More

    ಆಧಾರ್ ಕಾರ್ಡ್‌ಗೆ ಮತದಾರರ ಗುರುತಿನ ಚೀಟಿ ಜೋಡಿಸಿ

    ಹರಪನಹಳ್ಳಿ: ಹರ ಘರ್ ತಿರಾಂಗವನ್ನು ಯಶಸ್ವಿಗೊಳಿಸಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕಂದಾಯ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್‌ಸೂಚಿಸಿದರು.

    ಪಟ್ಟಣದ ತಾಲೂಕು ಆಡಳಿತಸೌಧದಲ್ಲಿ ಸೋಮವಾರ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಆ.13, 14 ಹಾಗೂ 15ರಂದು ರಾಷ್ಟ್ರಧ್ವಜವನ್ನು ಪ್ರತಿಯೊಬ್ಬರ ಮನೆಯ ಮೇಲೆ ಸ್ವ ಇಚ್ಛೆಯಿಂದ ಹಾರಿಸಬೇಕು. ರಾತ್ರಿ ಸಹ ಧ್ವಜವನ್ನು ಇಳಿಸುವ ಹಾಗಿಲ್ಲ. ಸತತವಾಗಿ 3 ದಿನಗಳ ಕಾಲ ಪುರಸಭೆ, ಇತರೆ ಎಲ್ಲ ಇಲಾಖೆಯವರು ಈ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ರಾಷ್ಟ್ರಧ್ವಜವನ್ನು ಮನೆಗಳ ಮೇಲೆ ಹಾರಿಸಲು ಸರ್ಕಾರ ಒಂದಕ್ಕೆ 20 ರೂ.ನಂತೆ ಮಾರಾಟ ಮಾಡಲಾಗುತ್ತಿದ್ದು, ಪುರಸಭೆಯವರು ಪಟ್ಟಣದಲ್ಲಿ ಮಾರಾಟ ಮಳೆಗೆಯನ್ನು ತೆರೆಯುವ ಮೂಲಕ ಕ್ರಮವಹಿಸಬೇಕು ಎಂದರು.

    ಮತದಾರರ ಗುರುತಿನ ಕಾರ್ಡ್‌ಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಣೆ ಮಾಡಬೇಕು, ಮತದಾರರು ಸ್ವಯಂ ಪ್ರೇರಿತರಾಗಿ ತಮ್ಮ ಮೊಬೈಲ್‌ಗಳಲ್ಲಿ ಜೋಡಣೆ ಮಾಡಿಕೊಳ್ಳಬೇಕು. ಈ ಬಗ್ಗೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮೂಲಕ ಅಂಗನವಾಡಿ ಕಾರ್ಯಕರ್ತರು, ಬಿಎಲ್‌ಒಗಳು ಕ್ರಮವಹಿಸಬೇಕು, ಎಲ್ಲ ಇಲಾಖೆಯವರು ಈ ಬಗ್ಗೆ ಹೆಚ್ಚು ಪ್ರಚುರಪಡಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts