More

    ಗ್ರಾಮ ಪಂಚಾಯಿತಿ ಉಪಚುನಾವಣೆ ಫಲಿತಾಂಶ ; ಸ್ಥಳೀಯ ಸಂಸ್ಥೆಯಲ್ಲಿ ಕೈ-ಕಮಲ ಸಮಬಲ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿನ ವಿವಿಧ ಸ್ಥಳೀಯ ಆಡಳಿತ ಸಂಸ್ಥೆಗಳ ಉಪ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು ತೀವ್ರ ಪೈಪೋಟಿಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು.

    ಚಿಕ್ಕಬಳ್ಳಾಪುರ ತಾಲೂಕಿನ ಎಸ್.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಕರಿಗಾನಪಾಳ್ಯದ ರುಕ್ಮಿಣಮ್ಮ 4 ಮತಗಳ ಮತ್ತು ಮುದ್ದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕಂಗಾನಹಳ್ಳಿಯ ಓಂ ಶಕ್ತಿಮೂರ್ತಿ 101 ಮತಗಳ ಅಂತರದಿಂದ, ಅಜ್ಜವಾರ ಗ್ರಾಪಂ ವ್ಯಾಪ್ತಿಯ ನಾಯನಹಳ್ಳಿ ಪದ್ಮಾ 277 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿನ ಗ್ರಾಪಂಗಳಲ್ಲಿನ ಐದು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿರುವುದು ಸಂತಸ ತಂದಿದೆ. ಇದು ಜಿಲ್ಲೆಯ ಜನರು ಅಭಿವೃದ್ಧಿ ಪರ ಇದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಜತೆಗೆ ಜನಪರ ಕೆಲಸಗಳನ್ನು ಕೈಗೊಳ್ಳಲು ಮತ್ತಷ್ಟು ಬಲ ನೀಡಿದೆ. ಪ್ರತಿಪಕ್ಷಗಳ ಕೆಲ ನಾಯಕರ ಅಪಪ್ರಚಾರಗಳಿಗೆ ಕಿವಿಗೊಡದೆ ಮತದಾರರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ಹೇಳಿದರು.

    ಕಾಂಗ್ರೆಸ್-ಬಿಜೆಪಿಗೆ ಎರಡೇರು ಸ್ಥಾನ

    ಗೌರಿಬಿದನೂರು: ತಾಲೂಕಿನ 7 ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ 2, ಕಾಂಗ್ರೆಸ್ 2, ಜೆಡಿಎಸ್, ಕೆಎಚ್‌ಪಿ ಹಾಗೂ ಕೆಂಪರಾಜು ಬಣ ತಲಾ ಒಂದೊಂದು ಸ್ಥಾನಗಳನ್ನು ಗೆದ್ದಿದೆ. ಹಾಲಗನಹಳ್ಳಿ ಗ್ರಾಪಂ ಚಂದನದೂರಿನ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸುಮಾ 365 ಮತ, ಮಿಣಕನಗುರ್ಕಿ ಗ್ರಾಪಂನ ರಾಯನಕಲ್ಲು ಬಿಜೆಪಿ ಬೆಂಬಲಿತ ಡಿ.ಜಿ.ಸರೋಜಮ್ಮ 390 ಮತ, ನಾಮಗೊಂಡ್ಲು ಗ್ರಾಪಂ ಪಕ್ಷೇತರ ಅಭ್ಯರ್ಥಿ( ಕೆಂಪರಾಜು ಬೆಂಬಲಿತ) ನಂಜುಂಡಪ್ಪ 377 ಮತ, ಗೌಡಗೆರೆ ಗ್ರಾಪಂ ವರವಣಿಯ ಬಿಜೆಪಿ ಬೆಂಬಲಿತ ರತ್ನಮ್ಮ 495 ಮತ, ರಮಾಪುರ ಗ್ರಾಪಂನ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ನಾರಾಯಣಪ್ಪ 395 ಮತ್ತು ವೆಂಕಟೇಶ್ ಪ್ರಸಾದ್ 343 ಮತ, ಬೇವನಹಳ್ಳಿ ಗ್ರಾಪಂನ ಕಂಬಾಲಹಳ್ಳಿಯಲ್ಲಿ ಕೆಎಚ್‌ಪಿ ಬಣ ಬೆಂಬಲಿತ ವೆಂಕಟೇಶ್ 256 ಮತ ಪಡೆದು ಗೆಲುವು ಸಾಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts