More

    ಸಕ್ಕರೆನಾಡಲ್ಲಿ ಗೌರಿ ಹಬ್ಬದ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು

    ಮಂಡ್ಯ : ಗೌರಿ-ಗಣೇಶ ಹಬ್ಬದ ಅಂಗವಾಗಿ ಮಂಗಳವಾರ ಹಲವು ದೇವಾಲಯಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಸಾರ್ವಜನಿಕರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.
    ಮುಂಜಾನೆಯಿಂದಲೇ ಮಹಿಳೆಯರು ದೇವಾಲಯಗಳಿಗೆ ತೆರಳಿ ಗೌರಿಗೆ ಪ್ರಥಮ ಪೂಜೆ ಸಲ್ಲಿಸಿ ಧನ್ಯತಾ ಭಾವ ಮೆರೆದರು. ಬೆಳಗ್ಗೆಯಿಂದ ಸಂಜೆಯವರೆವಿಗೂ ನಿರಂತರವಾಗಿ ಯುವತಿಯರು, ಮಹಿಳೆಯರು ಹಾಗೂ ಎಲ್ಲಾ ಜನತೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಗೌರಿ ಮಾತೆಗೆ ಹರಿಶಿನ-ಕುಂಕುಮ, ಬಳೆ, ರವಿಕೆ ಕಣ, ಬಿಚ್ಚೋಲೆ ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಸುಮಂಗಲಿಯರು ಪರಸ್ಪರ ಬಳೆಯನ್ನು ವಿನಿಮಯ ಮಾಡಿಕೊಂಡು ಮುತೈದೆತನ ಶಾಶ್ವತವಾಗಿರಲೆಂದು ಪ್ರಾರ್ಥಿಸಿದರು.
    ಇನ್ನು ಗೌರಿ-ಗಣೇಶ ಹಬ್ಬ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದೆ. ಗೌರಿ-ಗಣೇಶ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿದೆ. ನಗರಸಭೆ ವತಿಯಿಂದ ಒಳಾಂಗಣ ಕ್ರೀಡಾಂಗಣ ಬಳಿ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರೆ, ಕೆಲ ವ್ಯಾಪಾರಿಗಳು ತಮ್ಮದೇ ಆದ ಅಂಗಡಿಗಳನ್ನು ಬಾಡಿಗೆಗೆ ಪಡೆದು ಮಾರಾಟ ಮಾಡುತ್ತಿದ್ದುದು ಕಂಡುಬಂತು. ಇನ್ನು ಕೆಲವು ರಸ್ತೆ ಬದಿಗಳಲ್ಲೂ ಗಣೇಶ ಮೂರ್ತಿಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದರೆ, ಮತ್ತೊಂದೆಡೆ ಕ್ಯಾಂಟರ್‌ಗಳಲ್ಲೂ ಸಹ ಇಟ್ಟುಕೊಂಡು ಹಣ್ಣು ಮತ್ತು ತರಕಾರಿ ಮಾರಾಟದ ಮಾದರಿಯಲ್ಲೂ ಮಾರಾಟ ಮಾಡುತ್ತಿದ್ದ ದೃಶ್ಯಗಳೂ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts