More

    ಗ್ರಾಪಂ ಚುನಾವಣೆ ಫಲಿತಾಂಶ ಪ್ರಭಾವ: ಕೈಯಲ್ಲಿ ದೊಣ್ಣೆ, ಬಡಿಗೆ ಹಿಡಿದ ಮಹಿಳೆಯರು!

    ಹಾಸನ: ಗ್ರಾಮ ಪಂಚಾಯಿತಿ ಚುನಾವಣೆಯ ಸೋಲಿನಿಂದಾಗಿ ಸಿನಿಮೀಯ ರೀತಿಯಲ್ಲಿ ರಸ್ತೆಯಲ್ಲೇ ಜನರು ಕಾದಾಟ ನಡೆಸಿರುವ ಘಟನೆ ಅರಸೀಕೆರೆ ತಾಲ್ಲೂಕಿನ ಬೈರಗೊಂಡನಹಳ್ಳಿ ಬೋವಿಕಾಲನಿಯಲ್ಲಿ ನಡೆದಿದೆ.

    ಗ್ರಾಮದ ಆನಂದ್ ಹಾಗು ಉಮೇಶ್ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಉಮೇಶ್​ ಗೆಲುವು ಸಾಧಿಸಿದ್ದಾರೆ. ಫಲಿತಾಂಶದಿಂದ ಬೆನ್ನಲ್ಲೇ ಪರಾಜಿತ ಜೆಡಿಎಸ್ ಅಭ್ಯರ್ಥಿ ಬೆಂಬಲಿಗರು ಹಾಗು ಬಿಜೆಪಿ ಬೆಂಬಲಿಗರ ನಡುವೆ ಕಲಹ ನಡೆದಿದೆ.

    ಇದನ್ನೂ ಓದಿ: Web Exclusive | ಗ್ರಾಪಂ ಚುನಾವಣೆ ಸೋತವರಿಗೆ ಸಾಲ ತೀರಿಸೋ ಚಿಂತೆ; ಗೆದ್ದವರಿಗೆ ಹಣ ವಾಪಸ್ ತೆಗೆಯೋ ಲೆಕ್ಕಾಚಾರ

    ನಡು ರಸ್ತೆಯಲ್ಲಿ ನಿಂತು ಜನರು ಪರಸ್ಪರ ಕಲ್ಲು ತೂರಿಕೊಂಡಿದ್ದಾರೆ. ಕೈಯಲ್ಲಿ ದೊಣ್ಣೆ, ಬಡಿಗೆ ಹಿಡಿದ ಮಹಿಳೆಯರಿಂದಲೇ ಕಲಹ ಆರಂಭವಾಯಿತು. ಇತ್ತ ಮಹಿಳೆಯರ ಜಗಳದಲ್ಲಿ ಪುರುಷರು ಮದ್ಯಪ್ರವೇಶ ಮಾಡಿದ್ದರಿಂದ ಕಲಹ ತೀವ್ರ ಸ್ವರೂಪ ಪಡೆದುಕೊಂಡಿತು.

    ಘಟನೆಯಲ್ಲಿ ಎರಡೂ ಗುಂಪಿನ ಹಲವರಿಗೆ ಗಾಯಗಳಾಗಿದ್ದು, ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ಘಟನಾ ಸಂಬಂಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಕರೊನಾ ಲಸಿಕೆ ಬಳಕೆಗೆ ಓಕೆ: ಭಾರತದಲ್ಲಿ ಕೋವಿಶೀಲ್ಡ್ ತುರ್ತು ಬಳಕೆಗೆ ಸಿಕ್ಕಿತು ಹಸಿರು ನಿಶಾನೆ

    ಪ್ರಧಾನಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ರೈತ: ಡೆತ್​ನೋಟ್​ನಲ್ಲಿದೆ ನೋವಿನ ಮಾತು!

    ಸಿದ್ದು, ಡಿಕೆಶಿ ವಿರುದ್ಧ ದೆಹಲಿ ನಾಯಕರಿಗೆ ದೂರು?

    ಎಲ್ಲೋ ಏನೋ ಎಡವಟ್ಟಾಗಿದೆ, ಅಪಾಯ ಎದುರಾಗಿದೆ… ಸಿಎಂ ಕುರ್ಚಿ ಮೇಲೆ ಅನುಮಾನ ಮೂಡಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts