More

    ಗಾಂಧಿಜೀ, ಶಾಸ್ತ್ರಿ ಜೀವನ ಮಾದರಿ

    ಶೃಂಗೇರಿ: ನಮಗೆ ಉತ್ತಮ ಸ್ನೇಹಿತ ಪುಸ್ತಕಗಳು. ಜ್ಞಾನ ಸಂಪಾದನೆಗೆ ನಿರಂತರ ಅಧ್ಯಯನ ಅಗತ್ಯ ಎಂದು ನಿವೃತ್ತ ಕನ್ನಡ ಶಿಕ್ಷಕ ಜನಾರ್ದನ ಮಂಡಗಾರು ತಿಳಿಸಿದರು.
    ಅವರು ಜೆಸಿಬಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ನೈತಿಕ ಆಧ್ಯಾತ್ಮಿಕ ವೇದಿಕೆ ಸೋಮವಾರ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸಿ ಅವರ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
    ಗಾಂಧಿಜೀ ಅವರು ತಿಳಿಸಿದಂತೆ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡರೆ, ಜಗತ್ತಿನ ಯಾವ ಮೂಲೆಯಲ್ಲಿಯಾದರೂ ನೆಮ್ಮದಿಯಾಗಿ ಜೀವಿಸಬಹುದು. ಗಾಂಧಿ ಬಾಲ್ಯದಲ್ಲಿಯೇ ಅವರ ಮಾತೃಶ್ರೀ ಅವರಿಂದ, ಶ್ರವಣಕುಮಾರ, ಹರೀಶಚಂದ್ರರ ಜೀವನ ಕಥೆಯಿಂದ ಪ್ರೇರೇಪಣೆ ಪಡೆದಿದ್ದರು. ಅತ್ಯಂತ ಸರಳವಾಗಿ ಜೀವಿಸಿ ಬೇರೆಯವರಿಗೆ ಮಾದರಿಯಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಕಾಲ್ನಡಿಗೆಯಲ್ಲಿಯೇ ದೆಹಲಿಯಿಂದ ಕನ್ಯಾಕುಮಾರಿವರೆಗೆ ಸಂಚರಿಸಿ ಎಲ್ಲಾ ಜನರನ್ನು ಒಗ್ಗೂಡಿಸಿದರು. ಮಾತು-ಕೃತಿ-ಸ್ಮತಿಗಳಲ್ಲಿ ಆಡಿದಂತೆ ಜೀವನ ನಡೆಸಿ ತೋರಿಸಿದರು ಎಂದರು.
    ಡಾ. ಎಂ.ಸ್ವಾಮಿ ಮಾತನಾಡಿ, ಮಹಾತ್ಮ ಗಾಂಧಿಜೀ ಬಾಹ್ಯ ಸ್ವಚ್ಛತೆಯ ಜತೆಗೆ ಆತ್ಮ ಸ್ವಚ್ಛತೆ ಮುಖ್ಯ ಎಂದು ತಿಳಿಸಿದವರು. ಸತ್ಯ, ಅಹಿಂಸೆ, ಸರ್ವೋದಯ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಗಾಂಧಿಜೀ ಅದನ್ನು ಇತರರು ಪಾಲಿಸುವಂತೆ ಮಾಡಿದರು. ಅವರ ಜೀವನ ಇಂದು ಸಂಶೋಧನೆಗೆ ಪ್ರೇರಣೆ ನೀಡುತ್ತಿದೆ. ವಿಶ್ವದಾದ್ಯಂತ ಅವರ ಬಗ್ಗೆ ಅನೇಕರು ಸಂಶೋಧನೆಯಲ್ಲಿ ತೊಡಗಿರುವುದು ಅವರ ವ್ಯಕ್ತಿತ್ವಕ್ಕೆ ಸಂದ ಜಯವಾಗಿದೆ ಎಂದರು.
    ಆಡಂಬರ ಇಲ್ಲದ ಸರಳ ಪ್ರಧಾನಿ ಲಾಲ್‌ಬಹದ್ದೂರ್ ಶಾಸಿ ಬಾಡಿಗೆ ಮನೆಯಲ್ಲೇ ತಮ್ಮ ಜೀವನ ಕಳೆದವರು. ಕಡುಬಡತನವಿದ್ದರೂ ಅಧಿಕಾರ ಮತ್ತು ಸಂಪತ್ತಿಗಾಗಿ ಆಸೆ ಪಟ್ಟವರಲ್ಲ ಎಂದು ಶ್ಲಾಘಿಸಿದರು.
    ಕಾರ್ಯಕ್ರಮದಲ್ಲಿ ಎನ್‌ಎನ್‌ಎಸ್ ಕಾರ್ಯಕ್ರಮಾಧಿಕಾರಿ ಎ.ಜಿ.ಪ್ರಶಾಂತ್, ಸಂತೋಷ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರಕಾಶ್, ಪ್ರೊ. ವಿದ್ಯಾಧರ್, ಅಶ್ವಿನಿ, ಜ್ಯೋತಿ ಕಾಕತ್ಕರ್, ರಶ್ಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts