More

    ಏಕತಾ ಮೂರ್ತಿಗೆ ಸಿಐಎಸ್​ಎಫ್​ ಕಾವಲು; ಆಗಸ್ಟ್​ 25ರಂದು 275 ಸಿಬ್ಬಂದಿ ನಿಯೋಜನೆ

    ಗುಜರಾತ್​ನ ಕೆವಾಡಿಯಾದಿಂದ 3.5 ಕಿಮೀ ದೂರದಲ್ಲಿ ನರ್ಮದಾ ನದಿ ತೀರದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್​ ಅವರ 182 ಮೀ ಎತ್ತರದ ಏಕತಾ ಮೂರ್ತಿಗೆ ಆಗಸ್ಟ್​ 25ರಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್​)ಯ ಸಿಬ್ಬಂದಿ ಕಾವಲು ಕಾಯಲಿದ್ದಾರೆ.

    ಗೃಹ ಸಚಿವಾಲಯದ ಅನುಮೋದನೆ ನೀಡಿದ್ದು, ಮೊದಲ ಹಂತದಲ್ಲಿ ಸಿಐಎಸ್​ಎಫ್​ನ 272 ಸಿಬ್ಬಂದಿಯನ್ನು ಏಕತಾ ಮೂರ್ತಿ ಕಾವಲಿಗೆ ನಿಯೋಜಿಸಲಾಗುವುದು ಎಂದು ಸಿಐಎಸ್​ಎಫ್​ ಡಿಜಿ ರಾಜೇಶ್​ ರಂಜನ್​ ತಿಳಿಸಿದ್ದಾರೆ. ಇದನ್ನೂ ಓದಿ: ತಂದೆಯ ಲ್ಯಾಪ್​ಟಾಪ್​ನಲ್ಲಿ ತನ್ನ ಬೆತ್ತಲೆ ಫೋಟೋಗಳನ್ನು ನೋಡಿ ಬೆಚ್ಚಿಬಿದ್ದ ಯುವತಿ: ಮುಂದೇನಾಯ್ತು?

    ಕರೊನಾ ಕಾರಣದಿಂದ ಏಕತಾ ಮೂರ್ತಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಮತ್ತೆ ಇಲ್ಲಿ ಪ್ರವಾಸೋದ್ಯಮ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸಪ್ಟೆಂಬರ್​ 2ರಿಂದ ಪ್ರವಾಸಿಗರು ಏಕತಾ ಮೂರ್ತಿ ವೀಕ್ಷಣೆಗೆ ಆಗಮಿಸಲು ಅವಕಾಶ ಕೊಡಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಅಲ್ಲಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
    ಈ ಏಕತಾ ಮೂರ್ತಿಯನ್ನು 2018ರ ಅಕ್ಟೋಬರ್​ 31ರಂದು, ಸರ್ದಾರ್​ ವಲ್ಲಭಭಾಯಿ ಅವರ 143ನೇ ಜನ್ಮದಿನದಂದು ಲೋಕಾರ್ಪಣೆ ಮಾಡಿದ್ದಾರೆ. 3,050 ಕೋಟಿ ರೂ.ವೆಚ್ಚದಲ್ಲಿ ಏಕತಾ ಮೂರ್ತಿಯನ್ನು ನಿರ್ಮಿಸಲಾಗಿದೆ. (ಏಜೆನ್ಸೀಸ್​)

    ಲಾಕ್​ಡೌನ್​ನಲ್ಲಿ ಕ್ರಿಕೆಟ್​ ಆಡುವುದೇ ಮರೆತುಹೋಗುತ್ತೆ ಎಂದು ಹೆದರಿದ್ದ ಕೆಎಲ್​ ರಾಹುಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts