More

    ಸಂತ ಅನ್ನಮ್ಮ ಚರ್ಚ್‌ನಲ್ಲಿ ಗುಡ್ ಫ್ರೈಡೆ ಆಚರಣೆ

    ವಿರಾಜಪೇಟೆ: ಪಟ್ಟಣದ ಐತಿಹಾಸಿಕ ಸಂತ ಅನ್ನಮ್ಮ ಚರ್ಚ್‌ನಲ್ಲಿ ಗುಡ್ ಫ್ರೈಡೆಯನ್ನು ಶುಕ್ರವಾರ ಆಚರಿಸಲಾಯಿತು.

    ಕಳೆದ ಫೆ.14 ರಂದು ವಿಭೂತಿ ಬುಧವಾರ ಆಚರಣೆ ನಡೆದು ಒಟ್ಟು 47 ದಿನಗಳವರೆಗೆ ಕ್ರೈಸ್ತರು ಉಪವಾಸ, ಪ್ರಾರ್ಥನೆ, ಸಸ್ಯಾಹಾರ ಸೇವನೆ ಮುಂತಾದ ಆಚರಣೆಯೊಂದಿಗೆ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ಗುಡ್ ಫ್ರೈಡೆಯ ಹಿಂದಿನ ದಿನ ಶುಭ ಗುರುವಾರದಂದು ಸಂಜೆ ವಿಶೇಷ ಬಲಿಪೂಜೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

    ಶುಭ ಶುಕ್ರವಾರದಂದು ಜನರು ಬೆಳಗ್ಗೆಯಿಂದಲೇ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಸಂಜೆ ಶಿಲುಬೆಯ ಹಾದಿ ಮತ್ತು ಪ್ರಹಸನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲದೆ ಬೈಬಲ್ ಸಂದೇಶ ವಾಚನ ಕಾರ್ಯಕ್ರಮ, ಶಿಲುಬೆಗೆ ಗೌರವ ಅರ್ಪಣೆ ಕಾರ್ಯಕ್ರಮ ಜರುಗಿತು.

    ಧಾರ್ಮಿಕ ಕಾರ್ಯಕ್ರಮದಲ್ಲಿ ಸಂತ ಅನ್ನಮ್ಮ ಚರ್ಚ್‌ನ ಪ್ರಧಾನ ಗುರು ರೆ.ಫಾ.ಡಾ. ದಯಾನಂದ ಪ್ರಭು, ರೆ.ಫಾ.ಐಸಾಕ್ ರತ್ನಾಕರ್, ಫಾ.ಅಲ್ಫೋನ್ಸೋ ಬ್ರಿಟ್ಟೊ, ಫಾ.ಚಾರ್ಲ್ಸ್ ಅವರು ಪಾಲ್ಗೊಂಡಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts