More

    ನಂಬಿಕೆಯಿದ್ದರೆ ಭಗವಂತನ ರಕ್ಷಣೆ

    ಸರಗೂರು: ನಂಬಿಕೆ, ವಿಶ್ವಾಸವಿದ್ದಾಗ ಮಾತ್ರ ಭಗವಂತನ ರಕ್ಷಣೆ ಸಿಗಲಿದೆ. ಆದ್ದರಿಂದ ಎಲ್ಲರೂ ಭಕ್ತಿ ಮಾರ್ಗದಲ್ಲಿ ನಂಬಿಕೆ ಇಡಬೇಕು ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶ್ಲಾಘಿಸಿದರು.

    ತಾಲೂಕಿನ ಹೆಗ್ಗನೂರು ಗ್ರಾಪಂ ವ್ಯಾಪ್ತಿಯ ಕಾಟವಾಳು ಗ್ರಾಮದಲ್ಲಿ ಬುಧವಾರ ಹುಲಿ ಮಾಸ್ತಮ್ಮ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಅನಾವರಣ ಮಾತನಾಡಿದರು.

    ದೇವಸ್ಥಾನಗಳು ಮನುಷ್ಯನ ಧಾರ್ಮಿಕ ಜಾಗೃತಿಯ ತಾಣಗಳು. ಭಗವಂತನ ಇರುವಿಕಯಿಂದಲೇ ಉತ್ತಮ ಮಳೆ, ಬೆಳೆ ಆಗುತ್ತಿದೆ. ಇದರಿಂದ ಎಲ್ಲರೂ ದೇವರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು ಎಂದರು.

    ಶ್ರೀ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಶಿವಕುಮಾರ ಸ್ವಾಮೀಜಿಯ ಪುತ್ಥಳಿ ಸ್ಥಾಪನೆಯಿಂದ ಅವರ ಜೀವನದ ಮೌಲ್ಯಗಳು ಹಾಗೂ ಆದರ್ಶಗಳನ್ನು ಜನಮಾನಸಕ್ಕೆ ಪರಿಚರಿಯಿಸಿದಂತಾಗಲಿದೆ. ಸುತ್ತೂರು ಶ್ರೀ ಕ್ಷೇತ್ರ ಸಿದ್ದಗಂಗಾ ಶ್ರೀ ಕ್ಷೇತ್ರಗಳೆರಡು ದೇಹದ ಎರಡು ಕಣ್ಣುಗಳಿದ್ದಂತೆ. ಎಲ್ಲರೂ ಕಾಯಕಯೋಗಿ ಬಸವಣ್ಣ ಅವರ ತತ್ವ ಸಿದ್ಧಾಂತಗಳನ್ನು ಅನುಸರಿಸಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.

    ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಸಮಾಜದ ಸುಧಾರಣೆಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಮಠಗಳು ಇವೆ.ಅದೇ ರೀತಿ ಮೈಸೂರು ಭಾಗದಲ್ಲಿ ಕೂಡಾ ಇವೆ. ತುಮಕೂರಿನ ಶ್ರೀ ಸಿದ್ದಗಂಗಾ ಮಠ, ಸುತ್ತೂರಿನ ಶ್ರೀಮಠಗಳಲ್ಲಿ ಅಕ್ಷರ, ಅನ್ನ ದಾಸೋಹ ಒದಗಿಸುವ ಮೂಲಕ ಮಾನವಶ್ರೇಷ್ಠವಾದ ಕಾರ್ಯಗಳನ್ನು ಮಾಡುತ್ತಿವೆ ಎಂದರು.

    ದೇವನೂರು ಮಠದ ಮಹಾಂತ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಂಚೀಪುರದ ಬಸವಣ್ಣ ಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ, ವಿರಕ್ತ ಮಠದ ಮಹದೇವ ಸ್ವಾಮೀಜಿ, ಕಿರಿಯ ತೋಂಟದಾರ್ಯ ಸ್ವಾಮೀಜಿ, ಬೀಚನಹಳ್ಳಿ ಮಠದ ನಾಗೇಂದ್ರ ಸ್ವಾಮೀಜಿ, ಮಾದಾಪುರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಜಕ್ಕಹಳ್ಳಿ ಮಠದ ಶಿವಕುಮಾರ ಸ್ವಾಮೀಜಿ ಆರ್ಶೀವಚನ ನೀಡಿದರು.

    ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಕೋಟೆ ತಾಲೂಕು ಅಧ್ಯಕ್ಷ ಮೊತ್ತ ಬಸವರಾಜಪ್ಪ, ಸರಗೂರು ತಾಲೂಕು ಅಧ್ಯಕ್ಷ ಡಿ.ಜಿ.ಶಿವರಾಜಪ್ಪ, ಮೈಮುಲ್‌ನ ದ್ರಾಕ್ಷಾಯಿಣಿ ಬಸವರಾಜಪ್ಪ, ಮುಖಂಡರಾದ ಅಯಣ್ಣ ಸ್ವಾಮಿ, ಮಹದೇವಪ್ಪ, ಚಿಕ್ಕವೀರನಾಯಕ, ಚಂದ್ರಶೇಖರ, ಮೋಹನ್ ಕುಮಾರ್, ಗ್ರಾಮದ ಮುಖಂಡರಾದ ಕೆ.ಎಸ್.ವೀರಭದ್ರಪ್ಪ, ರಾಜಪ್ಪ, ಬಸಪ್ಪ, ಶಿವರುದ್ರಪ್ಪ, ಗುರುಸ್ವಾಮಿ, ಮುತ್ತುರಾಜ್,ಮಲ್ಲಪ್ಪ, ಗುರುಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts