More

    ಶಾಸಕ ಭೀಮಾನಾಯ್ಕರಿಂದ ಕಾಂಗ್ರೆಸ್ ಇಬ್ಭಾಗ

    ಹಗರಿಬೊಮ್ಮನಹಳ್ಳಿ: ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರನ್ನು ಶಾಸಕ ಭೀಮಾನಾಯ್ಕ ಇಬ್ಭಾಗ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ಆರೋಪಿಸಿದರು.

    ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನದೆ ಕಾರ್ಯಕರ್ತರ ಪಡೆ ಹೊಂದಿದೆ. ಆದರೆ, ಭೀಮಾನಾಯ್ಕ ಜಾತಿ ಲೆಕ್ಕಾಚಾರದಡಿ ನಾಯಕರನ್ನು ಪ್ರತ್ಯೇಕಿಸಿ, ಭಿನ್ನಮತ ಸೃಷ್ಟಿಸುತ್ತಿದ್ದಾರೆ. ಜೆಡಿಎಸ್‌ನಲ್ಲಿ ಶಾಸಕರಾಗಿದ್ದಾಗ ಭೀಮನಾಯ್ಕ ಎಂಎಲ್‌ಸಿ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದರಿಂದ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು ಎಂದರು.

    ಹಬೊಹಳ್ಳಿ, ಹೂವಿನಹಡಗಲಿ ಮೀಸಲು ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಪಾಲಿಸಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಈಗಾಗಲೇ ಈ ಬಗ್ಗೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಲಾಗಿದೆ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಿಷ್ಯ ಬಳಗದಲ್ಲಿ ಶಾಸಕ ಭೀಮನಾಯ್ಕ ಗುರುತಿಸಿಕೊಂಡಿದ್ದರೂ ಕುರುಬ ಸಮುದಾಯಕ್ಕೆ ಅನ್ಯಾಯ ಮಾಡಿರುವುದು ಖಂಡನೀಯ. ಜಿಲ್ಲಾದ್ಯಂತ ದಲಿತರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇತರ ಕ್ಷೇತ್ರಗಳಲ್ಲಿ ಗೆಲವು ಸಾಧಿಸಲು ಹಬೊಹಳ್ಳಿ ಕ್ಷೇತ್ರದಲ್ಲಿ ಸ್ಥಳೀಯ ದಲಿತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

    ಕಾಂಗ್ರೆಸ್‌ನ ಬ್ಲಾಕ್ ಮಾಜಿ ಅಧ್ಯಕ್ಷ ಉಲುವತ್ತಿ ಸೋಮಲಿಂಗಪ್ಪ, ಎಚ್‌ಎ.ಕೊಟ್ರೇಶ್, ಜಿಪಂ ಮಾಜಿ ಸದಸ್ಯರಾದ ಹೆಗ್ಡಾಳ್ ರಾಮಣ್ಣ, ಪಿ.ಎಚ್.ದೊಡ್ಡರಾಮಣ್ಣ, ಮುಖಂಡರಾದ ಸಿ.ಬಸವರಾಜ, ಬುಡ್ಡಿ ಬಸವರಾಜ, ಕನ್ನಿಹಳ್ಳಿ ಚಂದ್ರಶೇಖರ್, ಸೋಗಿ ಕೊಟ್ರೇಶ್, ಚಿಲುಗೋಡು ಮಧುಸೂಧನ್, ಎಚ್.ರಾಘವೇಂದ್ರ, ಬಸವರಾಜ, ದೊಡ್ಡಬಸಪ್ಪ, ಶಾಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts