More

    ಅಪೌಷ್ಟಿಕ ನಿವಾರಣೆಗೆ ಅಭಿಯಾನ ಕೈಗೊಳ್ಳಿ; ಜೆಎಂಎಫ್ಸಿ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರ್ಬಾರೆ ಸಲಹೆ

    ಗಂಗಾವತಿ: ಅಪೌಷ್ಟಿಕ ನಿವಾರಣೆಗೆ ಸಂಘಟನೆಗಳು ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಜೆಎಂಎಫ್ಸಿ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರ್ಬಾರೆ ಹೇಳಿದರು.

    ವಿಶ್ವ ಪೌಷ್ಟಿಕ ದಿನಾಚರಣೆ ನಿಮಿತ್ತ ನಗರದ ಇಸ್ಲಾಂಪುರದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ತಾಲೂಕು ಕಾನೂನೂ ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗುರುವಾರ ಏರ್ಪಡಿಸಿದ್ದ ಕಾನೂನು ಅರಿವು, ನೆರವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದರಿಂದ ಹುಟ್ಟುವ ಮಕ್ಕಳ ಆರೋಗ್ಯಕ್ಕೆ ಅನುಕೂಲವಾಗಲಿದೆ. ಗರ್ಭ ಧರಿಸಿದ ನಂತರ ತೂಕ ಹೆಚ್ಚದಂತೆ ನೋಡಿಕೊಳ್ಳಬೇಕು. ಅಪೌಷ್ಟಿಕ ನಿವಾರಣೆಗೆ ಇಲಾಖೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮರ್ಪಕ ಅನುಷ್ಠಾನಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸಬೇಕು ಎಂದರು.

    ಸಹಾಯಕ ಸರ್ಕಾರಿ ಅಭಿಯೋಜಕ ಕರುಣಾಕರಡ್ಡಿ, ಸಂಘದ ಉಪಾಧ್ಯಕ್ಷ ಪರಸಪ್ಪ ನಾಯಕ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಸದಸ್ಯರಾದ ಮುರ್ತುಜಾ ಭಾವಿಕಟ್ಟಿ, ಸೌಭಾಗ್ಯಲಕ್ಷ್ಮೀ, ಟಿ.ಮಂಜುನಾಥ, ಸಿಡಿಪಿಒ ಮೇಲ್ವಿಚಾರಕಿಯರಾದ ಶರಣಮ್ಮ ನಾಲ್ವಾಡ್, ವಿದ್ಯಾವತಿ ಕುಲ್ಕರ್ಣಿ, ಸುಜಾತಾ ಹಾದಿನೂರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts