More

    ತೊಗರಿ ಬೇಳೆ ವಿತರಿಸದಂತೆ ಸೂಚನೆ

    ಜಿಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನ

    ಹಾಸನ: ಜಿಲ್ಲೆಗೆ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಬಂದಿರುವ ತೊಗರಿ ಬೇಳೆ ಕಳಪೆಯಾಗಿದ್ದು ಯಾವುದೇ ಕಾರಣಕ್ಕೂ ಅದನ್ನು ಮಕ್ಕಳಿಗೆ ವಿತರಿಸಬಾರದೆಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
    ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಎಲ್ಲ ಶಾಸಕರು ಹಾಗೂ ಸದಸ್ಯರು ತೊಗರಿ ಬೇಳೆ ಗುಣಮಟ್ಟ ಪರೀಕ್ಷೆಗೆ ಆಗ್ರಹಿಸಿದರು.
    ಎಸ್‌ಐಆರ್‌ಡಿ ಸಂಪನ್ಮೂಲ ವ್ಯಕ್ತಿ ಗಣೇಶ್ ಪ್ರಸಾದ್ ಮಾತನಾಡಿ, 15ನೇ ಹಣಕಾಸು ಆಯೋಗದ ಮಾರ್ಗಸೂಚಿಗಳ ಬಗ್ಗೆ ವಿವರಣೆ ನೀಡಿದರು. ಆಯೋಗದಿಂದ ಬಿಡುಗಡೆಯಾಗುವ ಹಣವನ್ನು ಜಿಪಂಗೆ ಶೇ.5, ತಾಪಂಗೆ ಶೇ.10 ಹಾಗೂ ಗ್ರಾಪಂಗೆ ಶೇ.80 ರಷ್ಟು ನೀಡಬೇಕಿದೆ. ಕಾಮಗಾರಿ ಯೋಜನಾ ಚಟುವಟಿಕೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ ದಿನಾಂಕದೊಳಗೆ ಸಲ್ಲಿಸಬೇಕು ಹಾಗೂ ಒಂದು ಬಾರಿ ಸಲ್ಲಿಸಿದ ಯೋಜನಾ ಪಟ್ಟಿಯನ್ನು ಮತ್ತೆ ಪರಿವರ್ತಿಸಲಾಗುವುದಿಲ್ಲ ಎಂದರು.
    ಕೇಂದ್ರ ಸರ್ಕಾರದ ನಿರ್ದೇಶನದಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರವೇ ಹಣವನ್ನು ಬಳಸಬೇಕಾಗಿದ್ದು, ಆದಷ್ಟು ದೊಡ್ಡ ಮಟ್ಟದ ಅಭಿವೃದ್ಧಿ ಕಾಮಗಾರಿ ಅಂದರೆ ಒಂದು ಕಾಮಗಾರಿ ಕನಿಷ್ಠ ನಾಲ್ಕು ಗ್ರಾಮ ಪಂಚಾಯಿತಿಗಳಿಗೆ ಅನುಕೂಲವಾಗುವಂತಿರಬೇಕು ಎಂದು ತಿಳಿಸಿದರು.
    ಶಾಸಕರಾದ ಎಚ್.ಡಿ. ರೇವಣ್ಣ, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ ಹಾಗೂ ಕೆ.ಎಸ್. ಲಿಂಗೇಶ್ ಮಾತನಾಡಿ, ಯೋಜನಾ ವೆಚ್ಚದ ನಿರ್ವಹಣೆಗೆ ಗ್ರಾಮ ಪಂಚಾಯಿತಿಗಳಿಗೆ ಇರುವ ನಿಯಮಾವಳಿಗಳನ್ನೇ ತಾಪಂ ಹಾಗೂ ಜಿಪಂಗೆ ಮಾಡಬೇಕು. ಈ ರೀತಿ ಮಾಡುವುದರಿಂದ ಅನುದಾನ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದು ಒತ್ತಾಯಿಸಿದರು.
    ಜಿಪಂ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts