More

    ಉದ್ಯೋಗ ಖಾತ್ರಿಯಡಿ ಕೆಲಸ ನೀಡಿ; ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಆಗ್ರಹ

    ಗಂಗಾವತಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಸದಸ್ಯರು ನಗರದ ತಾಪಂ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಬುಧವಾರ ಆರಂಭಿಸಿದರು.

    ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಮಿಕರ ಸಂಘದ ಸಹಯೋಗದೊಂದಿಗೆ ಧರಣಿ ಆರಂಭಿಸಿದ್ದಾರೆ. ನೇತೃತ್ವವಹಿಸಿರುವ ಎಐಟಿಯುಸಿ ತಾಲೂಕು ಸಂಚಾಲಕ ಎ.ಎಲ್.ತಿಮ್ಮಣ್ಣ ಮಾತನಾಡಿ, ಕರೊನಾ ಮುಂಜಾಗ್ರತೆ ಹಿನ್ನೆಲೆಯಲ್ಲಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದು, ಜೀವನ ನಿರ್ವಹಣೆ ತೊಂದರೆಯಾಗಿದೆ. ಇತ್ತೀಚೆಗೆ ತಾಪಂ ಅಧಿಕಾರಿಗಳ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಕೆಲಸ ನೀಡುವ ಭರವಸೆ ನೀಡಿದ್ದರೂ ಇದುವರೆಗೂ ಕೆಲಸ ಸಿಕ್ಕಿಲ್ಲ. ಕೆಲಸ ನೀಡಿ ಇಲ್ಲವೇ ಗುಳೆ ಹೋಗಲು ಪರವಾನಗಿ ನೀಡಬೇಕು. ಕೆಲಸದೊಂದಿಗೆ ಪ್ರಯಾಣ ಭತ್ಯೆ ನೀಡುವ ವ್ಯವಸ್ಥೆಯಾಗಬೇಕಿದ್ದು, ಲಿಖಿತ ಭರವಸೆ ಸಿಗುವರಿಗೂ ಹೋರಾಟ ಮುಂದುವರಿಸಲಾಗುವುದು ಎಂದರು.

    ಪದಾಧಿಕಾರಿಗಳಾದ ಎ.ಹುಲುಗಪ್ಪ, ಎಸ್.ಕನಕರಾಯ, ಯಮನೂರ, ಮುತ್ತಣ್ಣ, ಸೋಮಮ್ಮ, ಶೇಖಮ್ಮ, ಗಂಗಮ್ಮ, ಬಸವರಾಜ, ಯಂಕೋಬ, ಪಂಪಾಪತಿ, ಹನಮೇಶ ಸೇರಿ ಚಿಕ್ಕಜಂತಕಲ್, ಹೇರೂರು, ನವಲಿ, ಸುಳೇಕಲ್, ವಡ್ಡರಹಟ್ಟಿ, ಸಣಾಪುರ, ಯರಡೋಣಾ, ಚಿಕ್ಕಬೆಣಕಲ್, ಚಿಕ್ಕಡಂಕನಕಲ್ ಕಾರ್ಮಿಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts