More

    ಪೌರ ಕಾರ್ಮಿಕರಿಗೆ ಉಪಾಹಾರ ಭತ್ಯೆ ನೀಡಿ

    ಹುಬ್ಬಳ್ಳಿ: ಪೌರ ಕಾರ್ಮಿಕರಿಗೆ ಇಂದು ಗುಣಮಟ್ಟದ ಉಪಾಹಾರ ಸಿಗದಿರುವುದು ಖೇದಕರ ಸಂಗತಿ. ಬೆಳಗ್ಗೆ ಉಪಾಹಾರ ನೀಡುವ ಬದಲು ಅವರ ಬ್ಯಾಂಕ್ ಖಾತೆಗೆ ಉಪಾಹಾರ ಭತ್ಯೆ ಜಮೆ ಮಾಡಲು ಸರ್ಕಾರ ಕ್ರಮ ವಹಿಸಬೇಕು ಎಂದು ಹು-ಧಾ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಆಗ್ರಹಿಸಿದರು.

    ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಮಾತನಾಡಿದ ಅವರು, ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2225 ಪೌರ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಉಪಾಹಾರ ಒದಗಿಸಲು 2.85 ಕೋಟಿ ರೂ. ಮೊತ್ತದ ಗುತ್ತಿಗೆ ಕೂಡ ನೀಡಲಾಗಿದೆ. ಆದರೆ, ಕಳಪೆ ಉಪಾಹಾರ ಪೂರೈಸಲಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ಪೌರ ಕಾರ್ಮಿಕರು ಉಪಾಹಾರ ತ್ಯಜಿಸಿ ಪ್ರತಿಭಟಿಸಿದ ಘಟನೆಗಳು ನಡೆದಿವೆ ಎಂದು ಸದನದ ಗಮನಕ್ಕೆ ತಂದರು.

    ಉಪಾಹಾರ ಭತ್ಯೆಯನ್ನು ಅವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಜಮೆ ಮಾಡಿದರೆ ತಮ್ಮಿಷ್ಟದ ಉಪಹಾರ ಸೇವಿಸಲು ಅನುಕೂಲವಾಗುತ್ತದೆ. ಸಚಿವರು ಈ ಕುರಿತು ಗಂಭೀರವಾಗಿ ಚಿಂತಿಸಬೇಕು ಎಂದರು.

    ಉತ್ತರಿಸಿದ ಸಚಿವ ಪ್ರಿಯಾಂಕ ಖರ್ಗೆ ಅವರು, ಈಗಾಗಲೇ ಗುತ್ತಿಗೆದಾರರಿಗೆ ಎರಡು ಬಾರಿ ನೋಟಿಸ್ ನೀಡುವುದರೊಂದಿಗೆ ದಂಡ ಕೂಡ ವಸೂಲಿ ಮಾಡಲಾಗಿದೆ. ಹೀಗೆ ಮುಂದುವರಿದರೆ ಪೌರ ಕಾರ್ಮಿಕರ ಬ್ಯಾಂಕ್ ಖಾತೆಗೆ ಉಪಾಹಾರ ಭತ್ಯೆ ಜಮೆ ಮಾಡುವ ಕುರಿತು ಕ್ರಮವಹಿಸುವ ಬಗ್ಗೆ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts