More

    ನಾಗಪ್ಪನ ಮೂರ್ತಿ, ಹುತ್ತಕ್ಕೆ ಹಾಲು

    ಹನುಮಸಾಗರ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಭ್ರಮ ಸಡಗರದಿಂದ ಜನರು ನಾಗರ ಚತುರ್ಥಿ ಹಬ್ಬ ಆಚರಿಸಿದರು.

    ಕರೊನಾ 3ನೇ ಅಲೆ ಹರಡುವ ಭೀತಿ ಮಧ್ಯೆಯೂ ಚೌತಿ ಆಚರಣೆಯನ್ನು ಜನರು ಸಂಭ್ರಮ ಸಡಗರದಿಂದ ಮಾಡಿದರು. ಮಹಿಳೆಯರು ಮಕ್ಕಳು ಬಗೆಬಗೆಯ ಉಡುಗೆಗಳನ್ನು ತೋಟ್ಟು, ನಾಗಪ್ಪನ ಕಟ್ಟೆ ಹಾಗೂ ತಮ್ಮ ಮನೆಯ ಹತ್ತಿರದ ಹುತ್ತಕ್ಕೆ ಹಾಲು ಎರೆದರು. ಪಟ್ಟಣದ ಹಳೇ ಪ್ರಾಥಮಿಕ ಆರೋಗ್ಯ ಕೇಂದ್ರ ಹತ್ತಿರ, ಪೊಲೀಸ್ ಠಾಣೆಯ ಹತ್ತಿರ, ವಿದ್ಯಾನಗರ, ಆಶ್ರಯ ಕಾಲನಿ, ಬಸವೇಶ್ವರ ದೇವಸ್ಥಾನ, ಅಂಬಾಭವಾನಿ ದೇವಸ್ಥಾನ, ಬಡಿಗೇರ ಕಾಲನಿ, ಕರಿಸಿದ್ದೇಶ್ವರ ಮಠ, ಬನಶಂಕರಿ ದೇವಸ್ಥಾನ, ಅನ್ನದಾನೇಶ್ವರ ದೇವಸ್ಥಾನ ಸೇರಿ ವಿವಿಧೆಡೆ ಸ್ಥಾಪಿತವಾಗಿರುವ ನಾಗದೇವರ ಕಟ್ಟೆಗಳಿಗೆ ಹಾಲನ್ನು ಎರೆದರು. ಚೌತಿ ನಿಮಿತ್ತ ವಿವಿಧ ದೇವಸ್ಥಾನಗಳಲ್ಲಿ ಬೆಳಗ್ಗೆ ದೇವರಿಗೆ ಪಂಚಾಮೃತಾಭಿಷೇಕ, ಮಹಾ ಮಂಗಳಾರತಿ, ನೈವೇದ್ಯ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts