More

    ಸಂಡೇ ಕರ್ಫ್ಯೂಗೆ ಉತ್ತಮ ಬೆಂಬಲ

    ಮಡಿಕೇರಿ: ಕರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಆದೇಶಿಸಿರುವ ಸಂಡೇ ಕರ್ಫ್ಯೂಗೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.

    ಸತತ 33 ಗಂಟೆ ಕಾಲ ಕೊಡಗು ಸಂಪೂರ್ಣ ಸ್ತಬ್ಧವಾಗಿತ್ತು. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಬಂದ್ ಆಗಿತ್ತು. ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಕೊಡಗಿನ ಜನ ಲಾಕ್‌ಡೌನ್ ಪಾಲಿಸಿದರು. ಆಸ್ಪತ್ರೆ, ಮೆಡಿಕಲ್ ಸ್ಟೋರ್, ಫಾರ್ಮಸಿ, ಪೆಟ್ರೋಲ್ ಬಂಕ್‌ಗಳು ತೆರೆದ್ದವು. ಮುಂಜಾನೆ 5 ರಿಂದ ಬೆಳಗ್ಗೆ 9 ಗಂಟೆ ವರೆಗೆ ಹಾಲು, ದಿನಪತ್ರಿಕೆಗಳ ವಿತರಣೆ ಹಾಗೂ ದಿನಸಿ, ತರಕಾರಿ, ಹಣ್ಣುಹಂಪಲು, ಮಾಂಸ ಮಾರಾಟ ಹಾಗೂ ಖರೀರದಿಗೆ ಅವಕಾಶ ನೀಡಲಾಯಿತು.

    ಜಿಲ್ಲೆಯಲ್ಲಿ ಹೆಚ್ಚಿನ ಅಂಗಡಿಗಳು ತೆರೆಯದೆ ಬಂದ್‌ಗೆ ಕೈಜೋಡಿಸಿದರು. ಸಂತೆ, ಬೀದಿಬದಿ ವ್ಯಾಪರ ಮುಂತಾದ ಯಾವುದೇ ವಹಿವಾಟು ನಡೆಯಲಿಲ್ಲ.

    ಆರೋಗ್ಯ ಸೇವೆ: ತುರ್ತು, ವೈದ್ಯಕೀಯ, ಸರಕು ಸಾಗಣಿಕೆ ಮತ್ತು ಸರ್ಕಾರಿ, ಕೋವಿಡ್-19 ಕರ್ತವ್ಯ ನಿಮಿತ್ತ ಸಂಚರಿಸುವ ವಾಹನಗಳ ಹೊರತಾಗಿ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರಲಿಲ್ಲ. ಈ ಹಿನ್ನೆಲೆ ವಾಹನ ಸಂಚಾರ ಸಂಪೂರ್ಣ ಶಬ್ಧಗೊಂಡಿತ್ತು. ನಿಗದಿಯಾಗಿದ್ದ ಮದುವೆ ಕಾರ್ಯಕ್ರಮಗಳಿಗೆ ಆಯಾ ಗ್ರಾಮ ಪಂಚಾಯಿತಿ, ನಗರ ಹಾಗೂ ಪಟ್ಟಣದ ಸ್ಥಳೀಯ ಸಂಸ್ಥೆಯಿಂದ ಅವಕಾಶ ನೀಡಲಾಗಿತ್ತು.
    ಸಾರಿಗೆ ಸೇವೆ ಬಂದ್: ಕರ್ಫ್ಯೂ ಹಿನ್ನೆಲೆಯಲ್ಲಿ ಎಲ್ಲ ಸಾರಿಗೆ ಸೇವೆ ಸ್ಥಗಿತಗೊಳಿಸಲಾಗಿತ್ತು. ಜಿಲ್ಲೆಯಲ್ಲಿ ಈಗಾಗಲೇ ಬಸ್ ಸಂಚಾರ ನಿಲ್ಲಿಸಲಾಗಿದ್ದು, ಸಂಚರಿಸುತ್ತಿದ್ದ ಬೆರಳೆಣಿಕೆ ಬಸ್‌ಗಳ ಸೇವೆಯೂ ಭಾನುವಾರ ನಿಂತಿತ್ತು. ಆಟೋ, ಟ್ಯಾಕ್ಸಿ ಸಂಚಾರ ಕೂಡ ಇರಲಿಲ್ಲ.

    ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸಂಡೇ ಕರ್ಫ್ಯೂಗೆ ಉತ್ತಮ ಬೆಂಬಲ ದೊರೆಯಿತು. ಅನಗತ್ಯವಾಗಿ ಜನರು ಹೊರಬಾರದೆ ಸರ್ಕಾರದ ಆದೇಶ ಪಾಲಿಸಿದರು. ಮುಖ್ಯ ಬೀದಿಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಅನಗತ್ಯ ಸಂಚಾರ ನಿಯಂತ್ರಣಕ್ಕೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಸೀಲ್‌ಡೌನ್ ಪ್ರದೇಶದಲ್ಲೂ ತೀವ್ರ ನಿಗಾವಹಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts