More

    ಕೊಟ್ಟೂರು ಪಾದಯಾತ್ರಿಗಳಿಗೆ ಆಹಾರ, ಆರೋಗ್ಯ ಸೇವೆ

    ಹರಪನಹಳ್ಳಿ: ಕೊಟ್ಟೂರು ಶ್ರೀ ಗುರುಬಸವೇಶ್ವರ ರಥೋತ್ಸವಕ್ಕೆ ತೆರಳುವ ಪಾದಯಾತ್ರಿಗಳಿಗೆ ಪಟ್ಟಣದ ಸಂಘ ಸಂಸ್ಥೆಗಳು ಸೇವಾ ಕಾರ್ಯ ಕೈಗೊಂಡಿವೆ.

    ವಾಸವಿ ಕಲ್ಯಾಣ ಮಂಟಪ ಬಳಿ ತಾಲೂಕು ಆರ್ಯ ವೈಶ್ಯ ಸಮಾಜದಿಂದ ಔಷಧೋಪಚಾರ, ಅನ್ನಸಂತರ್ಪಣೆ ಸೇವೆ ಆಯೋಜಿಸಲಾಗಿತ್ತು. ರಾಘವೇಂದ್ರ ಶೆಟ್ಟಿ, ಬದರಿನಾಥ, ಬಂಕಾಪುರ ಸತೀಶ್, ದಯಾನಂದಶೆಟ್ಟಿ, ಬಿ. ಮೋಹನ್‌ಕುಮಾರ, ಮುರುಳಿ, ಸರ್ವೇಶ್, ಕೃಷ್ಣ, ಬಾಬು, ಮಹಿಳಾ ಮಂಡಳಿ ಸದಸ್ಯರಾದ ಶೋಭಾರಾಣಿ, ಮುದುಗಲ್ ಮುಕ್ತ ಇತರರಿದ್ದರು.

    ವರ್ತಕರ ಸಂಘದಿಂದ ಪಾದಯಾತ್ರಿಗಳಿಗೆ ರಾತ್ರಿಯಿಡೀ ಊಟದ ವ್ಯವಸ್ಥೆ, ಜೈನ ಸಮುದಾಯದಿಂದ ಹಾಲು ಹಣ್ಣು ವಿತರಿಸಲಾಯಿತು. ಕಾಂತಿಲಾಲ್, ಉತ್ತಮ್ ಚಂದ್, ಸಮೇರಿಮಲ್ ಜೈನ್, ಮಟ್ಟೇರ್ ಮಂಜುನಾಥ್, ಹನುಮಾನ್ ಚಂದ್, ಬಿ.ಟಿ. ಕೊಟ್ರೇಶ್, ಕೊಟಿಗಿ ಈಶಣ್ಣ, ಗುರುಮೂರ್ತಿ, ಟಿ. ಪ್ರಕಾಶ್, ಷಾಕೀರ್, ಶಬ್ಬೀರ್, ಗೌತಮ್‌ಚಂದ್ ಇತರರಿದ್ದರು.

    ಎಂ.ಪಿ. ಪ್ರಕಾಶ್ ಸಮಾಜ ಮುಖಿ ಟ್ರಸ್ಟ್‌ನಿಂದ ಸತ್ತೂರು ಗ್ರಾಮದಲ್ಲಿ ಭಕ್ತರಿಗೆ ಆರೋಗ್ಯ ತಪಾಸಣೆ, ನೀರು, ಹಣ್ಣು ವಿತರಿಸಲಾಯಿತು. ತುರ್ತು ಸೇವೆಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.

    ಟ್ರಸ್ಟ್‌ನ ಅಧ್ಯಕ್ಷೆ ವೀಣಾ ಮಹಾಂತೇಶ್, ಕಂಚಿಕೇರಿ ಡಾ. ಬಿದರಿ ಕೊಟ್ರೇಶ್, ಹಳ್ಳಿಕೇರಿ ತಾಂಡಾದ ಶೇಖರನಾಯ್ಕ, ಲಿಂಗರಾಜ್, ದಾದಾಪೀರ್, ಚೇತನಕುಮಾರ, ಮನೋಜ್, ಗಾಯತ್ರಿದೇವಿ, ಜಯಪ್ರಕಾಶ್, ತಥಾಗತ್ ಆಸ್ಪತ್ರೆ ಸಿಬ್ಬಂದಿ ಹಾಗೂ ಕಂಚಿಕೇರಿಯ ನಿಸರ್ಗ ಯುವಕರ ತಂಡದ ಸದಸ್ಯರು ಪಾಲ್ಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts