More

    ಹಾಲಸ್ವಾಮಿಯ ಪಲ್ಲಕ್ಕಿ ಉತ್ಸವದ ಸಡಗರ

    ನ್ಯಾಮತಿ: ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿಯ ಪಲ್ಲಕ್ಕಿ ಉತ್ಸವ ಮತ್ತು ತೇಜಿ ಮೆರವಣಿಗೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.

    ಸೋಮವಾರ ಅಮಾವಾಸ್ಯೆಯ ಸಂಜೆ ಗುಳ್ಯಮ್ಮ ದೇವಿಯ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ, ಪೂಜಾ ಕಾರ್ಯಗಳು, ಹೊಳಲೂರು ಶಿವಲಿಂಗಶಾಸ್ತ್ರಿ ನೇತೃತ್ವದಲ್ಲಿ ಶ್ರೀ ದುರ್ಗಾ ಹೋಮ ರಾತ್ರಿ ಜಾಗರಣೆ ನೆರವೇರಿದವು.

    ಮಂಗಳವಾರ ಮುಂಜಾನೆ ತುಂಗಭದ್ರಾ ನದಿಯಲ್ಲಿ ಸುಮಂಗಲೆಯರು ಗಂಗಾಪೂಜೆ, ಶ್ರೀ ಮಠದ ಕರ್ತೃಗದ್ದುಗೆಗೆ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದ ಬೀದಿಗಳಲ್ಲಿ ಮಠದಿಂದ ಅಲಂಕೃತ ಪಲ್ಲಕ್ಕಿಯನ್ನು ಆರೋಹಣ ಮಾಡಿ ಉತ್ಸವ ಚಾಲನೆಗೊಂಡಿತು.

    ವಿವಿಧ ರಸ್ತೆಗಳಲ್ಲಿ ಮರವಣಿಗೆ ಸಾಗುವಾಗ ಭಕ್ತರು ಪಲ್ಲಕ್ಕಿಗೆ ನಮಸ್ಕರಿಸಿ, ಪೂಜೆ ಸಲ್ಲಿಸಿದರು. ಭದ್ರಕಾಳಿ ಕುಣಿತ, ವೀರಭದ್ರೇಶ್ವರ ಕುಣಿತ, ಚಿಟ್ಟಿ ವಾದ್ಯಮೇಳ ಮೊದಲಾದ ಮಂಗಳವಾದಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.

    ಸೋಮನಹಳ್ಳಿ ಶ್ರೀ ಬಸವೇಶ್ವರ ಭಜನಾ ಯುವಕ ಸಂಘ, ಗೋವಿನಕೋವಿ ಶ್ರೀ ಬಸವೇಶ್ವರ ಭಜನಾ ಯುವಕ ಸಂಘ, ಕುರುವ ಕೆ.ಶೇಖರಪ್ಪ , ಗೋವಿನಕೋವಿ ಶ್ರೀ ದುರ್ಗಾಮ್ಮ ದೇವಿ ಯುವಕರ ಸಂಘದವರು ಮಂಗಳವಾದ್ಯಗಳೊಂದಿಗೆ ಸಂಚರಿಸಿದರು.

    ಹಾಲಸ್ವಾಮಿ ಮಠದ ಸೇವಾ ಸಮಿತಿಯ ಗೌರವಾಧ್ಯಕ್ಷ ಎಚ್. ಪಾಲಾಕ್ಷಪ್ಪಗೌಡ್ರು, ಅಧ್ಯಕ್ಷ ಎಸ್.ಈ. ರಮೇಶ, ಕಾರ್ಯದರ್ಶಿ ವಿ.ಎಚ್. ರುದ್ರೇಶ, ಹಾಲಿನ ಡೇರಿಯ ಅಧ್ಯಕ್ಷ ಚನ್ನೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿ.ವಿ.ಚಂದ್ರಣ್ಣ ಇತರರು ಪಾಲ್ಗೊಂಡಿದ್ದರು.

    ಹಾವೇರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಹಾಲಸ್ವಾಮೀಜಿ ಅವರ ದರ್ಶನ, ಆಶೀರ್ವಾದ ಪಡೆದರು. ಸೇವಾ ಸಮಿತಿಯವರು ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts