More

    ನೆಲಕಚ್ಚಿದ ಬಾಳೆ, ಗೋವಿನಜೋಳ

    ಹಾನಗಲ್ಲ: ತಾಲೂಕಿನ ಚಿಕ್ಕಾಂಶಿಹೊಸೂರ ಗ್ರಾಮದಲ್ಲಿ ಐದು ದಿನ ನಡೆಯಲಿರುವ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಹಾಕಲಾಗಿದ್ದ ಜಾತ್ರಾ ಮಂಟಪ ಹಾಗೂ ಶಾಮಿಯಾನ ಶನಿವಾರ ಸುರಿದ ಮಳೆ, ಬಿರುಗಾಳಿಗೆ ಬಿದ್ದು ನಷ್ಟ ಉಂಟಾಗಿದೆ.

    ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಂದಿಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಜಾತ್ರೆ ಹಿನ್ನೆಲೆಯಲ್ಲಿ ಅರ್ಧ ಎಕರೆಯಷ್ಟು ಪೆಂಡಾಲ್ ಹಾಕಲಾಗಿತ್ತು. ಶನಿವಾರ ಸಂಜೆ ಭಾರಿ ಗಾಳಿ ಬೀಸಿದ ಪರಿಣಾಮ ಪೆಂಡಾಲ್ ಬಟ್ಟೆ, ಪೈಪ್‌ಗಳು ಹಾಗೂ ಕುರ್ಚಿಗಳು ಹಾರಿ ಹೋಗಿದ್ದು, ಲಕ್ಷಾಂತರ ಹಾನಿಯಾಗಿದೆ ಎಂದು ಪೆಂಡಾಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

    ಇನ್ನೊಂದೆಡೆ ಗ್ರಾಮದ ಕೆಲ ತೋಟಗಳಲ್ಲಿನ ಬಾಳೆ ಗಿಡಗಳು ನೆಲಕ್ಕುರುಳೀವೆ. ಗೋವಿನಜೋಳ ಬೆಳೆ ದೊಡ್ಡ ಪ್ರಮಾಣದಲ್ಲಿ ನೆಲಕಚ್ಚಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts