More

    ಕ್ರಿಮಿನಾಶಕ ಮಾರಾಟ ಒಂದೇ ಕಾಯಕವಲ್ಲ – ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿಕೆ

    ಗಂಗಾವತಿ: ರೈತರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಕೃಷಿ ಪರಿಕರ ಮಾರಾಟಗಾರರು ಕೃಷಿ ಸಂಬಂಧಿತ ಮಾಹಿತಿಗಳನ್ನು ಇಲಾಖೆ ಮೂಲಕ ಪಡೆದುಕೊಳ್ಳುವಂತೆ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಸಲಹೆ ನೀಡಿದರು.

    ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹೈದ್ರಾಬಾದ್ ಮ್ಯಾನೇಜ್, ಧಾರವಾಡ ಕೃಷಿ ವಿವಿಯ ಸಮೇತಿ, ರಾಯಚೂರು ಕೃಷಿ ವಿವಿ, ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆ ಸಹಯೊಗದೊಂದಿಗೆ ಭಾನುವಾರ ಹಮ್ಮಿಕೊಂಡ ಕೃಷಿ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ಕೋರ್ಸ್‌ಅನ್ನು ಉದ್ಘಾಟಿಸಿ ಮಾತನಾಡಿದರು. ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟ ಒಂದೇ ಕಾಯಕವಲ್ಲ, ಆಯಾ ಮಣ್ಣು, ನೀರು ಮತ್ತು ವಾತಾವರಣಕ್ಕೆ ತಕ್ಕಂತೆ ಬೆಳೆಯಬೇಕಾದ ಕೃಷಿ ಜ್ಞಾನ ಪಡೆಯಬೇಕಿದೆ. ಯೋಜನೆಗಳು ಸರ್ಕಾರ ರೂಪಿಸಿದರೆ, ಅನುಷ್ಠಾನದ ಬಹುಪಾಲು ಮಾರಾಟಗಾರರ ಮೇಲಿದೆ. ಉತ್ತಮ ಬೆಲೆ ದೊರೆಯಲು ಸಾವಯವ ಕೃಷಿ ಪದ್ಧತಿಯತ್ತ ಗಮನಹರಿಸಬೇಕಿದ್ದು, ರೈತರಲ್ಲಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

    ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೃಷಿ ಸಂಬಂಧಿತ ಯೋಜನೆಗಳ ಅನುಷ್ಠಾನದಲ್ಲಿ ಶೇ. 35 ಪಾಲು ಮಾರಾಟಗಾರರ ಮೇಲಿದೆ. ಇಲಾಖೆ ತರಬೇತಿ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಬೇಕಿದ್ದು, ಕೃಷಿ ಡಿಪ್ಲೊಮಾ ಪಡೆಯುವ ಮೂಲಕ ಕೃಷಿ ಬೆಳವಣಿಗೆಗೆ ನೆರವಾಗುವಂತೆ ಸಲಹೆ ನೀಡಿದರು.

    ಧಾರವಾಡ ಕೃಷಿ ವಿವಿ ನೋಡಲ್ ಅಧಿಕಾರಿ ಡಾ.ಎಂ.ಗೋಪಾಲ, ಕೃಷಿ ತಂತ್ರಜ್ಞರ ಸಂಸ್ಥೆ ಸದಸ್ಯ ವೀರಣ್ಣ ಕಮತರ್ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಪರಣ್ಣ ಮುನವಳ್ಳಿ, ರಾಯಚೂರು ಕೃಷಿ ವಿವಿ ಸಂಸ್ಥಾಪನೆ ಸದಸ್ಯರಾದ ಜಿ.ಶ್ರೀಧರ್, ಮಹಾಂತೇಶ ಪಾಟೀಲ್, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎಂ.ಬಿ.ಪಾಟೀಲ್, ಪ್ರೊ.ವೀರಭದ್ರಯ್ಯ, ಜಂಟಿ ಕೃಷಿ ನಿರ್ದೇಶಕ ಶಿವಕುಮಾರ, ಕೃಷಿ ಕಾಲೇಜು ವಿಶೇಷ ಅಧಿಕಾರಿ ಡಾ. ಬಿ.ಜಿ.ಮಸ್ತಾನರೆಡ್ಡಿ, ಕೆವಿಕೆ ಮುಖ್ಯಸ್ಥ ಡಾ.ಎಂ.ವಿ.ರವಿ, ತಜ್ಞರಾದ ಡಾ. ಜಿ.ಈಶ್ವರಪ್ಪ, ಆರ್.ರಾಮಮೂರ್ತಿ, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಪಾದಪ್ಪ, ಖಜಾಂಚಿ ಜಂಬಣ್ಣ ಐಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts