಹ ಬೆಂಬಲ ನೀಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆಂದು ಶಶಿಕುಮಾರ್​ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಯುವತಿಯ ಆರೋಗ್ಯ ಸ್ಥಿತಿ ತುಂಬಾ ಹದಗೆಡುತ್ತಾ ಹೋಗುತ್ತದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸಫ್ದಾರ್​ ಜಂಗ್​ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ. ಇದೇ ವೇಳೆ ಸ್ಥಳೀಯ ಕಾಂಗ್ರೆಸ್​ ಮುಖಂಡನೊಬ್ಬ ಯುವತಿ ಮೇಲೆ ಗ್ಯಾಂಗ್​ರೇಪ್​ ಆಗಿದೆ. ಆಕೆಯ ಪಕ್ಕೆಲುಬು ಮುರಿದಿದೆ ಮತ್ತು ನಾಲಿಗೆಯನ್ನು ಕತ್ತರಿಸಲಾಗಿದೆ ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕುತ್ತಾರೆ. ಹಾಗದರೆ ಆ ಯುವತಿ ಹೇಳಿಕೆ ನೀಡಲು ಹೇಗೆ ಸಾಧ್ಯ, ಅವಳು ಹೇಳಿದ್ದಾಳೆ ಎನ್ನಲಾದ ವಿಚಾರ ಸುಳ್ಳು ಎಂಬಂತಾಯಿತು.

    ಲಭ್ಯವಾಗಿರುವ ಸಂತ್ರಸ್ತೆ ಹಾಗೂ ಆಕೆಯ ತಾಯಿಯ ಸಾಕಷ್ಟು ವಿಡಿಯೋಗಳು ಸಹ ಗ್ಯಾಂಗ್​ರೇಪ್​ ಎಂದು ಸಾಬೀತು ಪಡಿಸಲಾಗಿಲ್ಲ. ಯಾವುದೇ ನ್ಯೂಸ್​ ಪೇಪರ್​ಗಳಲ್ಲೂ ಸಹ ರೇಪ್​ ಅಥವಾ ಗ್ಯಾಂಗ್​ರೇಪ್​ ಎಂದು ವರದಿ ಮಾಡಿಲ್ಲ. ಆದರೆ, ಉತ್ತರ ಪ್ರದೇಶದ ಒಂದು ನ್ಯೂಸ್​ ಮಾಧ್ಯಮ ಇದೇ ನ್ಯೂಸ್​ ತೆಗೆದುಕೊಂಡು ತನ್ನ ಪ್ರೈಮ್​ಟೈಮ್​ನಲ್ಲಿ ವರದಿ ಮಾಡಿದೆ. ಆ ಮಾಧ್ಯಮದ ಸಂಪಾದಕ ಸಮಾಜವಾದಿ ಪಾರ್ಟಿಯವನು ಎಂದು ಆರೋಪಿಸಿದ್ದಾರೆ.

    ಸಂತ್ರಸ್ತೆ ಮತ್ತು ತಾಯಿಯನ್ನು ಭೇಟಿ ಮಾಡಿ, ಯೋಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿದ ಹತ್ರಾಸ್​ನ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷನ ಬಳಿ ಆ ಮಾಧ್ಯಮ ಹೇಳಿಕೆ ಪಡೆದುಕೊಳ್ಳುತ್ತದೆ. ಗಂಭೀರ ಗಾಯಗಳಿಂದ ಯುವತಿ ತೀರಿಕೊಂಡಾಗ ಮರಣೋತ್ತರ ವರದಿಯಲ್ಲಿ ರೇಪ್ ಎಂದು ಉಲ್ಲೇಖವಾಗಿಲ್ಲ ಎಂದು ಆಲಿಘಡ ಮುಖ್ಯ ವೈದ್ಯಾಧಿಕಾರಿ ವರದಿ ನೀಡುತ್ತಾರೆ. ಆದರೂ, ಮಾಧ್ಯಮಗಳು ಮಾತ್ರ ಗ್ಯಾಂಗ್​ರೇಪ್​, ಬರ್ಬರ ಕೊಲೆ ಮತ್ತು ನಾಲಿಗೆಯನ್ನು ಕತ್ತರಿಸಲಾಗಿದೆ ಎಂದು ಯಾವುದೇ ಸತ್ಯಾಂಶಗಳನ್ನು ಪರೀಕ್ಷಿಸದೇ ವರದಿ ಮಾಡುತ್ತಿವೆ. ಯುವತಿ ಸಾಯುವ ಒಂದು ದಿನದ ಮುನ್ನ ಕಾಂಗ್ರೆಸ್​ ಮುಖಂಡನೊಬ್ಬ ಆಕೆಯ ತಾಯಿಯೊಂದಿಗೆ ಮಾತನಾಡಿದ್ದಾರೆ. ಇತ್ತ ಮಾಧ್ಯಮಗಳು ಪೊಳ್ಳು ವರದಿಗಳನ್ನು ಮಾಡುತ್ತಿದ್ದು, ಇದರ ಲಾಭವನ್ನು ರಾಹುಲ್​ ಗಾಂಧಿ ಮತ್ತಿ ಪ್ರಿಯಾಂಕ ಪಡೆದುಕೊಳ್ಳುತ್ತಿದ್ದಾರೆ.

    ಯುವತಿಯ ಕುಟುಂಬಕ್ಕೆ ರಾಹುಲ್​ ಮತ್ತು ಪ್ರಿಯಾಂಕ ಭೇಟಿ ಕೇವಲ ಫೋಟೋಗಾಗಿ ಮಾತ್ರವಷ್ಟೇ. ಕಾಂಗ್ರೆಸ್​ನ ಐಟಿ ಸೆಲ್​ ಮತ್ತು ಕೆಲ ಮಾಧ್ಯಮಗಳು ಇಬ್ಬರ ಫೋಟೋವನ್ನು ಬಳಸಿ ಪ್ರಚಾರ ಮಾಡುತ್ತಿವೆ. ಇಡೀ ಮಾಧ್ಯಮ ಸಾಕಷ್ಟು ಒತ್ತಡವನ್ನೇರಿ ಸತ್ಯಾಂಶವನ್ನು ಮುಚ್ಚಿ ಆರೋಪಿಗಳನ್ನು ವಶಕ್ಕೆ ಪಡೆಯುವಂತೆ ಮಾಡಿದವು. ಅಲ್ಲಿನ ಗ್ರಾಮಸ್ಥರಿಗೂ ಸಹ ಸತ್ಯ ಏನೆಂಬುದು ತಿಳಿದಿದ್ದು, ಯುವತಿಯ ಸಹೋದರ ಮತ್ತು ತಾಯಿಯೇ ಮುಖ್ಯ ಕೊಲೆಗಾರರು ಮತ್ತು ಇದೊಂದು ಮರ್ಯಾದೆ ಹತ್ಯೆ ಎನ್ನುತ್ತಿದ್ದಾರೆ.

    ಇನ್ನು ಯುವತಿ ಕುಟುಂಬ ಎಸ್​ಐಟಿ ಅಥವಾ ಸಿಬಿಐ ತನಿಖೆ ಬೇಡವೆನ್ನುತ್ತಿದೆ. ಆದರೆ, ಸಂದೀಪ್​ ತಂದೆ ಸಿಬಿಐ ತನಿಖೆ ಆಗ್ರಹಿಸಿದ್ದಾರೆ. ಆದರೆ, ಯುವತಿಯ ತಾಯಿ ಮಾತ್ರ ಎರಡು ಕುಟುಂಬದ ನಡುವೆ ಹಳೆಯ ದ್ವೇಷವಿತ್ತು. ಸಂದೀಪ್​ ನನ್ನ ಮಗಳನ್ನು ಕೊಲ್ಲಲು ಯತ್ನಿಸಿದ ಎನ್ನುತ್ತಿದ್ದಳು. ಹಾಗದರೆ ರೇಪ್​ ಏನು? ಇದೆಲ್ಲ ಸಿದ್ಧಪಡಿಸಿದ ಕತೆ ಎಂದು ಶಶಿಕುಮಾರ್​ ಸರಣಿ ಟ್ವೀಟ್​ ಮೂಲಕ ಇಡೀ ಘಟನೆ ಕೇವಲ ಕಟ್ಟು ಕತೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಹಾಗದರೆ ಆತುರವಾಗಿ ಅಂತ್ಯಕ್ರಿಯೆ ನಡೆಸಿದ್ದೇಕೆ?
    ಇನ್ನು ಬಹುತೇಕ ಟ್ವಿಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕೆಲವು ನೀವು ಹೇಳಿದ್ದ ವಿಷಯ ಸರಿ ಇರಬಹುದು ಆದರೆ, ಯುವತಿಯ ಕುಟುಂಬದವರನ್ನು ಹೊರಗಿಟ್ಟು ಆತುರವಾಗಿ ಅಂತ್ಯಕ್ತಿಯೆ ಏಕೆ ನಡೆಸಿದರು. ಇದರ ಬಗ್ಗೆ ನೀವು ಎಲ್ಲೂ ಉಲ್ಲೇಖಿಸಿಲ್ಲವಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts