More

    ಎಸ್ಟಿ ಮೀಸಲಾತಿಗೆ ಸಂಘಟನೆ ಅನಿವಾರ್ಯ

    ವಿಶ್ವಕರ್ಮ ಸಂಘದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಡಿ ಹೇಳಿಕೆ *ಜನಜಾಗೃತಿ ಸಮಾವೇಶ

    ಹಗರಿಬೊಮ್ಮನಹಳ್ಳಿ: ಸ್ವಾವಲಂಬಿ ಜೀವನ ಸಾಗಿಸುತ್ತಿದ್ದ ವಿಶ್ವಕರ್ಮರಿಗೆ ಇದೀಗ ನಿರುದ್ಯೋಗ ಸಮಸ್ಯೆ ಉಲ್ಬಣವಾಗಿದ್ದು, ಎಸ್ಟಿ ಮೀಸಲಾತಿಗಾಗಿ ಸಂಘಟಿತರಾಗುವ ಅನಿವಾರ್ಯತೆ ಉಂಟಾಗಿದೆ ಎಂದು ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.

    ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ತಾಲೂಕು ವಿಶ್ವಕರ್ಮ ಸಮಾಜದಿಂದ 25ನೇ ವರ್ಷದ ಜಗದ್ಗುರು ಶ್ರೀಮೌನೇಶ್ವರ ಮಹೋತ್ಸವ ಹಾಗೂ 121ನೇ ವಿಶ್ವಕರ್ಮ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು.

    ವಿಶ್ವಕರ್ಮರು ವಾಸ್ತವತೆಯನ್ನು ಅರಿತು ಬದುಕಬೇಕಿದೆ. ದೇವರ ಮೂರ್ತಿಗಳನ್ನು ನಿರ್ಮಿಸಿ ಭಕ್ತಿ ಕೇಂದ್ರಗಳ ಜೀರ್ಣೋದ್ಧಾರಕ್ಕೆ ಕಾರಣವಾದ ಸಮುದಾಯವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿದೆ. ಅಂಬೇಡ್ಕರ್ ಅಶಯದಂತೆ ನಿರ್ಲಕ್ಷಿತ ಸಮುದಾಯಗಳಿಗೆ ಮೀಸಲಾತಿ ನೀಡಬೇಕೆಂಬುದು ಸಂವಿಧಾನ ನೀಡಿರುವ ಹಕ್ಕು. ಎಸ್ಟಿ ಮೀಸಲಾತಿಗೆ ಹಕ್ಕೊತ್ತಾಯಕ್ಕಾಗಿ ಸಂಘಟನೆ ಅಗತ್ಯ, ಆದ್ದರಿಂದ ರಾಜ್ಯಾದಂತ ಸಂಚರಿಸಿ ಜನಜಾಗೃತಿ ಮೂಡಿಸುವ ಕಾರ್ಯ ರಾಜ್ಯ ಸಂಘಟನೆ ಮಾಡುತ್ತಿದೆ ಎಂದರು.

    ಇದಕ್ಕೂ ಮುನ್ನಾ ಪಟ್ಟಣದ ಹಗರಿ ಆಂಜನೇಯ ದೇಗುಲದಿಂದ ವಿಶ್ವಕರ್ಮ ಸಮುದಾಯ ಭವನದವರೆಗೆ ಶ್ರೀಜಗದ್ಗುರು ಮೌನೇಶ್ವರ ಭಾವಚಿತ್ರವನ್ನು ವಿವಿಧ ವಾದ್ಯ ಮೂಲಕ ನೂರಾರು ಮಹಿಳೆಯರು ಕಳಸವನ್ನು ಹೊತ್ತು ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು.

    ಕೊಪ್ಪಳದ ಮುದ್ದಾಬಳ್ಳಿಯ ಏಕದಂಡಿಗಿ ಮಠದ ಗುರುನಾಥ ಸ್ವಾಮೀಜಿ, ಬಸವರಾಜ ಪುರೋಹಿತರು ಸಾನ್ನಿಧ್ಯ ವಹಿಸಿದ್ದರು, ಮಾಜಿ ಶಾಸಕ ಕೆ.ನೇಮಿರಾಜನಾಯ್ಕ, ಗೌರವಾಧ್ಯಕ್ಷ ಸಿ.ಎಚ್.ಸಿದ್ಧರಾಜು, ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎ.ರಾಘವೇಂದ್ರ, ಯುವ ಘಟಕದ ಅಧ್ಯಕ್ಷ ಕೆ.ಮಂಜುನಾಥ, ಪ್ರಮುಖರಾದ ಲೋಹಿತ್ ಕಲ್ಲೂರು, ಡಾ.ಸಿದ್ದಪ್ಪ ಬಡಿಗೇರ್, ಇಟ್ಟಿಗಿ ಸಿದ್ದರಾಮಾಚಾರ್, ಕಮ್ಮಾರ ಮಂಜುನಾಥ, ಮುತ್ತು ಚಿಂತ್ರಪಳ್ಳಿ, ಬಿ.ರಾಘವೇಂದ್ರ, ಮೌನೇಶ್ ಕಡ್ಲಬಾಳು, ಪಿ.ಸಂತೋಷ, ಬಿ.ವೀರೇಶ್, ಎ.ಮೌನೇಶ್, ಎ.ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts