More

    ಬೆಂಗಳೂರಿನ ಕಸಕ್ಕೆ ಹೊಸಕೋಟೆ ತಿಪ್ಪೆ!

    ಆರೋಗ್ಯ, ಪರಿಸರ, ಕೃಷಿ, ಅಂತರ್ಜಲಕ್ಕೆ ಕುತ್ತು

    ಮಂಜುನಾಥ ಎಸ್ ಸಿ ಹೊಸಕೋಟೆ
    ಸಿಲಿಕಾನ್ ವ್ಯಾಲಿ, ಗಾರ್ಡನ್ ಸಿಟಿ, ವಿಶ್ವದಲ್ಲಿ ಐಟಿ ಬಿಟಿ ತಂತ್ರಜ್ಞಾನದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು ಎಂಬ ಖ್ಯಾತಿ ಪಡೆದಿದ್ದು, ಪಕ್ಕದ ಕೂಗಳತೆಯಲ್ಲಿರುವ ಹೊಸಕೋಟೆ ನಗರ ಮಾತ್ರ ಬೆಂಗಳೂರಿನ ಕಸಕ್ಕೆ ತಿಪ್ಪೆಯಾಗಿ ಮಾರ್ಪಡುತ್ತಿದೆ.
    ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್, ುಡ್‌ಕಾರ್ನರ್, ಅಪಾರ್ಟ್‌ಮೆಂಟ್, ಆಸ್ಪತ್ರೆ ಸೇರಿ ಬೆಂಗಳೂರಿನ ಹಲವೆಡೆಯಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಹೊಸಕೋಟೆ ತಾಲೂಕಿನ ನಂದಗುಡಿ, ಸೂಲಿಬೆಲೆ ಹೋಬಳಿ ಭಾಗದ ಹಲವು ಗ್ರಾಮಗಳಲ್ಲಿ ಬೆಂಗಳೂರಿನ ತ್ಯಾಜ್ಯ ವಿಂಗಡಣೆ, ವಿಲೇವಾರಿ ಹಾಗೂ ಪ್ರಯೋಜನಕ್ಕೆ ಬಾರದ ತ್ಯಾಜ್ಯವನ್ನು ಸುಡುವುದು ನಡೆಯುತ್ತಿದೆ.
    ನಗರದ ಹೊರವಲಯದ ದಂಡುಪಾಳ್ಯ ಸರ್ವೇ ನಂ.50ರಲ್ಲಿನ ಸುಮಾರು 5 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅಕ್ರಮವಾಗಿ ಕಸ ವಿಲೇವಾರಿ ಘಟಕ ಕಾರ್ಯ ನಿರ್ವಹಿಸುತಿದ್ದು, ಅಕ್ಕ ಪಕ್ಕದ ಪ್ರದೇಶ ಕಲುಷಿತವಾಗುತ್ತಿದೆ.
    ಹೊಸಕೋಟೆ ಬೆಂಗಳೂರಿಗೆ ಅತ್ಯಂತ ಹತ್ತಿರದ ತಾಲೂಕಾಗಿದ್ದು, ರಾಷ್ಟ್ರೀಯ ಹೆದ್ದಾರಿ-75ರ ಮೂಲಕ ತಮಿಳುನಾಡು ಹಾಗೂ ಆಂದ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾಗಿದೆ.
    ಸಮಸ್ಯೆಗಳು ಕಸ ಸಂಗ್ರಹ ವಿಲೇವಾರಿ ಮಾಡಿರುವ ಜಾಗದಲ್ಲಿ ಉತ್ಪತ್ತಿಯಾಗುವ ಸ್ಲರಿ (ಕೊಳೆತ ತ್ಯಾಜ್ಯದಿಂದ ಹೊರಬರುವ ದ್ರವ), ಪ್ರಯೋಜನಕ್ಕೆ ಬಾರದ ತ್ಯಾಜ್ಯಕ್ಕೆ ಬೆಂಕಿಯಿಟ್ಟು ಅದರಿಂದ ಬರುವ ಹೊಗೆ, ಕೊಳೆತ ಕಸದ ದುರ್ವಾಸನೆ, ಸ್ಥಳಿಯ ಪರಿಸರದ ಮೇಲೆ ಹಾಗೂ ಈ ಭಾಗದ ಜನರಿಗೆ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

    ಅಕ್ರಮಕ್ಕೆ ಹಣದ ದಾಹ ಕಾರಣ
    ಕಸ ವಿಲೇವಾರಿ ಘಟಕಗಳನ್ನು ಜನಸಾಂದ್ರತೆ ಕಡಿಮೆ ಇರುವ ಪ್ರದೇಶದಲ್ಲಿ ಖಾಸಗಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಪಡೆಯುವ ಹೊರ ರಾಜ್ಯದವರು ಹೊರ ರಾಜ್ಯದ ಕಾರ್ಮಿಕರನ್ನೇ ಕಸ ವಿಂಗಡಣೆ ಮಾಡಲು ಬಳಸಿಕೊಳ್ಳುತ್ತಿದ್ದು, ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇಲ್ಲದಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸ್ಥಳಿಯ ಜಮೀನುದಾರರು ಜಾಗವನ್ನು ಗುತ್ತಿಗೆ ನೀಡಿ ಹಣ ಮಾಡಿಕೊಂಡು ಆರಾಮವಾಗಿದ್ದಾರೆ.

    ಕಸ ವಿಲೇವಾರಿ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದಿದ್ದು ಸ್ಥಳ ಪರಿಶೀಲನೆ ಮಾಡಲಾಗಿದೆ. ಅಕ್ರಮ ತೆರವಿಗೆ ಸೂಚಿಸಲಾಗಿದ್ದು, ಒಂದು ವಾರ ಕಾಲಾವಕಾಶ ಕೇಳಿದ್ದು ಇನ್ನು ಒಂದು ವಾರದಲ್ಲಿ ಖಾಲಿ ಮಾಡದಿದ್ದಲ್ಲಿ ಕಾನೂನು ಕ್ರಮ ಕೈಗೊಳಲಾಗುವುದು.
    ಆಂಜಿನಮ್ಮ, ಕಂದಾಯ ಅಧಿಕಾರಿ, ಕಸಬಾ ಹೋಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts