More

    ಜೆಇಇ ಪರೀಕ್ಷೆಯಲ್ಲಿ ರಾಜ್ಯಕ್ಕೆ ಫಸ್ಟ್​ ಬಂದರೂ ತೃಪ್ತಿಯಿಲ್ಲ! ಮತ್ತೆ ಪರೀಕ್ಷೆ ಬರೆಯಲಿದ್ದಾಳೆ ಈ ವಿದ್ಯಾರ್ಥಿನಿ

    ಲಖನೌ: ಹೆಣ್ಣು ಮಕ್ಕಳಿಗೆ ಅದೆಷ್ಟೇ ಅಂಕ ಬಂದರೂ ತೃಪ್ತಿ ಪಡುವುದೇ ಇಲ್ಲವೆಂದು ಆಗಾಗ ಕೆಲವರು ತಮಾಷೆ ಮಾಡುವುದನ್ನು ಕೇಳಿರುತ್ತೀರಿ. ಆದರೆ ಈ ವಿದ್ಯಾರ್ಥಿನಿಯನ್ನು ನೋಡಿದ ಮೇಲೆ ಅದು ನಿಜವೆಂದು ನಿಮಗೆನಿಸಬಹುದು. ಜೆಇಇ ಪರೀಕ್ಷೆಯಲ್ಲಿ ಶೇ. 99.98 ಅಂಕ ಬಂದು ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದರೂ ತೃಪ್ತಿಯಾಗದ ವಿದ್ಯಾರ್ಥಿನಿ ಮತ್ತೊಮ್ಮೆ ಜೆಇಇ ಪರೀಕ್ಷೆ ಬರೆಯುವ ನಿರ್ಧಾರ ಮಾಡಿದ್ದಾಳಂತೆ!

    ಹೌದು. ಇದು ನಿಜವೇ. ಉತ್ತರ ಪ್ರದೇಶದ ಪಾಲ್ ಅಗರ್ವಾಲ್ ಈ ಬಾರಿ ಜೆಇಇ ಪರೀಕ್ಷೆ ಬರೆದಿದ್ದಳು. ಫೆಬ್ರವರಿಯಲ್ಲಿ ನಡೆದ ಪರೀಕ್ಷೆಯಲ್ಲಿ 6.20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ ಸುಮಾರು 1.87 ಲಕ್ಷ ವಿದ್ಯಾರ್ಥಿನಿಯರೇ ಇದ್ದರು. ಪಾಲ್​ ಅಗರ್ವಾಲ್​ಗೆ ಶೇ.99.98 ಅಂಕ ಬಂದಿದೆ. ವಿದ್ಯಾರ್ಥಿನಿಯರ ಸಾಲಿನಲ್ಲಿ ಪಾಲ್​ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಟಾಪರ್​ ಆಗಿ ಹೊರಹೊಮ್ಮಿದ್ದಾರೆ.

    ಆದರೆ ಪಾಲ್​ಗೆ ಈ ಫಲಿತಾಂಶದಿಂದ ತೃಪ್ತಿಯಾಗಿಲ್ಲವಂತೆ. ಜೆಇಇ ಪರೀಕ್ಷೆಯಲ್ಲಿ ಶೇ. 100 ಅಂಕ ಗಳಿಸುವುದು ಅವಳ ಗುರಿಯಂತೆ. ಅದಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಸಿದ್ಧತೆ ಆರಂಭಿಸಿದ್ದಾಳಂತೆ. ಈಗಾಗಲೇ ಬೆಂಗಳೂರಿನ ಐಐಎಸ್ಸಿ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡಿರುವ ಆಕೆ ಐಐಟಿ ಬಾಂಬೆಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಲು ಇಚ್ಚಿಸಿದ್ದಾಳಂತೆ.

    ಪಾಲ್ ಅಗರ್ವಾಲ್ ಗಾಜಿಯಾಬಾದ್ ನಿವಾಸಿ. ಆಕೆಯ ತಾಯಿ ಕ್ಲಿನಿಕಲ್ ಮನಶ್ಶಾಸಜ್ಞೆ ಮತ್ತು ತಂದೆ ಉದ್ಯಮಿ. ಪ್ರತಿದಿನ ಆರು ತಾಸು ನಿದ್ರೆ ಮಾಡುವ ಪಾಲ್​ 17 ಗಂಟೆಗಳ ಕಾಲ ವಿದ್ಯಾಭ್ಯಾಸ ಮಾಡುತ್ತಾಳೆ. ಡಾ.ಎಪಿಜೆ ಅಬ್ದುಲ್​ ಕಲಾಂ ಅವರನ್ನೇ ಆದರ್ಶವನ್ನಾಗಿಟ್ಟುಕೊಂಡಿದ್ದಾಳೆ. ಕೇವಲ ವಿದ್ಯಾಭ್ಯಾಸ ಮಾತ್ರವಲ್ಲದೆ ನೃತ್ಯದ ಕಡೆಯೂ ಒಲವಿದೆಯಂತೆ. ಭರತನಾಟ್ಯದಲ್ಲಿ ತರಬೇತಿ ಹೊಂದಿರುವ ಆಕೆ ಹಿಪ್​ಹಾಪ್​ ನೃತ್ಯವನ್ನೂ ಅಷ್ಟೇ ಇಷ್ಟಪಡುತ್ತಾಳಂತೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಇನ್ನು ಮುಂದೆ ಶಾಲೆಗಳಲ್ಲಿ ಪ್ರತಿದಿನ 1 ಗಂಟೆ ದೇಶಭಕ್ತಿ ಕ್ಲಾಸ್​!

    ಕಪ್ಪೆ ಬಗ್ಗೆ ನಿರ್ಲಕ್ಷ್ಯ ಬೇಡ.. ವಿಷಪೂರಿತ ಕಪ್ಪೆಗಳೂ ಇವೆ! ಮುಟ್ಟಿದರೂ ಸಾಯುತ್ತೀರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts