More

    ಲಾಕ್​ಡೌನ್​ನಿಂದ ಪರಿಶುದ್ಧದೆಡೆಗೆ ಗಂಗಾ ಜಲ: ಬೆಂಗಳೂರಿನಲ್ಲಿ 65 ರಷ್ಟು ವಾಯುಮಾಲಿನ್ಯ ಕಡಿತ!

    ನವದೆಹಲಿ: ಕರೊನಾ ಸೋಂಕನ್ನು ತಡೆಗಟ್ಟಲು ಭಾರತದಲ್ಲಿ ಹೇರಲಾಗಿರುವ ಲಾಕ್​ಡೌನ್​ನಿಂದಾಗಿ ಪವಿತ್ರ ಗಂಗಾ ನದಿಯ ನೀರಿನ ಗುಣಮಟ್ಟ ಕೊಂಚ ಸುಧಾರಿಸಿದೆ ಎಂದು ಬನಾರಸ್​ ಹಿಂದು ವಿಶ್ವವಿದ್ಯಾಲಯ(ಬಿಎಚ್​​ಯು)ದ ಪ್ರಾಧ್ಯಪಕರೊಬ್ಬರು ತಿಳಿಸಿದ್ದಾರೆ.

    ಡಾ. ಪಿ.ಕೆ.ಮಿಶ್ರಾ ಅವರು ಬಿಎಚ್​ಯುನಲ್ಲಿ ಕೆಮಿಕಲ್​ ಇಂಜಿನಿಯರಿಂಗ್​ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಇವರ ಪ್ರಕಾರ ಲಾಕ್​ಡೌನ್​ನಿಂದ ಇಂಡಸ್ಟ್ರಿಗಳು ಮುಚ್ಚಿರುವುದರಿಂದ ಗಂಗಾ ನದಿ ನೀರಿನ ಗುಣಮಟ್ಟದಲ್ಲಿ ಮಹತ್ವದ ಸುಧಾರಣೆಯಾಗಿದೆ ಎಂದು ತಿಳಿಸಿದ್ದಾರೆ.

    ಗಂಗಾ ನದಿ ಮಾಲಿನ್ಯದ ಹತ್ತನೇ ಒಂದು ಭಾಗ ಇಂಡಸ್ಟ್ರಿಯಿಂದಲೇ ಬರುತ್ತದೆ. ಸದ್ಯ ಗಂಗೆಯಲ್ಲಿ 40-50 ರಷ್ಟು ಸುಧಾರಣೆಯನ್ನು ನಾವೀಗ ಕಂಡಿದ್ದೇವೆ. ಇದೊಂದು ಮಹತ್ವದ ಬದಲಾವಣೆ ಎಂದು ಮಿಶ್ರಾ ಹೇಳಿದ್ದಾರೆ.

    ಕೇವಲ ಗಂಗಾ ನದಿ ಮಾತ್ರವಲ್ಲ ಕೆಲವು ತಿಂಗಳುಗಳ ಹಿಂದೆ ದೆಹಲಿಯಲ್ಲಿ ದಟ್ಟ ಹೊಗೆ ಆವರಿಸಿ, ಉಸಿರಾಡಲು ತೊಡಕಾಗುವಷ್ಟು ಮಾಲಿನ್ಯವಿತ್ತು. ಇದೀಗ ದೆಹಲಿಯಲ್ಲೂ ಸ್ಪಷ್ಟವಾದ ನೀಲಿ ಆಕಾಶ ಕಾಣುವ ಮೂಲಕ ಶುದ್ಧ ಗಾಳಿ ಬೀಸುತ್ತಿದೆ ಎನ್ನುತ್ತಾರೆ ಸಂಶೋಧಕರು.

    ಸಿಲಿಕಾನ್​ ಸಿಟಿ ಬೆಂಗಳೂರು ಟ್ರಾಫಿಕ್​ ಜಾಮ್​ನ ಪ್ರಮುಖ ನಗರ ಎಂದು ಕುಖ್ಯಾತಿಯನ್ನು ಪಡೆದಿದೆ. ಹೀಗಾಗಿ ಇಲ್ಲಿ ವಾಯುಮಾಲಿನ್ಯವು ಹೆಚ್ಚಾಗಿದ್ದು, ಇದೀಗ ಲಾಕ್​ಡೌನ್​ನಿಂದ ಗಾಳಿಯ ಗುಣಮಟ್ಟ ಸುಧಾರಿಸಿದೆ. ರಾಜ್ಯದ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಸದಸ್ಯ ಬಸವರಾಜ್​ ಪಾಟೀಲ್​ ಹೇಳುವ ಪ್ರಕಾರ ಶೇ 60-65 ರಷ್ಟು ಮಾಲಿನ್ಯ ಲಾಕ್​ಡೌನ್​ನಿಂಡ ಕಡಿಮೆಯಾಗಿದೆ. ಇದರಿಂದ ಜನರ ಪ್ರತಿರೋಧಕ ವ್ಯವಸ್ಥೆ(ಇಮ್ಯುನಿಟಿ ಸಿಸ್ಟಮ್​)ಯು ಸುಧಾರಿಸಲಿದೆ ಎನ್ನುತ್ತಾರೆ. (ಏಜೆನ್ಸೀಸ್​)

    ಮೂರು ತಿಂಗಳ ಇಎಂಐ ಪಾವತಿಗೆ ವಿನಾಯಿತಿ, ಸೈಬರ್​ ಕಳ್ಳರಿಗೆ ಹಣ ದೋಚಲು ಅವಕಾಶ

    1,279 ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏ.9 ಕೊನೆಯ ದಿನ: ಅವಧಿ ವಿಸ್ತರಿಸುತ್ತಾ ಕೆಪಿಎಸ್​ಸಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts