More

    ನೆಲಕ್ಕೆ ಬಾಗಿದ ಭತ್ತ, ರೇಷ್ಮೆ ಷೆಡ್ ಜಖಂ

    ಹರಪನಹಳ್ಳಿ: ತಾಲೂಕಿನಲ್ಲಿ ಶನಿವಾರ ಬಿರುಗಾಳಿ ಸಹಿತ ಸುರಿದ ಮಳೆಗೆ ರೈತರ ರೇಷ್ಮೆಗೂಡಿನ ಷೆಡ್‌ಗಳು ಜಖಂಗೊಂಡಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

    ಚಿರಸ್ತಹಳ್ಳಿಯ ಶಿವರಾಜಕುಮಾರ್ ಅವರ ರೇಷ್ಮೆ ಮನೆ ಸಂಪೂರ್ಣ ಹಾಳಾಗಿದೆ. ಸ್ಥಳಕ್ಕೆ ರೇಷ್ಮೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

    ತಾವರೆಗುಂದಿ ಗ್ರಾಮದ ರೈತ ಮಲ್ಕಪ್ಪ ಅವರ ಎರಡು ಎಕರೆ ಭತ್ತ ಸಂಪೂರ್ಣ ನೆಲಕಚ್ಚಿದೆ.

    ಬೆಣ್ಣಿಹಳ್ಳಿ 66 ಕೆವಿ ಲೈನ್‌ಟವರ್ ವಾಲಿಕೊಂಡು ವಿದ್ಯುತ್ ಸಂಪರ್ಕ ಕಡಿತವಾಗಿದೆ. ಕಣಿವಿಹಳ್ಳಿ, ಗೌರಿಪುರ, ಗಜಾಪುರ ಮತ್ತಿತರ ಕಡೆ 10 ಕಂಬಗಳು, ಶಿವಪುರ, ರಾಗಿ ಮಸಲವಾಡ, ಚಿಕ್ಕಮಜ್ಜಿಗೇರಿ, ಕಂಭತ್ತಹಳ್ಳಿಯಲ್ಲಿ ಒಟ್ಟು 8 ಕಂಬಗಳು ಬಿದ್ದಿವೆ.

    ಸಿಡಿಲಿಗೆ ರಾಗಿ ಮಸಲವಾಡ ಹಾಗೂ ಗಿರಿಯಾಪುರ ತಾಂಡಾಗಳಲ್ಲಿ ವಿದ್ಯುತ್ ಪರಿವರ್ತಕ ಸುಟ್ಟಿದೆ. ಶಿವಪುರ, ಕಣಿವಿಹಳ್ಳಿ ಭಾಗದಲ್ಲಿ 3 ಮರಗಳು ಬಿದ್ದಿವೆ.

    ಹರಪನಹಳ್ಳಿ ಕಸಬಾ 10.6 ಮಿ ಮೀ., ಚಿಗಟೇರಿ ಹೋಬಳಿಯಲ್ಲಿ 12.4 ಮಿ.ಮೀ., ಮಳೆಯಾದ ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts