More

    ಮಗಳೆಂದೂ ನೋಡದೆ ವಿದ್ಯುತ್​​ ಶಾಕ್​ ಕೊಟ್ಟು ಬಯಲಲ್ಲಿ ಬಿಸಾಕಿ ಹೋದರು: ಪ್ರೀತಿಸಿದ್ದೇ ತಪ್ಪಾಯಿತು ಈ ಜೋಡಿಗೆ

    ಮಹೋಬಾ: ಪ್ರೀತಿಸಿ ಓಡಿಹೋದರೆಂಬ ಸಿಟ್ಟಿಗೆ ಯುವತಿಯ ಮನೆಯವರೇ ಪ್ರೇಮಿಗಳಿಗೆ ಎಲೆಕ್ಟ್ರಿಕ್​ ಶಾಕ್​ ಕೊಟ್ಟು, ಸತ್ತರೆಂದು ತಿಳಿದು ಬಯಲಲ್ಲಿ ಎಸೆದು ಹೋಗಿರುವ ಘಟನೆ ಉತ್ತರ ಪ್ರದೇಶದ ಮಹೋಬಾದಲ್ಲಿ ನಡೆದಿದೆ.

    23 ವರ್ಷದ ದೀಪಕ್​ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಯುವತಿಯ ಮನೆಯವರು ಈ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ. ಮದುವೆಗೆ ನಿರಾಕರಿಸಿದ್ದರು. ಜನವರಿ 29ರಂದು ಪ್ರೇಮಿಗಳಿಬ್ಬರು ಊರು ಬಿಟ್ಟು ಓಡಿ ಹೋಗಿದ್ದಾರೆ. ಮಗಳು ಮನೆಯಲ್ಲಿ ಕಾಣಲಿಲ್ಲವೆಂದಾಕ್ಷಣ ಯುವತಿಯ ಮನೆಯವರು ಹುಡುಕಾಟ ಆರಂಭಿಸಿದ್ದಾರೆ. ದುರಾದೃಷ್ಟವಶಾತ್​​ ಅವರಿಬ್ಬರು ಓಡಿಹೋದ ಮಾರನೇ ದಿನವೇ ಚಿಕಾಸಿ ಪ್ರದೇಶದ ಅತ್ರಾ ಬಾರೌಲಿ ಗ್ರಾಮದ ಬಳಿ ಯುವತಿಯ ಕುಟುಂಬಸ್ಥರ ಬಳಿ ಸಿಕ್ಕಿ ಬಿದ್ದಿದ್ದಾರೆ.

    ಬಾರೌಲಿಯಿಂದ ಮಹೋಬಾಕ್ಕೆ ಇಬ್ಬರನ್ನೂ ಎಳೆದುಕೊಂಡು ಹೋಗಿರುವ ಕುಟುಂಬಸ್ಥರು ಇಬ್ಬರೂ ಎಚ್ಚರ ತಪ್ಪುವವರೆಗೂ ಎಲೆಕ್ಟ್ರಿಕ್​ ಶಾಕ್​ ನೀಡಿದ್ದಾರೆ. ಎಚ್ಚರ ತಪ್ಪಿದ ಅವರನ್ನು ನೋಡಿ ಸತ್ತಿದ್ದಾರೆ ಎಂದು ತಿಳಿದು ಅಲ್ಲೇ ಹತ್ತಿರದ ಬಯಲೊಂದರಲ್ಲಿ ಎಸೆದು ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಸ್ವಲ್ಪ ಸಮಯದ ನಂತರ ಎಚ್ಚರವಾದ ಪ್ರೇಮಿಗಳು ಪೊಲೀಸರ ಬಳಿ ಬಂದು ದೂರು ದಾಖಲಿಸಿದ್ದಾರೆ. ಯುವತಿಯ ಕುಟುಂಬಸ್ಥರಾದ ಶೋಧನ್​, ಧರ್ಮೇಂದ್ರ ಮತ್ತು ಲಕ್ಷ್ಮಣ್​ ಹೆಸರಿನಲ್ಲಿ ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಶೀಘ್ರವೇ ಅಪರಾಧಿಗಳನ್ನು ಸೆರೆಹಿಡಿಯುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts