More

    ವಿದ್ಯಾರ್ಥಿನಿಯರಿಗೆ ಪುಂಡರ ಕಿರಿಕಿರಿ

    ಧನಂಜಯ ಎಸ್.ಹಕಾರಿ ಚಿತ್ರದುರ್ಗ
    ಹಿಂದುಳಿದ ಜಿಲ್ಲೆಯ ಮೊದಲ ಪಿಯು ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪುಂಡ-ಪೋಕರಿಗಳ ಕಿರಿ,ಕಿರಿ ಶುರುವಾಗಿದೆ.

    ಪಕ್ಕದಲ್ಲೇ ಪೊಲೀಸ್ ಠಾಣೆ ಇದ್ದರೂ ಒನಕೆ ಓಬವ್ವನ ಊರಿನ ವಿದ್ಯಾರ್ಥಿನಿಯರು ಭಯದಲ್ಲೇ ಕಾಲೇಜಿನತ್ತ ಹೆಜ್ಜೆ ಹಾಕುವ ಪರಿಸ್ಥಿತಿ ಇದೆ. ಕಾಲೇಜು ರೋಮಿಯೋಗಳ ಉಪಟಳ ಇಲ್ಲಿಲ್ಲದೆ ಹೋದರೂ ಕುಡುಕರು, ಪುಂಡರ ಅಸಭ್ಯ ವರ್ತನೆ ಎಲ್ಲೆ ಮೀರುತ್ತಿದೆ. ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕೆಂಬ ಒತ್ತಾಯ ಕೇಳಿ ಬಂದಿದೆ.

    ನೈಟ್ ಬೀಟ್?

    ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಲು ಭಯ ಪಡುತ್ತಿರುವ ಕುರಿತು ಗಮನ ಸೆಳೆದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರಾತ್ರಿ ಗಸ್ತು ಕಾಯಲು ಇಬ್ಬರು ಸಿಬ್ಬಂದಿ ನಿಯೋಜಿಸಿದೆ. ಆದರಿಲ್ಲಿ ನೈಟ್ ಬೀಟ್‌ಗಿಂತ ಹಗಲಿನಲ್ಲಿ ರಕ್ಷಣೆ ಬೇಕಿದೆ.
    1972ರಲ್ಲಿ ಆರಂಭವಾದ ಕಾಲೇಜಿನಲ್ಲಿ ಬರೋಬ್ಬರಿ 2280 ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಇವರ ರಕ್ಷಣೆಗೆ ಸ್ಥಳೀಯ ಆಡಳಿತ ಗಮನ ನೀಡಬೇಕಿದೆ.

    ವಿಜ್ಞಾನ ಕಾಲೇಜು ಕಟ್ಟಡವನ್ನು ಹೊಸದಾಗಿ ನಿರ್ಮಿಸಲಾಗಿದೆ. ಕಲಾ ಮತ್ತು ವಾಣಿಜ್ಯ ವಿಭಾಗದ ಕಟ್ಟಡ ಹಳೆಯದಾಗಿದೆ. ಇವೆರಡರ ಮಧ್ಯದ ರಸ್ತೆ ಬಂದ್ ಮಾಡಿದರೆ ಸಾಕು ವಿದ್ಯಾರ್ಥಿನಿಯರು ನಿರ್ಭಯ ವಾಗಿ ಓಡಾಡಬಹುದು.ಆದರೆ ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎನ್ನುತ್ತಾರೆ ಕಾಲೇಜು ಸಿಬ್ಬಂದಿಯೊಬ್ಬರು.

    ರಸ್ತೆಯಲ್ಲಿ ತ್ಯಾಜ್ಯ ನೀರು

    ಕಾಲೇಜಿನ ಒಂದು ಭಾಗದಲ್ಲಿ ರಸ್ತೆ ವಿಸ್ತರಣೆಗೆ ಕಾಂಪೌಂಡ್ ತೆರವುಗೊಳಿಸ ಲಾಗಿದೆ. ಹೊಸ -ಹಳೇ ಕಟ್ಟಡದ ನಡುವಿನ ರಸ್ತೆಯಲ್ಲಿ ಆಗಾಗ್ಗೆ ಒಳ ಚರಂಡಿ ತುಂಬಿ ಹರಿಯುತ್ತದೆ.

    ಕಲಾ- ವಿಜ್ಞಾನ ಕಾಲೇಜು ವಿಭಾಗಗಳ ಮಧ್ಯದ ರಸ್ತೆಯಲ್ಲಿ ಪುಂಡರ ಹಾವಳಿ ಒಂದೆಡೆಯಾದರೆ, ಸುತ್ತಲಿನ ಜನ ಇಲ್ಲಿ ಕಸ ತಂದು ಸುರಿಯುತ್ತಾರೆ. ಕಟಿಂಗ್ ಶಾಪ್‌ನವರು ಕೂದಲು ಎಸೆಯುತ್ತಾರೆ. ಈ ರಸ್ತೆ ಬಂದ್ ಮಾಡಿಸಬೇಕು.
    ನಾಗರಾಜ್ ಸರ್ಕಾರಿ ಕಾಲೇಜು ಪ್ರಾಚಾರ್ಯ

    ಹುಡುಗರ ಅಸಭ್ಯ ವರ್ತನೆಗೆ ಪೊಲೀಸರು ಕಡಿವಾಣ ಹಾಕಿದರೆ ಇಲ್ಲಿ ಓದುತ್ತಿರುವ ಬಾಲಕಿಯರಿಗೆ ಸೂಕ್ತ ರಕ್ಷಣೆ ಸಿಗುತ್ತದೆ.
    ವಿಜಯ್ ಕುಮಾರ್ ಪಾಲಕ

    ಬೈ ಕ್ ಚಲಾಯಿಸುವ ಹುಡುಗರು ಕರ್ಕಶ ಶಬ್ದ ಮಾಡುತ್ತ ಕಿರಿಕಿರಿ ಮಾಡುತ್ತಾರೆ. ಕೆಲವೊಮ್ಮೆ ಬಾಟಲಿಗಳನ್ನು ಬಿಸಾಕುತ್ತಾರೆ. ಅನುಚಿತ ವರ್ತನೆ ದಿನೇದಿನೆ ಹೆಚ್ಚಾಗುತ್ತಿದೆ.
    ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts