More

    ಎರಡನೇ ಬೆಳೆಗೆ ನೀರು ಹರಿಸಿ

    ಗಂಗಾವತಿ: ಎರಡನೇ ಬೆಳೆಗಾಗಿ ತುಂಗಭದ್ರಾ ಎಡದಂಡೆ ಕಾಲುವೆಗೆ ಏ.30ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಶ್ರೀರಾಮನಗರ ವ್ಯಾಪ್ತಿಯ ರೈತರು ಹಳೇ ಜೀರಾಳ ಕಲ್ಗುಡಿ ಬಳಿ 25ನೇ ವಿತರಣೆ ನಾಲೆ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.


    ಎಪಿಎಂಸಿ ಮಾಜಿ ಸದಸ್ಯ ರೆಡ್ಡಿ ಶ್ರೀನಿವಾಸ ಮಾತನಾಡಿ, ಎರಡನೇ ಬೆಳೆಗೆ ಏ.10ರವರೆಗೆ ನೀರು ಹರಿಸುವುದಾಗಿ ಅಧಿಕಾರಿಗಳು ೋಷಿಸಿದ್ದಾರೆ. ಇದರಿಂದ ಕಾಳು ಕಟ್ಟುವ ಅವಧಿಯಲ್ಲಿ ನೀರಿನ ಕೊರತೆ ಎದುರಾಗಲಿದೆ. ಈ ಭಾಗದ ರೈತರ ಪಾಲಿನಂತೆ 120 ಥ್ರೇಡ್ ನೀರು ಹರಿಸಬೇಕು. ಆದರೆ ಅಧಿಕಾರಿಗಳು 72 ಥ್ರೇಡ್ ಮಾತ್ರ ಹರಿಸುತ್ತಿದ್ದಾರೆ. ವಿತರಣೆ ಟೇಲ್ಯಾಂಡ್ ಭಾಗದಲ್ಲಿ ಕಾಲುವೆ ಒಣಗಿಹೋಗಿದ್ದು, ಬೆಳೆಗಳಿಗೆ ನೀರಿಲ್ಲದಂತಾಗಿದೆ. ಜಲಾಶಯದಲ್ಲಿ ನೀರಿದ್ದರೂ ಅಧಿಕಾರಿಗಳ ನಿರ್ಲಕ್ಷೃದಿಂದ ನದಿಗೆ ಹರಿಸಲಾಗುತ್ತಿದ್ದು, ಕಾರ್ಖಾನೆಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಎರಡನೇ ಬೆಳೆಗೆ ನೀರು ಹರಿಸಬೇಕು. ಯಾವುದೇ ಕಾರಣಕ್ಕೂ ಹರಿಯುವ ಪ್ರಮಾಣ ಕಡಿತಗೊಳಿಸಬಾರದು ಎಂದು ಒತ್ತಾಯಿಸಿದರು.


    ರೈತರಾದ ಶರಣಬಸವ ರೆಡ್ಡಿ, ಕೆ.ಶ್ರೀನಿವಾಸ, ಮುಳ್ಳುಪುಡಿ ಶ್ರೀನಿವಾಸ, ಸೂರ್ಯಚಂದ್ರ ರಾವ್, ಸತ್ಯನಾರಾಯಣ, ಲಿಂಗನಗೌಡ, ಎ.ವಿ.ಎಸ್. ರಾಜು, ಪಂಪಾಪತಿ ಸೇರಿದಂತೆ ಶ್ರೀರಾಮನಗರ, ಜೀರಾಳ ಕಲ್ಗುಡಿ, ಅಂಜೂರಿಕ್ಯಾಂಪ್, ಬಸವಣ್ಣಕ್ಯಾಂಪ್ ಸೇರಿ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts