More

    ನ್ಯಾ.ನಾಗಮೋಹನದಾಸ್ ವರದಿ ಜಾರಿಗೆ ಮೇ 20ರಂದು ಪ್ರತಿಭಟನೆ; ಎಸ್ಸಿ, ಎಸ್ಟಿ ಸಂಘದ ತಾಲೂಕು ಸಂಚಾಲಕ ವೀರಭದ್ರಪ್ಪ ನಾಯಕ ಮಾಹಿತಿ

    ಗಂಗಾವತಿ: ಜನಸಂಖ್ಯೆ ಅನುಗುಣ ಮೀಸಲು ಪ್ರಮಾಣ ಹೆಚ್ಚಿಸಬೇಕಿದ್ದು, ಸರ್ಕಾರ ನ್ಯಾ.ನಾಗಮೋಹನದಾಸ್ ವರದಿ ಜಾರಿಗೊಳಿಸಬೇಕು ಎಂದು ಅಖಿಲ ಕರ್ನಾಟಕ ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂಘದ ತಾಲೂಕು ಸಂಚಾಲಕ ಡಬ್ಲುೃ.ವೀರಭದ್ರಪ್ಪ ನಾಯಕ ಹೇಳಿದರು.

    ನಗರದ ಸರ್ಕೀಟ್ ಹೌಸ್‌ನಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು. ಎಸ್ಸಿ ಸಮುದಾಯಕ್ಕೆ ಶೇ.15 ರಿಂದ ಶೇ.17, ಎಸ್ಟಿಗೆ ಶೇ.3 ರಿಂದ ಶೇ.7.5 ಹೆಚ್ಚಿಸಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಜನಸಂಖ್ಯೆ ಅನುಗುಣ ಮೀಸಲು ನೀಡುವಂತೆ ನ್ಯಾ.ನಾಗಮಮೋಹನದಾಸ್ ವರದಿ ಯಥಾವತ್ತು ಜಾರಿಗೊಳಿಸಬೇಕು. ಮೀಸಲು ದೊರೆತರೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಲಿದೆ. ಮೀಸಲಿಗಾಗಿ ವಾಲ್ಮೀಕಿ ಸಮುದಾಯದ ಪೀಠಾಧಿಪತಿಗಳ ನೇತೃತ್ವದಲ್ಲಿ ಕಳೆದ 100 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ಕಾಲವಕಾಶ ನೀಡುವಂತೆ ಕಾಲಹರಣ ಮಾಡುತ್ತಿದ್ದು, ತಕ್ಕ ಉತ್ತರ ನೀಡಲು ಸಂಘದಿಂದ ಮೇ 20ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

    ಸಹ ಸಂಚಾಲಕ ಮರಿಯಪ್ಪ ಕುಂಟೋಜಿ ಮಾತನಾಡಿ, ಮೀಸಲು ದೊರೆಯುವವರೆಗೂ ಹೋರಾಟ ಮುಂದುವರಿಯಲಿದ್ದು, ಪ್ರತಿ ಗ್ರಾಮದಿಂದಲೂ ಎರಡು ಸಮುದಾಯದ ಜನರು ಭಾಗವಹಿಸಲಿದ್ದಾರೆ. ಜನಪ್ರತಿನಿಧಿಗಳು, ಸಾಹಿತಿಗಳು, ಪ್ರಗತಿಪರರು ಸೇರಿ ವಿವಿಧ ಸಂಘಟನೆ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

    ನಗರಸಭೆ ಸದಸ್ಯ ರಮೇಶ ಚೌಡ್ಕಿ, ಸಮುದಾಯದ ಮುಖಂಡರಾದ ಜೋಗದ ನಾರಾಯಣಪ್ಪ ನಾಯಕ, ಹುಸೇನಪ್ಪ ಹಂಚಿನಾಳ್, ಜೋಗದ ಹನುಮಂತಪ್ಪ ನಾಯಕ, ಬಸವರಾಜ ಮ್ಯಾಗಳಮನಿ, ಹೊಸ್ಮಲಿ ಮಲ್ಲೇಶಪ್ಪ, ಚೌಡ್ಕಿ ಹನುಮಂತಪ್ಪ, ಹುಲಿಗೆಮ್ಮ ಹೊಸಳ್ಳಿ, ಟಿ.ಆಂಜನೇಯ, ಪಂಪಣ್ಣ ನಾಯಕ, ವಿರೂಪಾಕ್ಷಗೌಡ ನಾಯಕ, ಬಸಪ್ಪ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts