More

    ಗ್ರಾಪಂ ಖಜಾನೆ ತುಂಬಿಸುತ್ತಿವೆ ಚುನಾವಣೆ!

    ಬೆಳಗಾವಿ: ಅತಿವೃಷ್ಟಿ, ಕೋವಿಡ್-19 ಇನ್ನಿತರ ಕಾರಣಗಳಿಂದ ತೆರಿಗೆ ವಸೂಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಗ್ರಾಪಂಗಳಿಗೆ ಪ್ರಸಕ್ತ ಚುನಾವಣೆಯಿಂದ ಅದೃಷ್ಟ ಖುಲಾಯಿಸಿದೆ. ಒಂದೇ ವಾರದಲ್ಲಿ 1.5 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಸಂಗ್ರಹವಾಗಿದೆ.

    ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಮತ್ತು ಅವರಿಗೆ ಸೂಚಕರಾಗಿರುವವರು ಗ್ರಾಪಂಗಳಲ್ಲಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು 5-6 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಸಾವಿರಾರು ರೂಪಾಯಿ ತೆರಿಗೆ ಹಣ ಪಾವತಿಸುತ್ತಿದ್ದಾರೆ. ಅಲ್ಲದೆ, ಬೆಂಬಲಿಗರು ಸಹ ತೆರಿಗೆ ಪಾವತಿಸುತ್ತಿರುವುದರಿಂದ ಗ್ರಾಮ ಪಂಚಾಯಿತಿ ಖಜಾನೆ ತುಂಬುತ್ತಲಿದೆ.

    ಣೆಯಿಂದ ಅದೃಷ್ಟ ಖುಲಾಯಿಸಿದೆ. ಒಂದೇ ವಾರದಲ್ಲಿ 1.5 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಸಂಗ್ರಹವಾಗಿದೆ.
    ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಮತ್ತು ಅವರಿಗೆ ಸೂಚಕರಾಗಿರುವವರು ಗ್ರಾಪಂಗಳಲ್ಲಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು 5-6 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಸಾವಿರಾರು ರೂಪಾಯಿ ತೆರಿಗೆ ಹಣ ಪಾವತಿಸುತ್ತಿದ್ದಾರೆ. ಅಲ್ಲದೆ, ಬೆಂಬಲಿಗರು ಸಹ ತೆರಿಗೆ ಪಾವತಿಸುತ್ತಿರುವುದರಿಂದ ಗ್ರಾಮ ಪಂಚಾಯಿತಿ ಖಜಾನೆ ತುಂಬುತ್ತಲಿದೆ.

    ಅಭಿವೃದ್ಧಿ ಕೆಲಸ ಸ್ಥಗಿತ: ಜಿಲ್ಲೆಯ 506 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಷಿಕ 46 ರಿಂದ 54 ಕೋಟಿ ರೂ. ತೆರಿಗೆ ವಸೂಲಿ ಗುರಿ ಹಾಕಿಕೊಳ್ಳಲಾಗುತ್ತಿದೆ. ಅದರಲ್ಲಿ ಶೇ. 40 ಹಣವನ್ನು ಸಿಬ್ಬಂದಿ ವೇತನಕ್ಕೆ ಪಾವತಿಸಲಾಗುತ್ತಿದೆ. ಆದರೆ, ಅತಿವೃಷ್ಟಿ, ಅನಾವೃಷ್ಟಿ, ಕೋವಿಡ್-19, ಸಿಬ್ಬಂದಿ ನಿರ್ಲಕ್ಷೃ, ಸೋರಿಕೆ ಇನ್ನಿತರ ಕಾರಣಗಳಿಂದ ವಾರ್ಷಿಕ ಕೇವಲ 20 ಕೋಟಿ ರೂ. ವರೆಗೆ ಸಂಗ್ರಹವಾಗುತ್ತಿತ್ತು. ಇದರಿಂದಾಗಿ ಗ್ರಾಪಂ ಸಿಬ್ಬಂದಿ ವೇತನ, ಇನ್ನಿತರ ಖರ್ಚು ವೆಚ್ಚಗಳಿಗೂ ಅನುದಾನ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸಗಳೂ ಸ್ಥಗಿತಗೊಳ್ಳುತ್ತಿವೆ.

    ನಿಧಿ-2 ಖಾತೆಗೆ ಜಮಾ: ಗ್ರಾಪಂ ಚುನಾವಣೆ ಘೋಷಣೆಯಾಗಿರುವ 477 ಗ್ರಾಪಂಗಳ 8,195 ಸದಸ್ಯ ಸ್ಥಾನಗಳಿಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಮತ್ತು ಸೂಚಕರು ಸುಮಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಸಾವಿರಾರು ರೂ. ತೆರಿಗೆ ಪಾವತಿಸುತ್ತಿದ್ದಾರೆ.

    ಡಿ. 8ರಿಂದ ಡಿ. 14ರ ವರೆಗೆ ಸುಮಾರು 1.5 ಕೋಟಿ ರೂ. ವರೆಗೆ ತೆರಿಗೆ ಪಾವತಿಯಾಗಿರುವ ಕುರಿತು ಮಾಹಿತಿ ಸಿಕ್ಕಿದೆ. ಆದರೆ, ಗ್ರಾಪಂ ಅಧಿಕಾರಿಗಳು ನಿಧಿ-2 ಖಾತೆಗೆ ಹಣ ಜಮಾ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಧಿಕೃತವಾಗಿ ಎಷ್ಟು ವಸೂಲಿ ಆಗಿದೆ ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ಚುನಾವಣೆಯ ಬಳಿಕ ಸರಿಯಾದ ಅಂಕಿ-ಸಂಖ್ಯೆ ಸಿಗಲಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.

    ಅಭ್ಯರ್ಥಿಗೆ ಸೂಚಕರಾಗುವವರಿಗೂ ಭಾರಿ ಡಿಮಾಂಡ್

    ಚುನಾವಣೆ ಎದುರಿಸುತ್ತಿರುವ ಜಿಲ್ಲೆಯ 477 ಗ್ರಾಂ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ತಮ್ಮ ಜತೆಗೆ ಸೂಚಕರ ತೆರಿಗೆ ಬಾಕಿಯನ್ನೂ ಪಾವತಿಸುತ್ತಿದ್ದಾರೆ. ಒಂದೊಂದು ಗ್ರಾಮದಲ್ಲಿ ಅಭ್ಯರ್ಥಿಗಳಿಗಿಂತ ಸೂಚಕರ ಬಾಕಿ ತೆರಿಗೆಯೇ ಹೆಚ್ಚು ಪಾವತಿಯಾಗುತ್ತಲಿದೆ. ಏಕೆಂದರೆ, ಇಂತಹ ವ್ಯಕ್ತಿ ಸೂಚಕರಾದರೆ ತನ್ನ ಗೆಲುವು ಖಚಿತ ಎಂಬ ನಂಬಿಕೆ ಕೆಲವೊಂದು ಗ್ರಾಮದಲ್ಲಿದೆ. ಹೀಗಾಗಿ ಸ್ಪರ್ಧಿಸುವ ಅಭ್ಯರ್ಥಿಗೆ ಸೂಚಕರಾಗುವವರಿಗೂ ಭಾರಿ ಡಿಮಾಂಡ್ ಬಂದಿದೆ ಎಂದು ರಾಮದುರ್ಗ ತಾಲೂಕು ನಿವಾಸಿ ಪಾಂಡುರಂಗ ನಾಯಕರ್ ತಿಳಿಸಿದ್ದಾರೆ.

    ಹಳ್ಳಿಗಳಲ್ಲಿ ಸಮಯಕ್ಕೆ ಸರಿಯಾಗಿ ತೆರಿಗೆ ವಸೂಲಿ ಆಗದಿರುವ ಹಿನ್ನೆಲೆಯಲ್ಲಿ ದಿನನಿತ್ಯದ ಚಟುವಟಿಕೆಗಳಿಗೆ ಗ್ರಾಪಂಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸುತ್ತಿದ್ದಾರೆ. ಇದರಿಂದ ಗ್ರಾಮ ಪಂಚಾಯಿತಿಗಳಿಗೆ ಬರಬೇಕಿದ್ದ ಹಳೇ ತೆರಿಗೆಯೂ ಜಮಾ ಆಗುತ್ತಿದೆ.
    | ಎಸ್.ಬಿ. ಮುಳ್ಳಳ್ಳಿ ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ), ಬೆಳಗಾವಿ

    ಗ್ರಾಪಂನ ಎಲ್ಲ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದು, ತೆರಿಗೆ ವಸೂಲಿ ಆಗಿರುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು
    ತೆರಿಗೆ ಬಾಕಿ ಉಳಿಸಿಕೊಂಡಿ ರುವುದನ್ನು ಚುನಾವಣಾ ಸಿಬ್ಬಂದಿ ಖಚಿತ ಪಡಿಸಿಕೊಳ್ಳುತ್ತಾರೆ. ಬಾಕಿ ಉಳಿಸಿಕೊಂಡಿರುವವರು ತೆರಿಗೆ ಕಟ್ಟಿಯೇ ಸ್ಪರ್ಧಿಸುತ್ತಾರೆ.
    | ಎಚ್.ವಿ. ದರ್ಶನ ಸಿಇಒ, ಜಿಪಂ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts