More

    ಆಯುರ್ವೇದಕ್ಕಿದೆ ರೋಗ ದೂರ ಮಾಡುವ ಶಕ್ತಿ

    ಯಾದಗಿರಿ: ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಆಯುರ್ವೇದ ಶಾಸ್ತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದ್ದು, ಇಂದಿಗೂ ಆಯುರ್ವೇದ ಔಷಧಿಗಳಿಂದ ಅನೇಕ ವ್ಯಾದಿಗಳು ಶಮನವಾಗುತ್ತಿವೆ ಎಂದು ಜಿಪಂ ಅಧ್ಯಕ್ಷ ರಾಜಶೇಖರ ಪಾಟೀಲ್ ತಿಳಿಸಿದರು.

    ಸೋಮವಾರ ಇಲ್ಲಿನ ಆಯುಷ್ ಇಲಾಖೆ ಸಭಾಂಗಣದಲ್ಲಿ ಜಿಲ್ಲೆಯ ಶಿಕ್ಷಕರಿಗೆ ಹಮ್ಮಿಕೊಂಡ ಜಿಲ್ಲಾ ಮಟ್ಟದ ಆಯುಷ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಪುರಾತನ ಕಾಲದಲ್ಲಿಯೇ ಅಸಂಖ್ಯ ಮಾರಕ ರೋಗಗಳಿಗೆ ಪರಿಣಾಮಕಾರಿಯಾದ ಔಷಧಿಗಳನ್ನು ಹಾಗೂ ಯಶಸ್ವಿ ಚಿಕಿತ್ಸೆಗಳನ್ನು ನೀಡಿ ಜಗತ್ತಿಗೆ ಮಾದರಿಯಾಗಿದೆ. ಅದರಲ್ಲೂ ಆಯುರ್ವೇದಕ್ಕೆ ಅನೇಕ ರೋಗ ದೂರ ಮಾಡುವ ಶಕ್ತಿ ಇದೆ ಎಂದರು.

    ಜಿಪಂ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪುಟಗಿ ಮಾತನಾಡಿ, ನಮ್ಮ ಐದು ಕೈ ಬೆರಳುಗಳು ಒಟ್ಟುಗೂಡಿದರೆ ಮುಷ್ಠಿಯಲ್ಲಿ ಶಕ್ತಿ ಕೇಂದ್ರಿಕೃತವಾಗುವಂತೆ ಆಯುರ್ವೇದ, ಯೋಗ, ಯುನಾನಿ, ಸಿದ್ಧ, ಹೋಮಿಯೋಪತಿ ಚಿಕಿತ್ಸಾ ವಿಧಾನಗಳು ಒಗ್ಗೂಡಿ ಆಯುಷ್ ಇಲಾಖೆಯಾಗಿ ಸದೃಢ ಭಾರತ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

    ಜಿಲ್ಲಾ ಆಯುಷ್ ಅಧಿಕಾರಿ ಡಾ.ಪ್ರಕಾಶ ರಾಜಾಪೂರ ಅವರು, ಆರೋಗ್ಯಕರ ಆಹಾರ ಪದ್ಧತಿ, ಯೋಗ ಪದ್ಧತಿ, ರೋಗಗಳ ವರ್ಗೀಕರಣ, ಚಿಕಿತ್ಸಾ ವಿಧಾನ, ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿವರ ನೀಡಿದರು.

    ಸಂಪನ್ಮೂಲ ವ್ಯಕ್ತಿ ಡಾ.ಸಂತೋಷಕುಮಾರ, ಡಾ.ಸಾಯಿ ಪ್ರಶಾಂತ, ಡಾ.ನವೀನ, ಡಾ.ಕಿರಣ ಕುಮಾರಿ, ಬಿಇಒ ಚಂದ್ರಕಾಂತರಡ್ಡಿ, ಡಾ. ಮಲ್ಲಪ್ಪ ಯರಗೋಳ ಇದ್ದರು. ಡಾ. ಎಂ ಬಿ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾಜರ್ುನ ಕಾವಲಿ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts