More

    ಅತಿಥಿ ಉಪನ್ಯಾಸಕರ ಮುಷ್ಕರ ಮುಂದುವರಿಕೆ: ಹೊಸಪೇಟೆಯಲ್ಲಿ ಸಚಿವ ಆನಂದ ಸಿಂಗ್‌ಗೆ ಮನವಿ ಸಲ್ಲಿಕೆ

    ಹೊಸಪೇಟೆ: ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಮುಷ್ಕರ ಶನಿವಾರ ಎರಡನೇ ದಿನ ಪೂರೈಸಿತು.

    ರಾಜ್ಯದಲ್ಲಿ 14800 ಉಪನ್ಯಾಸಕರು ಕಡಿಮೆ ಗೌರವಧನಕ್ಕೆ ಕೆಲಸ ಮಾಡುತ್ತಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಯುಜಿಸಿ ನಿಯಮಾನುಸಾರ ತಿಂಗಳಿಗೆ 50 ಸಾವಿರ ರೂ. ವೇತ ನೀಡಬೇಕು. ಆದರೆ 11 ರಿಂದ 13 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು. ಕೂಡಲೇ ಸರ್ಕಾರ ಗೌರವಧನ ಹೆಚ್ಚಳ ಮಾಡಬೇಕು. ದೆಹಲಿ, ಹರಿಯಾಣ, ಆಂಧ್ರ ಪ್ರದೇಶ, ಒಡಿಸ್ಸಾ ಮಾದರಿಯಲ್ಲಿ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.ಇದಕ್ಕೂ ಮುನ್ನ ನಗರದ ರಾಣಿಪೇಟೆಯಲ್ಲಿನ ಸಚಿವ ಆನಂದ ಸಿಂಗ್ ಕಚೇರಿಗೆ ತೆರಳಿ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿದರು. ಸಮಸ್ಯೆ ಆಲಿಸಿದ ಸಚಿವ ಆನಂದ ಸಿಂಗ್, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಸ್ಪಂದಿಸುವಂತೆ ತಿಳಿಸುವುದಾಗಿ ಭರವಸೆ ನೀಡಿದರು.

    ಅತಿಥಿ ಉಪನ್ಯಾಸಕರಾದ ಡಾ.ಷಣ್ಮುಖಪ್ಪ, ನಾಗವೇಣಿ, ಉಜ್ಜಪ್ಪ, ದಂಡಿ ಪದ್ಮಜಾ, ಅಕ್ಕಿ ಮಲ್ಲಿಕಾರ್ಜುನ, ವಾಸುದೇವ, ಡಾ.ಸಂದೀಪ್, ಡಾ.ಎಸ್ ಚೌಡೇಶ, ಡಾ.ಎಚ್.ಎಂ.ತಿಪ್ಪೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts